ತೀರ್ಥಹಳ್ಳಿಯಲ್ಲಿ ಹುಚ್ಚನ ಹುಚ್ಚಾಟ..!
– ರಸ್ತೆಯಲ್ಲಿ ಸಿಕ್ಕವರಿಗೆ ಕಿರಿಕಿರಿ: ಯುವತಿಯರಿಗೆ ಕೀಟಲೆ
– ಬಸ್ ನಿಲ್ದಾಣದಲ್ಲಿ ಹೆಚ್ಚಾಯ್ತು ಕುಡುಕರ ಕಾಟ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಹುಚ್ಚನೊಬ್ಬ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ಹುಚ್ಚಾಟ ಮೆರೆಯುತ್ತಿದ್ದಾನೆ. ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಕಿರಿಕಿರಿ ಮಾಡುತ್ತಿದ್ದಾನೆ. ಇದರಿಂದ ಪಟ್ಟಣದಲ್ಲಿ ಓಡಾಡಲು ಜನರು ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆ ಮಧ್ಯ ನಿಂತು ಕೂಗಾಡುತ್ತಾ, ಇನ್ನು ಯುವತಿಯರಿಗೆ ಕೂಡ ಕೀಟಲೆ ನೀಡುತ್ತಿದ್ದು, ಇದರಿಂದ ಯುವತಿಯರಿಗೆ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಈತನ ಅಸಭ್ಯ ವರ್ತನೆಯಿಂದ ಯುವತಿಯರು ಹಾಗೂ ಮಹಿಳೆಯರು ಪಟ್ಟಣದಲ್ಲಿ ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಈ ಬಗ್ಗೆ ಸಂಬಂಧಪಟ್ಟವರು ಗಮನಿಸಬೇಕೆಂದು ಸಾರ್ವಜನಿಕರು ಕೋರಿದ್ದಾರೆ.
ಬಸ್ ನಿಲ್ದಾಣದಲ್ಲಿ ಕುಡುಕರ ಕಾಟ!
ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ಕುಡುಕರು, ಕೆಲ ಯುವಕರ ಕಿರಿಕಿರಿ ಹೆಚ್ಚಾಗಿದೆ. ಮದ್ಯ, ಗಾಂಜಾ ಸೇವನೆ ಮಾಡಿ ಅಸಭ್ಯ ವರ್ತನೆ ಹೆಚ್ಚಾಗಿದೆ ಎಂದು ಸ್ಥಳೀಯ ವರ್ತಕರು ಆರೋಪಿಸಿದ್ದಾರೆ. ಈ ಬಗ್ಗೆ ತಕ್ಷಣ ಪೊಲೀಸ್ ಇಲಾಖೆ ಗಮನಿಸಬೇಕಿದೆ.