Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಸುತ್ತಮುತ್ತ ಸಿಡಿಲು: ಭಾರಿ ಎಫೆಕ್ಟ್!

ಟಾಪ್ 3 ನ್ಯೂಸ್

ತೀರ್ಥಹಳ್ಳಿಯ ಸುತ್ತಮುತ್ತ ಸಿಡಿಲು: ಭಾರಿ ಎಫೆಕ್ಟ್!
– ಸಿಡಿಲು ಬಡಿದು 93 ಚೀಲ ಅಡಿಕೆ ಹಾನಿ: ಹಲವೆಡೆ ಮರ ಧರೆಗೆ

ಮಹಿಷಿ ಉತ್ತರಾದಿ ಮಠದಲ್ಲಿ ಕಳ್ಳತನ: ತನಿಖೆ ಜೋರು!
– ಪೋಲಿಸ್ ಇಲಾಖೆ ಕಳ್ಳರ ಪತ್ತೆಗೆ ಯತ್ನ: ಆರಗ ಭೇಟಿ

ಮುಂದಿನ ದಿನಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ
– ಸಿಡಿಲು ಗುಡುಗು,ವಿದ್ಯುತ್ ಗಳಿಂದ ಅವಘಡ ಎಚ್ಚರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅನಾಹುತ ಹೆಚ್ಚಾಗಿವೆ.
ಶನಿವಾರ ರಾತ್ರಿ ಭೀಕರ ಮಳೆ ಮತ್ತು ಗುಡಗು ಸಿಡಿಲಿನಿಂದ ಮೇಗರವಳ್ಳಿ ಸಮೀಪದ ಮೂಡುವಲ್ಲಿ ರಜತ್ ಹೆಗಡೆ ಅವರ ಮನೆಯಲ್ಲಿ ಅಡಿಕೆ ಗೋಡನ್ನಿಗೆ ಸಿಡಿಲು ಬಡಿದು ಅಪಾರ ಪ್ರಮಾಣದ ಅಡಿಕೆ ಸುಟ್ಟು ಕರಗಲಾಗಿದ್ದು, ಅನೇಕ ಪ್ರಮಾಣದ ಕೃಷಿ ಉಪಕರಣಗಳು ಕೂಡ ಸುಟ್ಟು ಹೋಗಿವೆ. ಅವರ ಮನೆಗೆ ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಡಾ ಆರ್ ಎಂ ಮಂಜುನಾಥ್ ಗೌಡ ಮತ್ತು ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಮಲೆನಾಡಿನಲ್ಲಿ ಈ ಭಾರಿ ಮಳೆಯಿಂದ ಈಗಾಗಲೇ ಸಾಕಷ್ಟು ಅನಾಹುತಗಳು ಸಂಭವಿಸಿದೆ. ಜನರು ಹೆಚ್ಚು ಜಾಗೃತಿಯಿಂದ ಇರಬೇಕಿದೆ.

ಮಹಿಷಿ ಉತ್ತರಾದಿ ಮಠದಲ್ಲಿ ಕಳ್ಳತನ: ಪೋಲಿಸ್ ಇಲಾಖೆ ಕಳ್ಳರ ಪತ್ತೆಗೆ ಯತ್ನ

ಮಹಿಷಿ ಉತ್ತರಾದಿ ಮಠದಲ್ಲಿ ಕಳ್ಳತನವಾಗಿದ್ದು, ಅನೇಕ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. 50,000 ಹಣ ಮತ್ತು ನಾಲ್ಕು ಮೊಬೈಲ್ ಗಳು ಕಳ್ಳತನವಾಗಿದೆ. ಈಗಾಗಲೇ ತನಿಖೆ ಕೂಡ ಜೋರಾಗಿದೆ. ಪೋಲಿಸ್ ಇಲಾಖೆ ಕೂಡ ಕಳ್ಳರ ಪತ್ತೆಗೆ ಸಾಕಷ್ಟು ಮುಂದಾಗಿದ್ದಾರೆ. ಜೊತೆಗೆ ಶಾಸಕ ಆರಗ ಜ್ಞಾನೇಂದ್ರವರು ಹಾಗೂ ಅನೇಕ ಅಧಿಕಾರಿಗಳು ಭೇಟಿ ನೀಡಿದ್ದರು, ಬಿಜೆಪಿ ತಾಲೂಕ್ ಅಧ್ಯಕ್ಷರಾದ ಹೆದ್ದೂರು ನವೀನ್, ಜಯಂತ್ ಮಹಿಷಿ ಪ್ರದೀಪ್ ಗಬಡಿ ಭುಜಂಗ ಶೆಟ್ಟಿ ಮಾಳೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಾಸಕರೊಂದಿಗೆ ಇದ್ದರು.
ಮಠದ ಪ್ರಮುಖರಿಗೆ ಧೈರ್ಯ ಹೇಳಿ,ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಕಳ್ಳರ ಗುಂಪನ್ನು ಬಂಧಿಸಲು ಆಗ್ರಹಿಸಿದರು.

ಮುಂದಿನ ದಿನಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ..!!

ಮಲೆನಾಡಿನ ಸುತ್ತಮುತ್ತ ಈಗಾಗಲೇ ಭಾರಿ ಮಳೆಯಾಗುತ್ತಿದ್ದು ಈ ಮಳೆಯಿಂದ ಬಾರಿ ಅನಾಹುತಗಳು ಕೂಡ ಸಂಭವಿಸುತ್ತ ಇದೆ. ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಏಕೆಂದರೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬರುವಂತಹ ಗುಡುಗು,ಸಿಡಿಲು ತುಂಬಾ ಅಪಾಯಕಾರಿಯಾಗಿರುತ್ತದೆ ಇದು ಪ್ರಾಣ ಹಾನಿಯನ್ನು ಕೂಡ ಉಂಟು ಮಾಡಬಹುದು ಆದ್ದರಿಂದ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು. ವಿದ್ಯುತ್ ಅವಘಡಗಳು ಕೂಡ ಸಂಭವಿಸುವ ಸಾಧ್ಯತೆ ಇರುತ್ತದೆ ನೀವು ಓಡಾಡುವಂತಹ ಸುತ್ತಮುತ್ತಲು ಇರುವಂತಹ ಜಾಗದಲ್ಲಿ ಎಚ್ಚರಿಕೆಯಿಂದ ಸಂಚಾರ ಮಾಡುವುದು ಉತ್ತಮ. ಮುಂದಿನ ದಿನಗಳಲ್ಲಿ ಕೂಡ ಸಾಕಷ್ಟು ಮಳೆ ಉಂಟಾಗಿ ಅನಾಹುತಗಳು ಕೂಡ ಸಂಭವಿಸಬಹುದು ಎಚ್ಚರ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.