ಸಾರ್ವಜನಿಕರನ್ನು ಆಕರ್ಷಿಸುತ್ತಿದೆ ಸೆಲ್ಫಿ ಪಾಯಿಂಟ್..!
– ಇದು ಸಂಪೂರ್ಣ ಉಚಿತ ಉಚಿತ ಉಚಿತ
– ಮಿಕ್ಕೇರಿ ಶ್ರೀ ಭೂತಾರಾಯಸ್ವಾಮಿ ಆರಾಧನಾ ಸೇವಾ ಸಮಿತಿ ಗೆಳೆಯರ ಬಳಗ
– ಪರಿಕಲ್ಪನೆ ಮೂಡಿ ಬಂದ ಶ್ರೀ ಪರುಶುರಾಮನ ಸೆಲ್ಫಿ ಪಾಯಿಂಟ್
NAMMUR EXPRESS NEWS
ತೀರ್ಥಹಳ್ಳಿ: ಈ ಬಾರಿಯ ಶ್ರೀ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ತೀರ್ಥಹಳ್ಳಿ ಪಟ್ಟಣದ ಮಿಕ್ಕೇರಿ ಶ್ರೀ ಭೂತಾರಾಯ ಸ್ವಾಮಿ ಆರಾಧನಾ ಸೇವಾ ಸಮಿತಿ ಗೆಳೆಯರ ಬಳಗದ ಪರಿಕಲ್ಪನೆಯಲ್ಲಿ ಮಿಲ್ ರಸ್ತೆಗೆ ಹೋಗುವ ಮಾರ್ಗದಲ್ಲಿ ವಿಶೇಷವಾಗಿ ರಾಮೇಶ್ವರನ ಜಾತ್ರೆಯ ಪುರಾಣ ಇತಿಹಾಸವುಳ್ಳ ಪರಶುರಾಮ ಹಾಗೂ ರಾಮ ಮಂಟಪದ ಒಂದು ಸೆಲ್ಫಿ ಪಾಯಿಂಟ್ ಪ್ರಾರಂಭಿಸಿದ್ದು ಈ ಸೆಲ್ಫಿ ಪಾಯಿಂಟ್ ಜಾತ್ರೆಗೆ ಆಗಮಿಸುತ್ತಿರುವ ಸಾವಿರಾರು ಜನರನ್ನ ಆಕರ್ಷಿಸುತ್ತಿದೆ.
ಅದರಲ್ಲೂ ಹೆಚ್ಚಾಗಿ ಯುವಕ-ಯುವತಿಯರು, ಮಕ್ಕಳು ಹೆಚ್ಚಾಗಿ ಈ ಸೆಲ್ಫಿ ಪಾಯಿಂಟ್ ನಲ್ಲಿ ಫೋಟೋ ತಗೆದು ಕೊಂಡು ಸಂತೋಷ ಪಡುತ್ತಿದ್ದಾರೆ. ಈಗಿನ ಆಧುನಿಕ ಯುಗದ ಮೊಬೈಲ್ ಕಾಲಘಟ್ಟದಲ್ಲಿ ವಿನೂತನ ಶೈಲಿಯಲ್ಲಿ ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವರ, ಪರಶುರಾಮ, ರಾಮಮಂಟಪದ ಇತಿಹಾಸವನ್ನು ನೆನಪಿಸುವ ಹಾಗೂ ಇವತ್ತಿನ ಯುವಕ ಯುವತಿಯರಿಗೆ ತೀರ್ಥಹಳ್ಳಿ ರಾಮೇಶ್ವರ ಜಾತ್ರೆಯ ಇತಿಹಾಸವನ್ನು ತಿಳಿಸುವ ಕೆಲಸವನ್ನು ತೀರ್ಥಹಳ್ಳಿ ಮಿಕ್ಕೇರಿ ಶ್ರೀ ಭೂತರಾಯ ಸೇವಾ ಸಮಿತಿಯ ಗೆಳೆಯರು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು, ನೀವು ಕೂಡ ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಹೋದರೆ ಈ ಸೆಲ್ಫಿ ಪಾಯಿಂಟ್ ಗೆ ಭೇಟಿ ನೀಡಿ ಫೋಟೋ ಕ್ಲಿಕ್ಕಿಸಿಕೊಂಡು ಸಂತೋಷಪಡಿ.
