Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ರಂಗು!

ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ರಂಗು!
– ತೀರ್ಥಹಳ್ಳಿಯ ವಿವಿಧ ಕ್ಷೇತ್ರಗಳ 13 ಸಾಧಕರಿಗೆ ಗೌರವಾರ್ಪಣೆ
– ನ.29ರಂದು ಕನ್ನಡ ಹಬ್ಬಕ್ಕೆ ತೀರ್ಥಹಳ್ಳಿ ಸಜ್ಜು

NAMMUR EXPRESS NEWS
ತೀರ್ಥಹಳ್ಳಿ: ನವಂಬರ್ 29ರಂದು ಬೆಳಿಗ್ಗೆಯಿಂದ ತೀರ್ಥಹಳ್ಳಿ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ನಡೆಯಲಿದೆ. ಖ್ಯಾತ ಸಾಹಿತಿ ನವೀನ್ ಕುಮಾರ್ ಎಂ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಳೆಯೋಣ ಬನ್ನಿ ಕನ್ನಡ ತೇರು ಎಂಬ ಕಲ್ಪನೆಯೊಂದಿಗೆ ತೀರ್ಥಹಳ್ಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ. ಕೆ.ರಮೇಶ್ ಶೆಟ್ಟಿ ನೇತೃತ್ವದಲ್ಲಿ ಕಸಾಪ ತಂಡ ಹಗಲಿರುಳು ದುಡಿಯುತ್ತಿದ್ದಾರೆ.

ತೀರ್ಥಹಳ್ಳಿ ಸಾಧಕರಿಗೆ ಸನ್ಮಾನದ ಗೌರವ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ 13 ಮಂದಿಯನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಪ್ರಗತಿಪರ ಕೃಷಿಕ ಕೂಳೂರು ಸತ್ಯನಾರಾಯರಾವ್, ಆರಗದ ಸಮಾಜ ಸೇವಕಿ ನೈಜಲ ಪಟಮಕ್ಕಿ ರತ್ನಾಕರ್, ಪರಿಸರವಾದಿ ತೀರ್ಥಹಳ್ಳಿ ಕೆ ಜಿ.ಶ್ರೀಧರ್, ಇಂಡಸ್ ಹರ್ಬ್ ಆಡಳಿತ ನಿರ್ದೇಶಕ ರವೀಂದ್ರ ತುಂಬರಮನೆ, ಸಮಾಜ ಸೇವಕಿ ಸುಚರಿತ ಚಂದ್ರ, ವಿಟೆಕ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಶ್ವನಾಥ ಕುಂಟುವಳ್ಳಿ, ಉಡುಪಿ ಹೈಟೆಕ್‌ ಆಸ್ಪತ್ರೆಯ ಕ್ರೀಡಾಪಟು ಹಾಗೂ ಕ್ರೀಡಾ ಪೋಷಕ ಅಬ್ದುಲ್ ಕಲಾಂ ಅಜಾದ್, ಖ್ಯಾತ ನರರೋಗ ತಜ್ಞರಾದ ಡಾ.ವಿನೋದ್ ಕುಮಾರ್, ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾದ ಗಸ್ತು ವನಪಾಲಕ ರಾಮಚಂದ್ರ (ಅಣ್ಣಯ್ಯ), ಸಮಾಜ ಸೇವಕ ಕೋಣಂದೂರು ಅಶೋಕ್ ಕೆ.ಇ, ಕಸಾಪ ಸದಸ್ಯರು, ಕೃಷಿಕ ಸರುವಿನಕೊಪ್ಪ ಸತೀಶ್, ರಾಷ್ಟ್ರೀಯ ವಾಲಿಬಾಲ್ ಆಟಗಾರ ಆರ್ಯನ್ ಅನಿಲ್ ಕುರುವಳ್ಳಿ, ರಾಷ್ಟ್ರೀಯ ಚೆಸ್ ಆಟಗಾರ್ತಿ ಸಾನ್ವಿಕ್ ಇವರನ್ನು ಸನ್ಮಾನಿಸಲಾಗುವುದು.

ಸರ್ವರಿಗೂ ಸ್ವಾಗತ

ಅಧ್ಯಕ್ಷರು, ಪದಾಧಿಕಾರಿಗಳು,ಸದಸ್ಯರು
ಕನ್ನಡ ಸಾಹಿತ್ಯ ಪರಿಷತ್, ತೀರ್ಥಹಳ್ಳಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.