ತಾಲೂಕು ಆಸ್ಪತ್ರೆ ಕಾರ್ಕಳ ಮತ್ತು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಸಹಯೋಗದಲ್ಲಿ ಸ್ತನ್ಯ ಪಾನ ಮಾಹಿತಿ ಕಾರ್ಯಕ್ರಮವು ಕಾರ್ಕಳ ಸರಕಾರಿ ತಾಲೂಕು ಆಸ್ಪತ್ರೆಯಲ್ಲಿ ನಡೆಯಿತು.
ಕಾರ್ಯಕ್ರಮದ ವಿವರ..,
ತಾಲೂಕು ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾll ಶಶಿಕಲಾ ಸ್ವಾಗತಿಸಿದರು. ರೋಟರಿ ಅಧ್ಯಕ್ಷ ಸುರೇಂದ್ರ ನಾಯಕ್ ರವರು ತನ್ನ ಪ್ರಾಸ್ತಾವಿಕ ಮಾತುಗಳಲ್ಲಿ ಅಂತಾರಾಷ್ಟ್ರೀಯ ಸೇವಾಸಂಸ್ಥೆ ರೋಟರಿಯ ಸಮಾಜ ಮುಖಿ ಕಾರ್ಯಗಳ ಬಗ್ಗೆ ತಿಳಿಸಿದರು. ಸಣ್ಣ ಮಕ್ಕಳ ಬಾಯಿ ಹಾಗೂ ಹಲ್ಲುಗಳ ಸ್ವಚ್ಛತೆ ಬಗ್ಗೆ ಆಸ್ಪತ್ರೆಯ ದಂತ ವೈದ್ಯೆ ಡಾll ಅನಾಲಿನಿಯವರು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾll ಸೌಜನ್ಯರವರು ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ ಕನಿಷ್ಠಪಕ್ಷ ಆರು ತಿಂಗಳುಗಳ ಕಾಲ ಮಗುವಿಗೆ ಎದೆ ಹಾಲನ್ನು ಉಣಿಸಬೇಕು ಎದೆ ಹಾಲಿನ ಕೊರತೆಯಿಂದ ಬರುವ ತೊಂದರೆಗಳನ್ನು ವಿವರಿಸುತ್ತಾ ಸ್ತನ್ಯಪಾನದ ಮಹತ್ವವನ್ನು ತಿಳಿಸಿದರು. ENT ತಜ್ಞರಾದ ಡಾll ಅನಂತ ಕಾಮತ್ ರವರು ವೇದಿಕೆಯಲ್ಲಿದ್ದರು., ಆಸ್ಪತ್ರೆ ಸಿಬ್ಬಂದಿ ಶಿವಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿ ಕೊನೆಗೆ ಧನ್ಯವಾದಗಳನ್ನಿತ್ತರು. Rtn ಕೃಷ್ಣಪ್ಪ, Rtn ಅಬ್ದುಲ್ ರೆಹಮನ್ ಕಾರ್ಯಕ್ರಮದಲ್ಲಿ ಜೊತೆಗಿದ್ದರು. , ಕಾರ್ಯಕ್ರಮದ ಕೊನೆಯಲ್ಲಿ ರೋಟರಿ ಸಂಸ್ಥೆ ವತಿಯಿಂದ ಸುಮಾರು 25 ಜನ ಪಲಾನುಭವಿ ಮಾತೆಯರಿಗೆ ಹಣ್ಣುಗಳನ್ನು ನೀಡಲಾಯಿತು.
Categories
ತಾಲೂಕು ಆಸ್ಪತ್ರೆ ಕಾರ್ಕಳ ಮತ್ತು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಸಹಯೋಗದಲ್ಲಿ ಸ್ತನ್ಯ ಪಾನ ಮಾಹಿತಿ ಕಾರ್ಯಕ್ರಮವು ಕಾರ್ಕಳ ಸರಕಾರಿ ತಾಲೂಕು ಆಸ್ಪತ್ರೆಯಲ್ಲಿ ನಡೆಯಿತು.