ಕುಪ್ಪಳಿಯಲ್ಲಿ ನಾಯಕತ್ವ ತರಬೇತಿ ಶಿಬಿರ
– ಕರಾವಳಿ, ಮಲೆನಾಡು ಭಾಗದ ಯುವ ಜನತೆಗೆ ಅವಕಾಶ… ನೀವೂ ಭಾಗಿಯಾಗಬಹುದು
– ಮಲೆನಾಡು ಕರಾವಳಿ ಜನರ ದನಿಯಾಗುತ್ತೆ ಶಿಬಿರ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಕರಾವಳಿ ಜನಪದ ಒಕ್ಕೂಟದ ವತಿಯಿಂದ ದಿನಾಂಕ: 16-12-2023 ರ ಶನಿವಾರದಿಂದ 17-12-2023 ರವರೆಗೆ ನಾಯಕತ್ವ ತರಬೇತಿ ಶಿಬಿರವನ್ನು ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯ ಹೇಮಾಂಗಣದಲ್ಲಿ ಆಯೋಜನೆ ಮಾಡಲಾಗಿದೆ. ಮಲೆನಾಡು ಕರಾವಳಿ ಜನರ ಬದುಕು, ಭಾವನೆ, ಶ್ರದ್ಧೆ, ನಂಬಿಕೆಗಳ ಗಟ್ಟಿ ಧ್ವನಿಯಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಹಾಸನ ಜಿಲ್ಲೆಯ ಮಲೆನಾಡು ಭಾಗದ ಯುವ ಜನರು ಭಾಗವಹಿಸಬಹುದು.
ಮಲೆನಾಡು ಕರಾವಳಿ ಜನಪದ ಒಕ್ಕೂಟ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಯಾಗಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನಿಕ ಸಂಘಟನೆಯಲ್ಲಿ ನಮ್ಮ ಅಚಲ ನಂಬಿಕೆ ಇದೆ. ನಾಯಕತ್ವ ತರಬೇತಿ ಶಿಬಿರಕ್ಕೆ ಭಾಗವಹಿಸುವವರು.
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ: 8277066108, 9448245272, 9448241148
