Categories
ತೀರ್ಥಹಳ್ಳಿ

ತೀರ್ಥಹಳ್ಳಿ ದೇಗುಲದಲ್ಲಿ ಮಹಾಲಕ್ಷ್ಮಿ ಹಬ್ಬದ ಸಂಭ್ರಮ

ತೀರ್ಥಹಳ್ಳಿ ದೇಗುಲದಲ್ಲಿ ಮಹಾಲಕ್ಷ್ಮಿ ಹಬ್ಬದ ಸಂಭ್ರಮ
– ಮುಂಜಾನೆಯಿಂದಲೇ ಭಕ್ತರ ಕ್ಯೂ… ವಿಶೇಷ ಪೂಜೆ
– ಮನೆ ಮನೆಯಲ್ಲಿ ಮಹಾಲಕ್ಷ್ಮಿ ಪೂಜೆ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನಲ್ಲಿ ವರ ಮಹಾಲಕ್ಷ್ಮಿ ಹಬ್ಬವನ್ನು ಮಹಿಳೆಯರು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು. ತಳಿರು ತೋರಣಗಳಿಂದ ನಾನಾ ಜಾತಿಯ ಫಲ ಪುಷ್ಪಗಳಿಂದ ಸಿಂಗರಿಸಿದ, ವರಮಹಾಲಕ್ಷ್ಮಿಯನ್ನು ಪೂಜೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ತೀರ್ಥಹಳ್ಳಿಯ ರಥಬೀದಿ ವೆಂಕಟರಮಣ ದೇವಾಲಯ, ಮಾರಿಕಾಂಬಾ ದೇವಸ್ಥಾನ, ಇಂದಾವರ ಮಹಾಲಕ್ಷ್ಮಿ ದೇವಸ್ಥಾನ ಸೇರಿ ಅನೇಕ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು.
ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಮಾಡಿ ದೇವಿಯ ದರ್ಶನ ಪಡೆದರು. ಮನೆ ಮನೆಯಲ್ಲಿ ಮಹಾಲಕ್ಷ್ಮಿ ಪೂಜೆ ಮಾಡಲಾಯಿತು. ಬಟ್ಟೆ ಅಂಗಡಿ, ಚಿನ್ನದ ಅಂಗಡಿಗಳಲ್ಲಿ ಜನ ಹೆಚ್ಚಾಗಿದ್ದು ಕಂಡು ಬಂತು. ಇಂದು ಅನೇಕ ಹೊಸ ಉದ್ಯಮಗಳು ಶುರುವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.