Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ರಾರಾಜಿಸಿದ ಕನ್ನಡ ಭಾವುಟ!

ತೀರ್ಥಹಳ್ಳಿಯಲ್ಲಿ ರಾರಾಜಿಸಿದ ಕನ್ನಡ ಭಾವುಟ!
– ಅಂಗಡಿ ಅಂಗಡಿಗೆ ಕನ್ನಡ ಭಾವುಟ ವಿತರಿಸಿದ ಕರವೇ
– ಇಂದು ಗೋಪಾಲಗೌಡ ರಂಗಮಂದಿರದಲ್ಲಿ ರಾಜ್ಯೋತ್ಸವ
– ಕನ್ನಡ ಡ್ಯಾನ್ಸ್ ಧಮಾಕಾ, ನಗೆ ನಾಟಕ: ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕನ್ನಡ ರಕ್ಷಣಾ ವೇದಿಕೆ ತೀರ್ಥಹಳ್ಳಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ನ.25ರ ಶನಿವಾರ ಸಂಜೆ 5:30ಕ್ಕೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಅಂಗಡಿ, ಕಚೇರಿಗಳಲ್ಲಿ ಕನ್ನಡ ಭಾವುಟ ರಾರಾಜಿಸುತ್ತಿದೆ. ಕರವೇ ಪ್ರಮುಖರು ತೀರ್ಥಹಳ್ಳಿ ಪಟ್ಟಣದಲ್ಲಿ ಕನ್ನಡ ಭಾವುಟವನ್ನು ಅಂಗಡಿ ಅಂಗಡಿಗಳಿಗೆ ಹಂಚಿದರು. ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ್ ಹೆಗ್ಡೆ, ಕರವೇ ಅಧ್ಯಕ್ಷರಾದ ಸುರೇಂದ್ರ ಯಡೂರು ಸೇರಿದಂತೆ 30ಕ್ಕೂ ಹೆಚ್ಚು ಕರವೇ ಕಾರ್ಯಕರ್ತರು ಪ್ರತಿ ಅಂಗಡಿಗೆ ಭಾವುಟ ಹಂಚಿ ರಸ್ತೆಯ ಇಕ್ಕೆಲಗಳಲ್ಲಿ ಭಾವುಟ ಹಾಕಿದ್ದಾರೆ.

ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ

ಸಂಜೆ 5:30ಕ್ಕೆ ಶುರುವಾಗುವ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಗಳಿಸಿದ ತಾಲೂಕಿನ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಇರುತ್ತದೆ. ಹಾಗೂ ತೀರ್ಥಹಳ್ಳಿಯ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಇವರಿಂದ ಡ್ಯಾನ್ಸ್ ಕಾರ್ಯಕ್ರಮ ನಂತರ ಶ್ರೀ ದುರ್ಗಾ ಕಲಾತಂಡ ಹಾರಾಡಿ ಬ್ರಹ್ಮಾವರ ಇವರಿಂದ “ಒಂದಲ್ಲ ಒಂದು ಸಮಸ್ಯೆ ” ಎನ್ನುವ ಕುಂದ ಕನ್ನಡದ ಹಾಸ್ಯಮಯ ನಗೆ ನಾಟಕ ನಡೆಯಲಿದೆ.

ಸರ್ವರಿಗೂ ಸ್ವಾಗತ
ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು
ಕರವೇ, ತೀರ್ಥಹಳ್ಳಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.