Categories
ತೀರ್ಥಹಳ್ಳಿ

ನ.17ಕ್ಕೆ ಡಿ.ಬಿ.ಸಿ ಶ್ರದ್ಧಾಂಜಲಿ, ನುಡಿ ನಮನ..!

ನ.17ಕ್ಕೆ ಡಿ.ಬಿ.ಸಿ ಶ್ರದ್ಧಾಂಜಲಿ, ನುಡಿ ನಮನ..!
– ಡಿ.ಬಿ.ಚಂದ್ರೇಗೌಡ ಅಭಿಮಾನಿ ಬಳಗದಿಂದ ಆಯೋಜನೆ
– ತೀರ್ಥಹಳ್ಳಿಗೆ ಡಿಬಿಸಿ ಕೊಡುಗೆ ನೆನಪಿಸುವ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ಮಾಜಿ ಸಚಿವ, ರಾಜಕಾರಣಿ ಡಿ.ಬಿ.ಚಂದ್ರೇಗೌಡ ಅಭಿಮಾನಿ ಬಳಗ, ತೀರ್ಥಹಳ್ಳಿ ಇವರ ವತಿಯಿಂದ ನ.17ಕ್ಕೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವನ್ನು ತೀರ್ಥಹಳ್ಳಿಯಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ 10-30ರಿಂದ ಗಾಯತ್ರಿ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರದ ಧೀಮಂತ ರಾಜಕಾರಣಿ, ಶಾಸಕಾಂಗದ ನಾಲ್ಕು ಸದನಗಳಲ್ಲೂ ಕಾರ್ಯ ನಿರ್ವಹಿಸಿರುವ ಮುತ್ಸದ್ದಿ, ಜಾತ್ಯಾತೀತ ನಿಲುವು, ದ್ವೇಷರಹಿತ ನಡವಳಿಕೆಗಳಿಂದ ಜನಮಾನಸದಲ್ಲಿ ನೆಲೆ ಊರಿರುವ ಆದರ್ಶ ಜನಪ್ರತಿನಿಧಿ ಚಂದಗೌಡರ ಅಗಲುವಿಕೆ ನಮಗೆಲ್ಲ ಅತೀವ ನೋವ ತಂದಿದೆ, ತೀರ್ಥಹಳ್ಳಿ ಕ್ಷೇತ್ರದ ಜೊತೆ ಅವರ ಅವಿನಾಭಾವ ಸಂಬಂಧ, ವರಾಹಿ ಮುಳುಗಡೆ ಸಂತ್ರಸ್ತರ ಬಗೆಗಿನ ಅವರ ಕಾಳಜಿ ಸೇರಿ ಅವರ ಜನಪರ ನಿಲುವು,ನಮ್ಮನ್ನು ಅಗಲಿದರೂ ಅವರ ನೆನಪು ಸದಾ ನಮ್ಮೊಡನಿದೆ.

ಅವರ ಒಡನಾಡಿಗಳು, ಅಭಿಮಾನಿಗಳು ಕಲೆತು ಅವರಿಗೆ ನುಡಿ ನಮನ ಸಲ್ಲಿಸಬೇಕೆಂಬ ಹಲವು ಮನಸ್ಸುಗಳ ತುಡಿತವನ್ನು ಮನಗಂಡು ಈ ಹಮ್ಮಿಕೊಳ್ಳಲಾಗಿದೆ. ಚಂದ್ರೇಗೌಡರನ್ನು ಸ್ಥರಿಸುವ ಈ ಕಾರ್ಯಕ್ರಮಕ್ಕೆ ತೀರ್ಥಹಳ್ಳಿ ಕ್ಷೇತ್ರದ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಡಿ.ಬಿ.ಸಿ. ಅಭಿಮಾನಿ ಹಿತೈಷಿಗಳು ಪಾಲ್ಗೊಳ್ಳಬೇಕಾಗಿ ಕೋರಲಾಗಿದೆ.
ಅಧ್ಯಕ್ಷತೆಯನ್ನು ಕೆ .ಪ್ರಕಾಶ ಶೆಟ್ಟರು, ಜನತಾ ಪರಿವಾರದ ಪ್ರಮುಖರು ವಹಿಸಲಿದ್ದಾರೆ. ನುಡಿ ನಮನವನ್ನು ಕಿಮ್ಮನೆ ರತ್ನಾಕರ್, ಮಾಜಿ ಶಿಕ್ಷಣ ಸಚಿವರು ಮಾಡಲಿದ್ದಾರೆ. ಸಂಚಾಲಕರು ಮತ್ತು ಸದಸ್ಯರು, ಡಿ.ಬಿ.ಚಂದ್ರೇಗೌಡ ಅಭಿಮಾನಿ ಬಳಗ, ತೀರ್ಥಹಳ್ಳಿ ಸರ್ವರನ್ನು ಸ್ವಾಗತಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.