Categories
ಬೆಳ್ತಂಗಡಿ

ಎಕ್ಸೆಲ್ ಸಮೂಹದಿಂದ ಸುಮಂತ್ ಕುಮಾ‌ರ್ ಜೈನ್ ಅವರಿಗೆ ಅಭಿನಂದನೆ

ಎಕ್ಸೆಲ್ ಸಮೂಹದಿಂದ ಸುಮಂತ್ ಕುಮಾ‌ರ್ ಜೈನ್ ಅವರಿಗೆ ಅಭಿನಂದನೆ
– ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಪಡೆದ ಸುಮಂತ್ ಕುಮಾ‌ರ್ ಜೈನ್ ಅವರಿಗೆ ಜು.15ರಂದು ಅಭಿನಂದನಾ ಕಾರ್ಯಕ್ರಮ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಳ್ತಂಗಡಿ
ಗುರುವಾಯನಕೆರೆ: ಕರ್ನಾಟಕದ ಜನಪ್ರಿಯ ದೈನಿಕ ವಿಜಯವಾಣಿ ಸಮೂಹ ಸಂಸ್ಥೆಗಳಿಂದ ‘ ವಿಜಯ ರತ್ನ 25 ‘ ಪುರಸ್ಕೃತರಾದ ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಿಗೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಬೋಧಕ ಹಾಗೂ ಆಡಳಿತ ಕಛೇರಿ ಉದ್ಯೋಗಿಗಳಿಂದ ಅಭಿಮಾನದ ಸನ್ಮಾನ ಕಾರ್ಯಕ್ರಮ 15/07/2025 ಮಂಗಳವಾರ ಎಕ್ಸೆಲ್ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ನ ಸಭಾಂಗಣದಲ್ಲಿ ಸಂಜೆ 5.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ವಿದ್ಯಾ ಸಾಗರ ಕ್ಯಾಂಪಸ್ ಮತ್ತು ಅರಮಲೆಬೆಟ್ಟ ಕ್ಯಾಂಪಸ್ ಎಕ್ಸೆಲ್ ಪದವಿ ಪೂರ್ವ ಕಾಲೇಜು, ಗುರುವಾಯನಕೆರೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಎಕ್ಸೆಲ್ ಅಧ್ಯಕ್ಷರಿಗೆ ಶ್ರೀ ನಾಗ ರಕ್ತೇಶ್ವರಿ ಸೇವಾ ಟ್ರಸ್ಟ್ , ಗುಂಪಲಾಜೆ , ಪಣೆಜಾಲು ವತಿಯಿಂದ ಗೌರವಾರ್ಪಣೆ

ವಿಜಯರತ್ನ ಪ್ರಶಸ್ತಿ ಪುರಸ್ಕೃತ ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರಿಗೆ ಪಣೆಜಾಲು ಬಳಿಯ ಗುಂಪಲಾಜೆ ಶ್ರೀ ನಾಗ ರಕ್ತೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರೇಮ್ ಶೆಟ್ಟಿ, ಕೋಶಾಧಿಕಾರಿ ಶೈಲೇಶ್ ಗಾಣಿಗ, ಸದಸ್ಯರಾದ ಶಂಕರ್ ಗಾಣಿಗ, ಶಶಿಧರ ಹೆಗ್ಡೆ, ಲೋಕೇಶ್ ಆಚಾರ್ಯ, ಸುರೇಶ್ ಕುಲಾಲ್, ಪ್ರವೀಣ್ ಶೆಟ್ಟಿ, ಸಂಕೇತ್ ಶೆಟ್ಟಿ, ಸಚಿನ್ ಎಸ್ ಶೆಟ್ಟಿ, ದೀಪಕ್ ಶೆಟ್ಟಿ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಓಡೀಲು ವತಿಯಿಂದ ಎಕ್ಸೆಲ್ ಅಧ್ಯಕ್ಷರಿಗೆ ಗೌರವಾರ್ಪಣೆ

ವಿಜಯ ರತ್ನ 2025 ಪ್ರಶಸ್ತಿ ವಿಜೇತರಾದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರಿಗೆ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಿನೇಶ್ ಮೂಲ್ಯ, ಸದಸ್ಯರಾದ ಗೋಪಿನಾಥ್ ನಾಯಕ್, ಸತೀಶ್ ಬಂಗೇರ, ಶಾಂಭವಿ ಬಂಗೇರ, ಹರಿಪ್ರಸಾದ್ ಇರ್ವತ್ರಾಯ,ಹಾಗೂ ರಾಜು ಪಡಂಗಡಿ ಜೊತೆಗಿದ್ದರು.

ವೇಣೂರು ಶ್ರೀ ಗಣೇಶೋತ್ಸವ ಬೆಳ್ಳಿ ಹಬ್ಬ: ಲಾಂಛನ ಅನಾವರಣ

ಐತಿಹಾಸಿಕ ಮಹತ್ತ್ವದ ವೇಣೂರಿನ ಶ್ರೀ ಗಣೇಶೋತ್ಸವಕ್ಕೆ ಈ ಬಾರಿ 25 ವರ್ಷ ತುಂಬುವ ಸಂಭ್ರಮ. ಫಲ್ಗುಣಿ ಸೇವಾ ಸಂಘ (ರಿ) ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಸಿಕೊಂಡು ಬರುತ್ತಿರುವ ಗಣೇಶೋತ್ಸವವನ್ನು ಈ ಬಾರಿ ಇನ್ನಷ್ಟು ಅದ್ಧೂರಿಯಾಗಿ ನೆರವೇರಿಸಲು ತೀರ್ಮಾನಿಸಲಾಗಿದೆ. ಶ್ರೀ ಗಣೇಶೋತ್ಸವ ಬೆಳ್ಳಿ ಹಬ್ಬದ ಲಾಂಛನವನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ರಾಗಿರುವ ಸುಮಂತ್ ಕುಮಾರ್ ಜೈನ್ ಅವರು ಅನಾವರಣ ಗೊಳಿಸಿದರು. ವೇಣೂರಿನ ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ಕೆ.ಶಿವರಾಮ ಹೆಗ್ಡೆ, ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಡಾ.ಶಾಂತಿ ಪ್ರಸಾದ್, ಭಾಸ್ಕರ ಪೈ, ಅಧ್ಯಕ್ಷರಾದ ಜಗದೀಶ್ ಡಿ ಕೆ, ಫಲ್ಗುಣಿ ಸೇವಾ ಸಂಘದ ಅಧ್ಯಕ್ಷರಾದ ವಿ ಎಸ್ ಜಯರಾಜ್,
ಸದಸ್ಯರಾದ ಪ್ರಸನ್ನ ಹೆಬ್ಬಾರ್, ಶ್ರೀಕಾಂತ ಉಡುಪ ಹೇಮಂತ್ ಕುಮಾರ್, ಅರುಣ್ ಕುಮಾರ್ ಐಂದಲ್ಕೆ, ಸುದತ್ ಜೈನ್,, ಪ್ರಮೋದ್ ಕುಮಾರ್ ಜೈನ್, ಗಂಗಾಧರ ಆಚಾರ್ಯ, ಪ್ರಶಾಂತ ನಾಯಕ್, ಸದಾಶಿವ ಭಂಡಾರಿ, ಪ್ರಕಾಶ್ ಚಂದ್ರ ಹೆಗ್ಡೆ, ನಿರಂಜನ್ ಕೆ ಎಸ್, ಪ್ರಸಾದ ಜೈನ್, ಶ್ರೀ ಸದಾನಂದ ‘ ಬ್ರಹ್ಮ ಶ್ರೀ ‘, ಸೀತಾರಾಮ ಆಚಾರ್ಯ, ಗಿರೀಶ್ ಕೆ ಎಸ್, ಎಕ್ಸೆಲ್ ವಿದ್ಯಾ ಸಂಸ್ಥೆಗಳ ಕ್ಯಾಂಪಸ್ ಮ್ಯಾನೇಜರ್ ಶಾಂತಿ ರಾಜ್ ಜೈನ್ ಹಾಗೂ ಎಕ್ಸೆಲ್ ಟೆಕ್ನೋ ಸ್ಕೂಲ್ ನ ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.