Categories
ತೀರ್ಥಹಳ್ಳಿ

ಆರಗ ವಿರುದ್ಧ ಕಿಮ್ಮನೆ ಕಿಡಿ… ಶುರುವಾಯ್ತು ಮಾತಿನ ಯುದ್ಧ!

ಆರಗ ವಿರುದ್ಧ ಕಿಮ್ಮನೆ ಕಿಡಿ… ಶುರುವಾಯ್ತು ಮಾತಿನ ಯುದ್ಧ!
– ಶಾಸಕರೇ ಅಧಿಕಾರಿಗಳ ಮೇಲಿನ ದರ್ಪ ನಿಲ್ಲಿಸಿ: ಕಿಮ್ಮನೆ
– ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆಯ ಎಚ್ಚರಿಕೆ
– ಸರ್ಕಾರಿ ನೌಕರರನ್ನು ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡಿಸ್ತಾರೆ

NAMMMUR EXPRESS NEWS
ತೀರ್ಥಹಳ್ಳಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ಸಿದ್ದಾಂತ ಹಾಗೂ ನಿಲುವುಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಶಾಸಕರಿಂದ ತೊಂದರೆ ಆಗುತ್ತಿದೆ ಎಂದು ದೂರಿದ್ದಾರೆ
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಾಸಕರು ಅಧಿಕಾರಿಗಳ ಮೇಲೆ ದರ್ಪ ತೋರಿಸಿದ್ದು,ದೂರವಾಣಿ ಮೂಲಕ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಅಧಿಕಾರಿಗಳನ್ನು ಬಾಯಿಗೆ ಬಂದಂತೆ ಬೈದು ತಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ಕೆಲಸ ಆಗುವಂತೆ ನೋಡಿಕೊಳ್ಳುತ್ತಾರೆ. ಈ ಪ್ರವೃತ್ತಿಯನ್ನು ಶಾಸಕರು ಕೂಡಲೇ ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸಿದ್ಧಾಂತ ಹಾಗೂ ಕೆಲ ನಿಲುವುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕಿಮ್ಮನೆ ರತ್ನಾಕರ್, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿ.ಜೆ.ಪಿ. ಸರ್ಕಾರದ ಆಡಳಿತ ಮತ್ತು ಆರ್ಥಿಕ ನೀತಿ, ಶ್ರೀಮಂತರನ್ನು ಅತೀ ಶ್ರೀಮಂತರನ್ನು ಮಾಡುವ ಮತ್ತು ಮಧ್ಯಮ ವರ್ಗದವರನ್ನು ಬಡವರನ್ನಾಗಿ ಮಾಡಿ, ಬಡವರನ್ನು ಕಡುಬಡವರನ್ನಾಗಿಸಿ ಮತ್ತು ನಿರ್ಗತಿಕರನ್ನಾಗಿ ಮಾಡುವ ನೀತಿಯನ್ನು ಕಾಂಗ್ರೆಸ್ ವಿರೋದಿಸುತ್ತದೆ.
ಕಾಂಗ್ರೆಸ್ ಸರ್ವರನ್ನು ಎಲ್ಲ ಜಾತಿ, ಧರ್ಮದವರನ್ನು ಒಳಗೊಳ್ಳುವ, ಶಾಂತಿ ನೆಮ್ಮದಿಯ, ಅಹಿಂಸೆಯ, ಜಾತ್ಯಾತೀತ, ಬಹುತ್ವದ ಭಾರತವನ್ನು ಕಟ್ಟುವ ಮತ್ತು ದೇಶದಲ್ಲಿನ ಸಾಮಾಜಿಕ ಅಸಮಾನತೆ ಮತ್ತು ಶೈಕ್ಷಣಿಕ ಅಸಮಾನತೆಯನ್ನು ತೆಗೆದು ಹಾಕಿ, ಸಹಬಾಳ್ವೆಯ ವಾತಾವರಣವನ್ನು ನಿರ್ಮಿಸುವ, ಕಾಂಗ್ರೆಸ್ ಪಕ್ಷದ ಮೂಲತತ್ವ ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ನಾರಾಯಣ ಗುರು, ಜವಹಾರ್‌ಲಾಲ್ ನೆಹರು ಪ್ರತಿಪಾದನೆ ಮಾಡಿದ, ಸಮಾಜವಾದಿ ಚಿಂತನೆಯ, ಜಾತ್ಯಾತೀತ ನಿಲುವಿನ, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಬದ್ಧ ಆಶಯಗಳಿಗೆ ಪೂರಕ ನೀತಿಯನ್ನು ಹೊಂದಿದೆ. ಬಿ.ಜೆ.ಪಿ. ಮತ್ತು ಆರ್.ಎಸ್.ಎಸ್. ಪರಿವಾರದವರು ಮೇಲ್ಕಂಡ ಸಂವಿಧಾನ ಆಶಯಗಳಿಗೆ ವಿರುದ್ಧವಾದ ನಿಲುವನ್ನು ಹೊಂದಿದ್ದು, ಇಂದಿನ ಬಿ.ಜೆ.ಪಿ. ಕೇಂದ್ರ ಸರ್ಕಾರ, ಹೆಗ್ಡೆವಾರ, ಗೋಳ್ಳಾವಳ್ಳರ್, ಸಾವರ್ಕರ್ ಗಾಂಧಿಹಂತಕ ನಾಥರಾಮ ಗೋಡೈ ಬೆಂಬಲಿತ ಚಿಂತನ ಗಂಗ, ಕೃತಿ ಸಂಘ ರೂಪದರ್ಶನದ, ಸಂವಿಧಾನವನ್ನು, ತಂತ್ರಗಾರಿಕೆಯ ಹಿಂಸೆಯನ್ನು ಪ್ರತಿಪಾದಿಸುವ ವಿಚಾರ ಧಾರೆಯನ್ನು ಅನುಷ್ಠಾನ ಗೊಳಿಸುವ ಕೇಂದ್ರದ ಬಿ.ಜೆ.ಪಿ. ಸರ್ಕಾರವನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದರು.
ಬಿ.ಜೆ.ಪಿ.ಯ ಮೇಲ್ಕಂಡ ನಿಲುವುಗಳ ವಿರುದ್ಧ ನಿರಂತರ ಹೋರಾಟವನ್ನು ಸದಾ ಮುಂದುವರೆಯುತ್ತದೆ. ಬಿ.ಜೆ.ಪಿ. ಸಂವಿಧಾನ ಒಪ್ಪಿಕೊಳ್ಳಬೇಕು ಇಲ್ಲವೆ ಚಿಂತನ ಗಂಗಾ ಮತ್ತು ಕೃತಿ ಸಂಘ ರೂಪದರ್ಶನ ಒಪ್ಪಿಕೊಳ್ಳಬೇಕು. ದೇಶದ ಜನರನ್ನು ಗೂಳಿಯ ಹಿಂದೆ ಏನೋ ಸಿಗುತ್ತೆ ಎಂದು ಓಡುವ ನರಿಯನ್ನಾಗಿ ಮಾಡಬಾರದು. ಬಿ.ಜೆ.ಪಿ. ತನ್ನ ಅಂತರಂಗವನ್ನು ಬಹಿರಂಗಪಡಿಸಿ ಚರ್ಚಗೆ ಸಿದ್ಧರಾಗಬೇಕು. ಎಂದು ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಮುಡುಬ ರಾಘವೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರೆಹಮಾತ್ ಉಲ್ಲಾ ಅಸಾದಿ, ಗೀತಾ ರಮೇಶ್, ವಿಶ್ವನಾಥ್ ಶೆಟ್ಟಿ, ಅಮರ್ ನಾಥ್ ಶೆಟ್ಟಿ, ಡಾ.ಸುಂದರೇಶ್, ಮಂಜುಳಾ ನಾಗರಾಜ್, ಸುಶೀಲಾ ಶೆಟ್ಟಿ, ಶಬ್ನಮ್, ಶ್ರೇಯಸ್, ಮಾರ್ಟಿಸ್ ವಿಲಿಯಂ, ರತ್ನಾಕರ್ ಶೆಟ್ಟಿ ಪ್ರಮುಖರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.