Categories
ತೀರ್ಥಹಳ್ಳಿ

ಆರಗ ವಿರುದ್ಧ ಕಿಮ್ಮನೆ ಗುಡುಗು!

ಆರಗ ವಿರುದ್ಧ ಕಿಮ್ಮನೆ ಗುಡುಗು!
– ಚುನಾವಣೆ ಗೆದ್ದರೆ ಜನರನ್ನು ಗೆದ್ದಂತಲ್ಲ!
– ದ್ವೇಷದ ರಾಜಕೀಯ ತೀರ್ಥಹಳ್ಳಿಯಲ್ಲಿ ಹುಟ್ಟು ಹಾಕಿದವರು ಆರಗ ಜ್ಞಾನೇಂದ್ರ
– ಬಡವರ ಅರೋಗ್ಯ ವಿಚಾರದಲ್ಲಿ ಪಕ್ಷ ನೋಡ್ತಾರೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ರಾಜಕಾರಣದಲ್ಲಿ ದ್ವೇಷದ ರಾಜಕೀಯ ಹುಟ್ಟು ಹಾಕಿದವರು ಆರಗ ಜ್ಞಾನೇಂದ್ರ. ಆರಗ ಜ್ಞಾನೇಂದ್ರ ಬರೀ ಬಿಜೆಪಿಗಷ್ಟೇ ಶಾಸಕ ಅಲ್ಲ, ಅವರೊಬ್ಬ ಜನಪ್ರತಿನಿಧಿ ಎಂದು ಮಾಜಿ ಸಚಿವ, ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ್ ಕಿಡಿ ಕಾರಿದ್ದಾರೆ. ಶುಕ್ರವಾರ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ನಾನೇನೇ ಮಾಡಿದರೂ ನಡೆಯುತ್ತೆ ಎನ್ನುವಂತಹ ಸೊಕ್ಕು ಆರಗ ಅವರಲ್ಲಿ ಇದೆ. ಆದರೆ ಇಡೀ ರಾಜ್ಯದಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಎಲ್ಲದಕ್ಕೂ ನಾನಾ ಕಾರಣಗಳು ಇವೆ. ಚುನಾವಣೆಯ ಗೆಲುವು ಮನುಷ್ಯನ ಒಳ್ಳೆತನವನ್ನು ತೋರಿಸುವಂತಹ ಗೆಲುವೇನು ಅಲ್ಲ. ಸೋತವರೆಲ್ಲ ಕೆಟ್ಟವರು, ಗೆದ್ದವರೆಲ್ಲ ಒಳ್ಳೆಯವರು ಆಗಿರಲು ಸಾಧ್ಯವಿಲ್ಲ ಎಂದು ಹೇಳಿದರು.

ಸಹಕಾರಿ ಸಂಘದ ಸಭೆಯಲ್ಲಿ ಕರೆದರೆ ಅವರು ಮಂಜುನಾಥಗೌಡರ ಬಗ್ಗೆ ದ್ವೇಷದಲ್ಲಿ ಮಾತನಾಡುತ್ತಾರೆ. ಆ ಸಭೆಯಲ್ಲಿ ಆತರ ದ್ವೇಷ ಮಾಡುವ ಅವಶ್ಯಕತೆ ಆದರೂ ಏನಿತ್ತು? ದ್ವೇಷದ ರಾಜಕೀಯವನ್ನು ತೀರ್ಥಹಳ್ಳಿಯಲ್ಲಿ ಹುಟ್ಟು ಹಾಕಿದವರು ಆರಗ ಜ್ಞಾನೇಂದ್ರ. ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ವಿಷ ಕಾರುವುದಕ್ಕೆ ಒಂದು ಮಿತಿ ಇರಬೇಕು ಎಂದು ಆಕ್ರೋಶ ಹೊರ ಹಾಕಿದರು.

ಬಡ ಕುಟುಂಬದ ಅರೋಗ್ಯದಲ್ಲೂ ರಾಜಕೀಯ!

ಹೆದ್ದೂರು ಕಾಂತರಾಜ್ ಅವರು ತಮ್ಮ ತಾಯಿಗೆ ಆಪರೇಷನ್ ಆಗಿದೆ. ಅದಕ್ಕೆ ಸುಮಾರು ವೆಚ್ಚ ತಗುಲಿದ್ದು ಅವರ ಎಂದು ಆರಗ ಜ್ಞಾನೇಂದ್ರ ಕಚೇರಿಗೆ ಅರ್ಜಿ ಕೊಟ್ಟಿದ್ದಾರೆ. ಪರಿಹಾರ ಕಲ್ಪಿಸಿ ಎಂದು ಆದರೆ ಇವರು ಅರ್ಜಿಯನ್ನು ಇಟ್ಟುಕೊಂಡು ಅವರು ಯಾವ ಪಕ್ಷ, ಮನೆಯವರೆಲ್ಲ ಯಾವ ಪಕ್ಷ ಎಂದು ವಿಚಾರಿಸುತ್ತಿದ್ದಾರೆ ಒಂದು ವರ್ಷದಿಂದ ಈ ರೀತಿಯ ವಿಷಕಾರಿ ರಾಜಕಾರಣವನ್ನು ಮಾಡುತ್ತಾರೆ. ಇಲ್ಲಿ ಪರಿಹಾರ ಕೇಳಲು ಹೋದರೆ ಅವರು ಜಾತಿನಿಂದನೆ ಪಕ್ಷನಿಂದನೆ ಮಾಡುತ್ತಿದ್ದಾರೆ, ಆರಗ ಬರೀ ಬಿಜೆಪಿಷ್ಟೇ ಶಾಸಕ ಅಲ್ಲ ಅವರು ತೀರ್ಥಹಳ್ಳಿ ಕ್ಷೇತ್ರದ ಶಾಸಕರು. ಈ ರೀತಿ ರಾಜಕೀಯ ಮಾಡುವುದು ಆರೋಗ್ಯ ಜ್ಞಾನೇಂದ್ರ ಅವರಿಗೆ ಶೋಭೆ ತರುವುದಿಲ್ಲ. ನಾನು ಈ ರೀತಿಯ ರಾಜಕಾರಣವನ್ನು ಎಂದು ಮಾಡಿರಲಿಲ್ಲ, ನನ್ನ ವಿರುದ್ಧ ನಿಂತವರಿಗೂ ಕೂಡ ನಾನು ಸಹಾಯ ಮಾಡಿದ್ದೇನೆ ಎಂದು ಹೇಳಿದರು.

ಮಂಜುನಾಥ ಗೌಡರಿಗೆ ಆರಗ ಸನ್ಮಾನ ಮಾಡಿಲ್ಲವಾ?

ಆರ್ ಎಂ ಮಂಜುನಾಥ್ ಗೌಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದಾಗ ಪಕ್ಷದ ವತಿಯಿಂದ ಸನ್ಮಾನ ಮಾಡಿದೆವು. ಹಿಂದೆ ಅವರ ವಿರುದ್ಧವೂ ಹೋರಾಟ ಮಾಡಿದ್ದೇನೆ, ಗುಟ್ಟಲ್ಲಿ ಹೋರಾಟ ಮಾಡಿದ್ದಲ್ಲ ವಿಧಾನಸೌಧದಲ್ಲೇ ಹೇಳಿಕೆ ನೀಡಿರುವುದು. ನಮ್ಮ ಪಕ್ಷಕ್ಕೆ ಬಂದಿದ್ದಾರೆ ಹಾಗಾಗಿ ಅಭಿನಂದನೆ ತಿಳಿಸಿದ್ದೇವೆ. ನಾನು ಹಾರ ಹಾಕಿದರೆ ತಪ್ಪಾಗುತ್ತೆ ಆದರೆ ಇವರು ಬಿಜೆಪಿಯಲ್ಲಿದ್ದಾಗ ಚಿನ್ನದ ಕಿರೀಟ ತೊಡಿಸಿದ್ದರಲ್ಲ ಅದು ತಪ್ಪಲ್ಲವೇ? ಎಂದು ಪ್ರಶ್ನೆ ಮಾಡಿದರು.

ನಾನೇ ಶಾಸಕನಾಗಿದ್ದರೆ ಹೋರಾಟ ಮಾಡಿಸುತ್ತಿದ್ದರು!

ತುಂಗಾ ನದಿಯ ವಿಷಯದಲ್ಲಿ ಹೋರಾಟ ಆಗುತ್ತಿದೆ. ಈ ಸಂದರ್ಭದಲ್ಲಿ ನಾನೇ 354 ಕೋಟಿ ಯೋಜನೆ ತಂದಿದ್ದರೆ ಎಲ್ಲರಿಗೂ ಕೇಸರಿ ಶಾಲು ಹಾಕಿಸಿ ಕಂಟ್ರಾಕ್ಟರ್ ಜೊತೆಗೆ ನನ್ನ ಹೆಸರು ಜೋಡಿಸಿ ಬಿಡುತ್ತಿದ್ದರು. ನಾನು 38 ಗ್ರಾಮ ಪಂಚಾಯಿತಿಗಳಿಗಲ್ಲ 62 ಗ್ರಾಮಪಂಚಾಯಿತಿಗಳು ಶುದ್ಧ ನೀರು ಕುಡಿಯಬೇಕು ಎನ್ನುವವನು. ಶುದ್ಧ ನೀರನ್ನು ಸರಬರಾಜು ಮಾಡುವ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ಎಲ್ಲಿ ಮಾಡಬೇಕು ಎನ್ನುವುದಕ್ಕೆ ಯಾರು ಪ್ರಶ್ನೆ ಎತ್ತಿದ್ದಾರೋ ಅವರಿಗೆ ಉತ್ತರ ನೀಡಲಿ ಎಂದರು.

ದೇವಸ್ಥಾನಕ್ಕೆ ನಾನು ಕೊಟ್ಟ ಹಣದ ಶೇ.10% ಕೊಟ್ಟಿಲ್ಲ!

ದೇವಸ್ಥಾನಕ್ಕೆ ಅವರು ಖಾಸಗಿಯಾಗಿ ಎಷ್ಟು ಕೊಟ್ಟಿದ್ದಾರೆ ಎಂದು ಹೇಳಲಿ, ನಾನು ಚಾಲೆಂಜ್ ಮಾಡುತ್ತೇನೆ ನಾನು ದೇವಸ್ಥಾನಕ್ಕೆ ಕೊಟ್ಟಿರುವ 10 ಪರ್ಸೆಂಟ್ ಅವರು ಕೊಟ್ಟಿಲ್ಲ. ರಾಮೇಶ್ವರ ದೇವಸ್ಥಾನಕ್ಕೆ ಎಷ್ಟು ಕೊಟ್ಟಿದ್ದೇನೆ ಎಂದು ಹೇಳಿಕೆ ನೀಡಲಿ. ನಾನು ಎಷ್ಟು ಕೊಟ್ಟಿದ್ದೇನೆ ಎಂದು ಹೇಳುತ್ತೇನೆ. ಅವರ ಆಸ್ತಿ ಎಷ್ಟು? ದೇವಸ್ಥಾನಕ್ಕೆ ಕೊಟ್ಟಿದ್ದೇಷ್ಟು? ಹೇಳಲಿ. ನಾನು 100 ಕ್ಕೂ ಹೆಚ್ಚು ದೇವಸ್ಥಾನಕ್ಕೆ 5 ಸಾವಿರದಿಂದ 5 ಲಕ್ಷದವರೆಗೂ ಖಾಸಗಿಯಾಗಿ ಕೊಟ್ಟಿದ್ದೇನೆ, ಅದನ್ನು ಬಿಟ್ಟು ಮಂಜೂರು ಮಾಡಿಸಿದ್ದು ಬೇರೆ. ಬಾಯಲ್ಲಿ, ರಾಜಕೀಯದಲ್ಲಿ ದೇವರ ಹೆಸರು ಹೇಳುವುದಷ್ಟೇ ಅಲ್ಲ. ಮಾಡಿ ತೋರಿಸಬೇಕು ಎಂದರು.

ಎಲೆ ಚುಕ್ಕಿ ರೋಗಕ್ಕೆ ಒಂದು ನಯಾ ಪೈಸೆ ಬಂದಿಲ್ಲ

ಎಲೆ ಚುಕ್ಕೆ ರೋಗಬಂದ ಸಂದರ್ಭದಲ್ಲಿ ನಾನು ಪ್ರತಿಭಟನೆ ಮಾಡಿದ್ದೆ. ಆಗ ಅಲ್ಲಿಂದಲೇ 10 ಕೋಟಿ ಮಂಜೂರು ಮಾಡಿಸಿದ್ದೇನೆ ಎಂದರು. ಆದರೆ ಅವರು ಹೇಳಿಕೆ ಕೊಟ್ಟಾಗಿನಿಂದ ಇಲ್ಲಿಯವರೆಗೆ ಒಂದು ರೂ.ಹಣ ಬಂದಿಲ್ಲ. 19 ಲಕ್ಷ ಹಣ ಬಂದಿದೆ ಆದರೆ ಇವರಿಂದ ಅಲ್ಲ. ಎಲ್ಲೆಲ್ಲಿ ಎಲೆ ಚುಕ್ಕೆ ರೋಗ ಎಂದು ಹೇಳಿದ್ದರೋ ಅಲ್ಲೆಲ್ಲ ಹಣ ಕೊಟ್ಟಿದ್ದಾರೆ. ಅದರಲ್ಲಿ ಇವರ ಪ್ರಯತ್ನ ಏನಿಲ್ಲ ನಾವು ಕಾಗೋಡು ತಿಮ್ಮಪ್ಪ, ಬೇಳೂರು ಗೋಪಾಲಕೃಷ್ಣ ಕೊಟ್ಟ ಮನವಿಗೆ ಹಣ ಬಂದಿದೆ. ನಮ್ಮ ಸರ್ಕಾರಕ್ಕೆ ಆರ್ಥಿಕವಾಗಿ ಸಮಸ್ಯೆ ಆಗಿದೆ ಎಂದರೆ ಅವರು ಮಾಡಿರುವ ಕೆಟ್ಟ ಕೆಲಸವೇ ಕಾರಣ ಎಂದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.