Categories
ತೀರ್ಥಹಳ್ಳಿ

ನಗು ಮಗು ವಾಹನ ಚಾಲಕ ರಮೇಶ್ ನೆನಪು!

ನಗು ಮಗು ವಾಹನ ಚಾಲಕ ರಮೇಶ್ ನೆನಪು!
– ಕರೋನಾ ವೇಳೆ ಜೀವದ ಆಸೆ ಬಿಟ್ಟು ಕೆಲಸ ಮಾಡಿದ್ದರು
– ಮೃತರ ಗೌರವಾರ್ಥ ಜೆ ಸಿ ಆಸ್ಪತ್ರೆಯಲ್ಲಿ ಶ್ರದ್ದಾಂಜಲಿ ಸಭೆ

NAMMUR EXPRESS NEWS
ತೀರ್ಥಹಳ್ಳಿ: ಕೋವಿಡ್ ಕಾಲದಲ್ಲಿ ರಮೇಶ್ ಹಗಲೂ ರಾತ್ರಿ ಎನ್ನದೇ ಒಬ್ಬರೇ ಯೋಧರಂತೆ ಕರ್ತವ್ಯ ನಿರ್ವಹಿಸಿದ್ದ, ಕರ್ತವ್ಯದಲ್ಲಿ ಅಪಾರ ಬದ್ದತೆ ಕಾಳಜಿಗಳನ್ನು ಹೊಂದಿದ್ದ ನಗು ಮಗು ಆಂಬುಲೆನ್ಸ್ ಚಾಲಕ ರಮೇಶ್ ಅವರ ಅನಿರೀಕ್ಷಿತ ಅಗಲಿಕೆ ನಮ್ಮೆಲ್ಲರನ್ನೂ ಅತೀವವಾಗಿ ಕಾಡುತ್ತಿದೆ.ಇದು ಇಲಾಖೆಗಾದ ನಷ್ಟ ಎಂದು ಎಂದು ಡಾ.ನಿಶ್ಚಲ್ ನುಡಿದರು.
ತೀರ್ಥಹಳ್ಳಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಆಶ್ರಯದಲ್ಲಿ ನಗುಮಗು ವಾಹನ ಚಾಲಕರಾಗಿದ್ದ ರಮೇಶ್ ರವರ ಶ್ರದ್ದಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ.ಪ್ರಭಾಕರ್ ಮಾತನಾಡಿ, ಮಾನಸಿಕ ಆರೋಗ್ಯದ ಏರುಪೇರುಗಳು ಆತ್ಮಹತ್ಯೆಯ ಪ್ರಚೋದನೆಗಳಿಗೆ ಪ್ರಮುಖ ಕಾರಣಗಳಾಗಿರುತ್ತವೆ. ಆತ್ಮೀಯರೊಂದಿಗೆ ಮುಕ್ತವಾಗಿ ಅನಿಸಿಕೆಗಳನ್ನು ಹಂಚಿಕೊಳ್ಳುವುದರಿಂದ, ಆಪ್ತಸಮಾಲೋಚನೆಗೆ ಒಳಪಡುವುದರಿಂದ ಅಂತಹ ಮಾನಸೀಕತೆಯಿಂದ ಹೊರಬರಲು ಸಾಧ್ಯ. ಎಲ್ಲರೊಂದಿಗೆ ಸೌಹಾರ್ಧತೆಯಿಂದಿದ್ದ ಅವರ ಅಗಲಿಕೆ ನಿಜಕ್ಕೂ ದುರಾದೃಷ್ಟಕರ ಎಂದರು.

ಕೋವಿಡ್ ಕಾಲದಲ್ಲಿ ನನಗೇ ಧೈರ್ಯ ತುಂಬಿದ್ದ ರಮೇಶ್ ಇಂತಹ ನಿರ್ಧಾರ ಕೈಗೊಂಡಿದ್ದು ಆಘಾತ ತಂದಿದೆ ಎಂದ ಡಾ.ಗುರುರಾಜ್ ಅವರ ಕುಟುಂಬಸ್ಥರಿಗೆ ಭಗವಂತ ದುಃಖ ಸೈರಿಸುವ ಶಕ್ತಿ ನೀಡಲಿ ಎಂದರು. ಡಾ.ರವಿಕುಮಾರ್, ಆರೋಗ್ಯ ಮಿತ್ರ ರಾಮು, ಡಾ.ರವಿಕುಮಾರ್,ಮೇಟ್ರನ್ ಪಾರ್ವತಿ ಭಟ್,ಕಿರಣ್ ಮತ್ತಿತರರು ಮಾತನಾಡಿ ರಮೇಶ್ ಕರ್ತವ್ಯ ನಿಷ್ಟೆ, ಸೌಜನ್ಯಯುತ ವ್ಯಕ್ತಿತ್ವ ಉದಾರತೆಗಳನ್ನು ನೆನಪಿಸಿಕೊಂಡು ಶ್ರದ್ದಾಂಜಲಿ ಸಲ್ಲಿಸಿದರು. ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ‌ ಸತೀಶ್ ಮಾತನಾಡಿ ಇಲ್ಲಿ ಯಾರೂ ಮುಖ್ಯರೂ ಅಲ್ಲ ಅಮುಖ್ಯರೂ ಅಲ್ಲ.

ಮಾಡುವ ಕಾರ್ಯದಲ್ಲಿ ಶ್ರದ್ದೆ, ಸೌಹಾರ್ಧತೆ, ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿತ್ವಗಳು ಮಾತ್ರ ನಮ್ಮ ಕಾಲಾನಂತರವೂ ನಮ್ಮನ್ನು ಜನಮಾನಸದಲ್ಲಿ ಉಳಿಸುತ್ತದೆ ಎಂಬುದಕ್ಕೆ ರಮೇಶ್ ಮತ್ತೊಂದು ಉದಾಹರಣೆ. ಪ್ರೀತಿಸುವ ಕುಟುಂಬ, ಉತ್ತಮ ಗೆಳೆಯರ ಬಳಗ ಎಲ್ಲವೂ ಇದ್ದ ಅವರಿಗೆ ನಿಜಕ್ಕೂ ಆತ್ಮಹತ್ಯೆಗೆ ಕಾರಣಗಳೇ ಇರಲಿಲ್ಲ. ಈ ಸಾವು ಎಲ್ಲರಿಗೂ ಒಂದು ಪಾಠವಾಗಬೇಕು. ನಮ್ಮಲ್ಲೇ ಆಗಲಿ ಇತರರಲ್ಲೇ ಆಗಲಿ ಮಾನಸಿಕ ವ್ಯತ್ಯಾಸಗಳಿಂದ ಆತ್ಮಹತ್ಯೆಯ ಯೋಚನೆಗಳು ಕಾಣಿಸಿಕೊಂಡಾಗ ಮುಕ್ತವಾಗಿ ಹೇಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇತರರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು. ಸಮಾಜದ ಸಂಕಷ್ಟಗಳಿಗೆ ನಮ್ಮ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುವುದೇ ಅಗಲಿದ ಅವರ ಆತ್ಮಕ್ಕೆ ನಾವು ಸಲ್ಲಿಸುವ ನೈಜ ಗೌರವ ಎಂದರು.

ಡಾ.ಪ್ರಭಾಕರ್ ಸಲಹೆಯಂತೆ,ಹೊರ ಗುತ್ತಿಗೆ ನೌಕರರಾಗಿದ್ದ ರಮೇಶ್ ಕುಟುಂಬಕ್ಕೆ ಇಲಾಖೆಯ ಸಹೊದ್ಯೋಗಿಗಳ ಸಹಕಾರದಿಂದ ಡಾ.ನಿಶ್ಚಲ್ ನೇತೃತ್ವದಲ್ಲಿ ಒಂದಿಷ್ಟು ಆರ್ಥಿಕ ಸಹಕಾರ ನೀಡುವ ಬಗ್ಗೆ ನಿರ್ಧರಿಸಲಾಯಿತು.
ಡಾ.ರಂಗಸ್ವಾಮಿ,ಡಾ.ಮಹಿಮ, ಜೆ ಸಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಕೆ ರಾಮಕೃಷ್ಣ, ಶುಶ್ರೂಷಣಾಧಿಕಾರಿಗಳಾದ ಪೂರ್ಣಿಮ, ತನುಜ,ಪ್ರಮೀಳ, ಸರೋಜ,ಅಶ್ವಿನಿ,ಫಾರ್ಮಸಿ ಅಧಿಕಾರಿಗಳಾದ ಸತೀಶ್,ಶೋಭಾ, ಅರೋಗ್ಯ ಇಲಾಖಾ ನೌಕರರ ಸಂಘದ ಉಪಾಧ್ಯಕ್ಷರುಗಳಾದ ಅನುಸೂಯ,ತಿಲಕಮ್ಮ,ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ, ಹನುಮಂತರೆಡ್ಡಿ,, ಕುಸುಮ,ಸತೀಶ್, ಶೈಲಜಾ ಶೆಟ್ಟಿ, ತಿಪ್ಪೇಶ್, ವಾಹನ ಚಾಲಕರಾದ ರಾಜೇಶ್, ಪ್ರಶಾಂತ್,ಪಿಂಟೋ, ಸಿಬ್ಬಂದಿಗಳಾದ ದಯಾನಂದ, ನವೀಶ,ಕಾರ್ತಿಕ ಸೇರಿದಂತೆ ಜೆ ಸಿ ಆಸ್ಪತ್ರೆಯ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಆಂಬುಲೆನ್ಸ್ ಚಾಲಕರು, ಕಾರ್ ಸ್ಟಾಂಡ್ ಸಂತಾಪ

ಆಸ್ಪತ್ರೆಗೆ ಮುಂಭಾಗ ಕಾರು, ರಿಕ್ಷಾ ಚಾಲಕರು, ಆಂಬುಲೆನ್ಸ್ ಚಾಲಕರು ರಮೇಶ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಿ ಫ್ಲೆಕ್ಸ್ ಹಾಕಿ ಅಂತಿಮ ನಮನ ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.