Categories
ತೀರ್ಥಹಳ್ಳಿ

ತೀರ್ಥಹಳ್ಳಿ ಜಾತ್ರೆಯಲ್ಲಿ ಕೋಣದ ಆಲೆಮನೆ!

ತೀರ್ಥಹಳ್ಳಿ ಜಾತ್ರೆಯಲ್ಲಿ ಕೋಣದ ಆಲೆಮನೆ!
– ನ್ಯಾಚುರಲ್ ಕಬ್ಬಿನ ಹಾಲು ಸಿಗುತ್ತೆ
– ಮಲೆನಾಡ ಸಂಪ್ರದಾಯಕ ಕೃಷಿ ನೋಡಲು ಬನ್ನಿ..!

NAMMUR EXPRESS NEWS
ತೀರ್ಥಹಳ್ಳಿ ಜಾತ್ರೆ‌ ವಿಶೇಷ: ಜಾತ್ರೆಯಲ್ಲಿ ಏನಿಲ್ಲ ಏನಿದೆ ಎಂದು ಅಚ್ಚರಿಯಿಂದ ನೋಡುವ ಸಂದರ್ಭದಲ್ಲಿ ಇನ್ನಷ್ಟು ಅಚ್ಚರಿಗೊಳಿಸಿದ್ದು ಕೋಣದ ಆಲೆಮನೆ! ಕೋಣದಿಂದ ಗಾಣ ತಿರುಗಿಸಿ ಕಬ್ಬಿನ ಜಲ್ಲೆ ಹಿಂಡಿ ಸಿಹಿ ಸಿಹಿ ತಂಪು ಕಬ್ಬಿನ ಜ್ಯೂಸ್ ರೆಡಿ ಮಾಡಿ ಕೊಡುತ್ತಿದ್ದಾರೆ ತೀರ್ಥಹಳ್ಳಿ ತಾಲೂಕು ಆರಗದ ಶರತ್. ಇದೊಂದು ರೀತಿಯ ಮಲೆನಾಡಿನ ಚಿರಪರಿಚಿತ ಆಲೆಮನೆಯ ದೃಶ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಆಲೆಮನೆಯು ತೀರಾ ವಿರಳವಾಗಿದ್ದು ಈ ಪದ್ಧತಿ ಕಳೆದೇ ಹೋಗಿದೆ ಎನ್ನಬಹುದು. ಹೀಗಿರುವಾಗಲೇ ಆ ದೃಶ್ಯಗಳನ್ನು ಮತ್ತೆ ನೆನಪಿಸಿ ಆಲೆಮನೆಯೊಂದಿಗೆ ಕಬ್ಬಿನ ಜ್ಯೂಸ್ ನ ಅನುಭವ ಹೊಂದುವಂತೆ ಇಲ್ಲಿ ವ್ಯವಸ್ಥೆಯಾಗಿದೆ. ಎಳ್ಳಮಾಸ್ಯೆ ಜಾತ್ರೆಯಲ್ಲಿ ಈ ದೃಶ್ಯ ನೋಡಲು ಹಾಗೂ ಕಬ್ಬಿನ ಹಾಲು ಕುಡಿಯಲು ಜನ ಮುಗಿ ಬಿದ್ದರು.

ಬನ್ನಿ. ಕಬ್ಬಿನ ಜ್ಯೂಸ್ ರುಚಿಯನ್ನು ಆಲೆಮನೆಯೊಂದಿಗೆ ಸವಿಯಿರಿ.

ಸ್ಥಳ: ರಥಬೀದಿಯ ಮೇಳಿಗೆ ರೋಡ್. ಜೈಂಟ್ ವೀಲ್ ಸಮೀಪ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.