Categories
ಮಂಗಳೂರು

ಸರಕಾರದ ಹಣ ಪೋಲು ಮಾಡುತ್ತಿರುವ PWD ಇಲಾಖೆ

ಸರಕಾರದ ಹಣ ಪೋಲು ಮಾಡುತ್ತಿರುವ PWD ಇಲಾಖೆ
– ಜಮೀನಿಗೆ PWD ಇಲಾಖೆಯಿಂದ ತಡೆಗೋಡೆ ನಿರ್ಮಾಣ
– ನದಿಗೆ ಹಾಕಿದ ಮಣ್ಣು ತೆಗೆಯಬೇಕು, ಇಲ್ಲದಿದ್ದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ವತಿಂದ ದೊಡ್ಡ ಮಟ್ಟದ ಹೋರಾಟ

NAMMUR EXPRESS NEWS
ಬಜ್ಪೆ : ಮಳವೂರು ಸೇತುವೆ ಕೆಳಗೆ ಖಾಸಗಿ ಜಮೀನಿಗೆ PWD ಇಲಾಖೆಯಿಂದ ತಡೆಗೋಡೆ ನಿರ್ಮಿಸುವ ಉದ್ದೇಶದಿಂದ, ನದಿಗೆ ಮಣ್ಣು ತುಂಬಿಸುವ ಕೆಲಸ ಬರದಿಂದ ಸಾಗುತ್ತಿದೆ. ಬಜ್ಪೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದ ಬಳಿಕ ಜನಸಾಮಾನ್ಯರ ಮೂಲಭೂತ ಕೆಲಸ ಮಾಡಲು ಅನುದಾನವಿಲ್ಲದೆ ಒದ್ದಾಡುತ್ತಿರುವಾಗ, ಸುಮಾರು 4 ಕೋಟಿಯಷ್ಟು ಹಣವನ್ನು ವಿನಿಯೋಗಿಸುತ್ತಿರುವ PWD ಇಲಾಖೆ ,ಸರಕಾರದ ಖಜಾನೆಗೆ ಕನ್ನ ಹಾಕುತ್ತಿರುವುದು ಈ ಭಾಗದ ಜನಪ್ರಧಿನಿಧಿಗಳಿಗೆ ಕಾಣದೆ ಇರುವುದು ವಿಪರ್ಯಾಸ. ನದಿಗೆ ಮಣ್ಣು ತುಂಬಿಸುವುದರಿಂದ ಮಳೆಗಾಲದಲ್ಲಿ ಬರದಿಂದ ಹರಿಯುವ ನೀರು ಸರಾಗವಾಗಿ ಹರಿಯಲು ತಡೆಯಾಗಿ ಸಮೀಪದ ಜಾಮೀನು ಮತ್ತು ಮನೆಗಳಿಗೆ ಹಾನಿಯಾಗುವುದಕ್ಕೆ ಕಾರಣವಾಗಬಹುದು. ರಿಯಲ್ ಎಸ್ಟೇಟ್ ಮಾಫಿಯಾದವರನ್ನು ತೃಪ್ತಿಪಡಿಸಲು ಹೊರಟ ಇಲಾಖೆ, ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜನರ ಕಣ್ಣಿಗೆ ಕಾಣುದಿಲ್ಲ ಅನ್ನುವ ಭ್ರಮೆ ಬಿಟ್ಟು ಬಿಡಿ. ಈ ಕೂಡಲೇ ಕೆಲಸ ನಿಲ್ಲಿಸಿ ನದಿಗೆ ಹಾಕಿದ ಮಣ್ಣು ತೆಗೆಯಬೇಕು, ಇಲ್ಲದಿದ್ದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ವತಿಂದ ದೊಡ್ಡ ಮಟ್ಟದ ಹೋರಾಟ ಮಾಡುವ ಮೂಲಕ ನದಿಗೆ ಹಾಕಿದ ಮಣ್ಣು ತೆಗೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು PWD ಇಲಾಖಾಧಿಕಾರಿಗಳಿಗೆ ಮೌಖಿಕವಾಗಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.