Categories
ತೀರ್ಥಹಳ್ಳಿ

ಕೋಣಂದೂರು ಪಟ್ಟಣ ಕತ್ತಲೆ ಕತ್ತಲೆ!

ಕೋಣಂದೂರು ಪಟ್ಟಣ ಕತ್ತಲೆ ಕತ್ತಲೆ!
* ಜನರ ತೆರಿಗೆ ಹಣದ ಜೊತೆ ಅಧಿಕಾರಿಗಳ ಚೆಲ್ಲಾಟ.
* ಲೈಟ್ ಇಲ್ಲದ ಕಂಬ, ನೀರೇ ಇಲ್ಲದ ನೀರಿನ ಘಟಕ!?

ವರದಿ:ಉಮೇಶ್ ದೇಮ್ಲಾಪುರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ, ತಾಲೂಕಿನ ಕೋಣಂದೂರು ಪಟ್ಟಣದ ಸಿ ಕೆ ರಸ್ತೆ ಮಧ್ಯಭಾಗದಲ್ಲಿ ಇರುವ ಬೀದಿ ದೀಪ ಬೆಳಕು ಚೆಲ್ಲದೆ ಯಾವುದೋ ಕಾಲವಾಗಿದೆ, ಇದರಿಂದ ರಾತ್ರಿ ವೇಳೆ ಅಪಘಾತಗಳು ಸಂಭವಿಸಲು ನೇರ ಕಾರಣವಾಗುತ್ತಿದೆ. ಸಿ ಕೆ ರಸ್ತೆಯು ನಾಲ್ಕು ರಸ್ತೆಗಳನ್ನು ಒಂದುಗೂಡುವ ಒಂದು ಸರ್ಕಲ್ ಆಗಿದೆ, ಕೆಲವು ದಿನಗಳ ಹಿಂದಷ್ಟೇ ಇದೇ ಸರ್ಕಲ್ ನಲ್ಲಿ ಅಪಘಾತದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕ ಕೋಣಂದೂರಿನ ಸರ್ಕಾರಿ ಆಸ್ಪತ್ರೆ ಹತ್ತಿರ ಹಾಗೂ ಮಂಗಳ ರಸ್ತೆ ಪಕ್ಕದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಇದುವರೆಗೂ ಒಂದು ಹನಿ ನೀರು ಸಹ ಸಾರ್ವಜನಿಕರ ಉಪಯೋಗಕ್ಕೆ ಬಂದಿಲ್ಲ, ಕುಡಿಯುವ ನೀರು ಘಟಕದ ಅಕ್ಕ ಪಕ್ಕ ಕಾಡು ಗಿಡಗಳು ಬೆಳೆದಿವೆ, ಬಳ್ಳಿಗಳು ನೀರು ಘಟಕಕ್ಕೆ ಹಬ್ಬಿ ನಿಂತಿವೆ, ರಾತ್ರಿ ಬಾವಲಿಗಳ ವಾಸ ಸ್ಥಳ ಆಗಿದೆ,ಬೀಗ ತುಕ್ಕು ಹಿಡಿದ ಸ್ಥಿತಿಯಲ್ಲಿ ಇವೆ.

ಗೃಹ ಸಚಿವರ ಊರಲ್ಲಿ ಅವ್ಯವಸ್ಥೆ!

ಮಾಜಿ ಗೃಹ ಸಚಿವ ಹಾಲಿ ಶಾಸಕರಾದ ಆರಗ ಜ್ಞಾನೇಂದ್ರ ಅವರ ಸ್ವಕ್ಷೇತ್ರಕ್ಕೆ ಇದು ಎಂತ ಪರಿಸ್ಥಿತಿ, ಶಾಸಕರೇ ನಿಮ್ಮ ಕ್ಷೇತ್ರದ ಬಗ್ಗೆ ಸ್ವಲ್ಪ ಗಮನಹರಿಸಿ,ನೀವೇ ಬಂದು ಉದ್ಘಾಟಿಸಿದ ಕುಡಿಯುವ ನೀರಿನ ಘಟಕ ಇವತ್ತಿಗೂ ಪಾಳು ಬಿದ್ದಿವೆ, ಇವುಗಳನ್ನು ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು ಗಮನಹರಿಸುತ್ತಿಲ್ಲ, ಅಧಿಕಾರಿಗಳು ಇವರ ಮನೆಯಿಂದ ಹಣ ತಂದು ಇವುಗಳನ್ನು ನಿರ್ಮಿಸಿದರೆ ನಿರ್ವಹಣೆಗಳನ್ನು ಸರಿಯಾಗಿ ಮಾಡುತ್ತಿದ್ದರು, ಜನರ ತೆರಿಗೆ ಹಣ ಹಾಗಾಗಿ ಬೇಕಾಬಿಟ್ಟಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ವಹಣೆ ಮಾಡಲು ಸಾಧ್ಯ ಇಲ್ಲ ಅಂದಮೇಲೆ ನಿರ್ಮಾಣ ಯಾಕೆ ಮಾಡ್ತೀರಾ.? ಜನರ ತೆರಿಗೆ ಹಣಕ್ಕೆ ಬೆಲೆ ಇಲ್ವಾ.? ಅಧಿಕಾರಿಗಳು ಸಾರ್ವಜನಿಕರ ಬೇಕು ಬೇಡಗಳನ್ನೂ ವಿಚಾರಿಸಿ ಸ್ಪಂದಿಸಬೇಕು ಎಂದು ಸಾರ್ವಜನಿಕರಲ್ಲಿ ಆಗ್ರಹ ಕೇಳಿಬರುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.