Categories
ತೀರ್ಥಹಳ್ಳಿ

ಕಾಂತಾರ ಸಿನಿಮಾ ಕಲಾವಿದ ದುರ್ಮರಣ!

ಕಾಂತಾರ ಸಿನಿಮಾ ಕಲಾವಿದ ದುರ್ಮರಣ!
– ಆಗುಂಬೆ ಹೋಂ ಸ್ಟೇಯಲ್ಲಿ ತಂಗಿದ್ದ ವೇಳೆ ಹಾರ್ಟ್ ಅಟ್ಯಾಕ್
– ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಸಾವು
– ಮಲೆನಾಡ ಭಾಗದಲ್ಲಿ ನಡೆಯುತ್ತಿದೆ ಶೂಟಿಂಗ್!

NAMMUR EXPRESS NEWS
ತೀರ್ಥಹಳ್ಳಿ : ಕಾಂತಾರ ಚಲನಚಿತ್ರದ ಕಲಾವಿದರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತೀರ್ಥಹಳ್ಳಿಯ ಆಗುಂಬೆ ಬಳಿ ನಡೆದಿದೆ. ಈ ಮೂಲಕ ಕಾಂತಾರ ಸಿನಿಮಾ ಶೂಟಿಂಗ್ ವೇಳೆ ಮೂವರು ಕಲಾವಿದರು ಸಾವನ್ನು ಕಂಡಂತಾಗಿದೆ.
ವಿಜು ವಿ. ಕೆ ಎಂಬ ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ಕಾಂತಾರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಹೋಂ ಸ್ಟೇ ಒಂದರಲ್ಲಿ ಇದ್ದರು. ಅವರಿಗೆ ಬುಧುವಾರ ರಾತ್ರಿ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಮೃತ ದೇಹ ಇರಿಸಲಾಗಿದೆ. ಕೇರಳದಿಂದ ಕುಟುಂಬಸ್ಥರು ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಲೆನಾಡ ಭಾಗದಲ್ಲಿ ನಡೆಯುತ್ತಿದೆ ಶೂಟಿಂಗ್!

ಮಲೆನಾಡ ಯಡೂರು ಭಾಗದ ಗಡಿಯಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ನೂರಾರು ಕುದುರೆಗಳು ಇವೆ. ಶೂಟಿಂಗ್ ಸ್ಥಳಕ್ಕೆ ಯಾರನ್ನು ಕೂಡ ಬಿಡುತ್ತಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.