ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ ಕಿಮ್ಮನೆ ರತ್ನಾಕರ್
– ಜಿಲ್ಲಾ, ಬ್ಲಾಕ್, ಕ್ಷೇತ್ರ, ಪ್ರಚಾರ ಸಮಿತಿಗಳ ನೇಮಕ ಮತ್ತು ಕ್ಷೇತ್ರವಾರು ಪ್ರಚಾರ ಸಮಿತಿಗಳ ಕಾರ್ಯ ಕೈಗೊಳ್ಳಲು ಸೂಚನೆ
NAMMUR EXPRESS NEWS
ತೀರ್ಥಹಳ್ಳಿ: ಕಾಂಗ್ರೆಸ್ ನಾಯಕರು, ಮಾಜಿ ಸಚಿವರು ಕಿಮ್ಮನೆ ರತ್ನಾಕರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಕಿಮ್ಮನೆ ರತ್ನಾಕರ್ ರವರಿಗೆ ವಹಿಸಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಉಸ್ತುವಾರಿಯನ್ನು ಕೂಡಲೇ ವಹಿಸಿಕೊಂಡು ಜಿಲ್ಲಾ, ಬ್ಲಾಕ್, ಕ್ಷೇತ್ರ ಮತ್ತು ಪ್ರಚಾರ ಸಮಿತಿಗಳ ನೇಮಕ ಮತ್ತು ಕ್ಷೇತ್ರವಾರು ಪ್ರಚಾರ ಸಮಿತಿಗಳ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಕೋರಲಾಗಿದೆ.
