ಆಪರೇಷನ್ ಸಿಂಧೂರ್‌ನಲ್ಲಿ ಭಾಗವಹಿಸಿದ್ದ ಕಳಸದ ಯೋಧನಿಗೆ ಭರ್ಜರಿ ಸ್ವಾಗತ
* ಆಪರೇಷನ್ ಸಿಂಧೂರ್‌ನಲ್ಲಿ ಭಾಗವಹಿಸಿ ಗಾಯಗೊಂಡಿದ್ದ ಯೋಧ
* ಚಿಕಿತ್ಸೆ ಪಡೆದು ರಜೆ ಮೇಲೆ ಸ್ವಗ್ರಾಮಕ್ಕೆ ಮರಳಿದ್ದ ಯೋಧ
NAMMMUR EXPRESS NEWS
ಕಳಸ: ಪಾಕ್ ವಿರುದ್ಧ ಭಾರತ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರದಲ್ಲಿ ಗಾಯಗೊಂಡು, ರಜೆಯ ಮೇಲೆ ಹುಟ್ಟೂರು ಕಳಸದ ಹಳ್ಳುವಳ್ಳಿಗೆ ಆಗಮಿಸಿದ ವೀರ ಯೋಧನನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಕಳಸ ತಾಲೂಕಿನ ಹಳ್ಳುವಳ್ಳಿಯ ಯೋಧ ರಾಜಪ್ಪ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ, ಗಾಯಗೊಂಡಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಜೂ.11 ವೈದ್ಯಕೀಯ ರಜೆಯ ಮೇರೆಗೆ ಹುಟ್ಟೂರಿಗೆ ಆಗಮಿಸಿದ್ದಾರೆ. ಅವರು ಊರಿಗೆ ಬಂದಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅವರಿಗೆ ಅದ್ದೂರಿ ಸ್ವಾಗತಿಸಿ, ಸನ್ಮಾನ ಮಾಡಿದ್ದಾರೆ.
ಸ್ಥಳೀಯರು ಕಳಸ ಪಟ್ಟಣದಲ್ಲಿ ಯೋಧನನ್ನ ಮೆರವಣಿಗೆಯಲ್ಲಿ ಕರೆದೊಯ್ದಿದ್ದಾರೆ. ರಾಜಪ್ಪ ಅವರು ಬಿಎಸ್‍ಎಫ್‍ನಲ್ಲಿ (BSF) ಕಾರ್ಯನಿರ್ವಹಿಸುತ್ತಿದ್ದಾರೆ.
