ತೀರ್ಥಹಳ್ಳಿಯಲ್ಲಿ ಮಕರ ಸಂಕ್ರಾಂತಿ ರಥೋತ್ಸವ
– ಐದನೇಯ ದಿನಕ್ಕೆ ಕಾಲಿಟ್ಟ ಜಾತ್ರೆ; ಕಡಿಮೆಯಾಗದ ಜಾತ್ರೆ ಸಂಭ್ರಮ!
– ಮೋದಿ ಮತ್ತೊಮ್ಮೆ ಎಂದು ರಥಕ್ಕೆ ಬಾಳೆಹಣ್ಣು ಎಸೆದ ಕಾರ್ಯಕರ್ತರು!
NAMMUR EXPRESS NEWS
ತೀರ್ಥಹಳ್ಳಿ: ಮಕರ ಸಂಕ್ರಮಣದ ಅಂಗವಾಗಿ ಶ್ರೀ ರಾಮೇಶ್ವರನಿಗೆ ವಿಶೇಷ ಪೂಜೆ ಹಾಗೂ ರಥೋತ್ಸವ ಆರಂಭವಾಗಿದೆ. ಬೆಳಗ್ಗೆ 11.30ಕ್ಕೆ ಪೂಜಾ ಕೈಂಕರ್ಯ ಆರಂಭವಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ. ಶ್ರೀರಾಮೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ರಾಮೇಶ್ವರನ ದರ್ಶನ ಪಡೆಯುತ್ತಿದ್ದಾರೆ. ನಂತರ ಸರ್ವರಿಗೂ ಅನ್ನಸಂತರ್ಪಣೆ ನಡೆಯಲಿದೆ. ಎಳ್ಳಮಾವಾಸ್ಯೆ ಜಾತ್ರೆಯ ಸೊಬಗು ಇಂದು ಕೊನೆಗೊಳ್ಳಲಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಸರ್ಕಾರಿ ರಜೆ ಮತ್ತು ಎಲ್ಲವೂ ವಾರಾಂತ್ಯದಲ್ಲಿ ಬಂದ ಸಲುವಾಗಿ ಹಾಗೂ ಹಲವು ಕಡೆ ಸಂಕ್ರಾತಿ, ಜಾತ್ರೆ ಉತ್ಸವಗಳು ಜ.14 ಕ್ಕೆ ಮುಗಿದ ಕಾರಣ ಕೆಲವು ಕಡೆಗಳಲ್ಲಿ ಮಾತ್ರ ಈ ದಿನ ಸಂಕ್ರಮಣದ ಆಚರಣೆಯಿದೆ.
ತೀರ್ಥಹಳ್ಳಿಯ ರಾಮೇಶ್ವರದಲ್ಲೂ ಈ ದಿನ ಆಚರಣೆಯಿದ್ದು ಅಪಾರ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಿದ್ದಾರೆ. ನಿನ್ನೆ ಇಡೀ ದಿನ ಸುಮಾರು 25ಸಾವಿರ ಜನ ಜಾತ್ರೆಗೆ ಆಗಮಿಸಿದ್ದು ಇಂದೂ ಅಷ್ಟೇ ಜನ ಆಗಮಿಸುವ ನಿರೀಕ್ಷೆ ಇದೆ. ಸರ್ವರಿಗೂ ಅನ್ನ ಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿದೆ.ಚುನಾವಣೆ ಸಮೀಪಿಸುತ್ತಿದಂತೆ ಈ ಬಾರಿ ಶತಾಯಗತಾಯ ತಮ್ಮ ಇಷ್ಟದ ನಾಯಕರನ್ನು ಗೆಲ್ಲಿಸಬೇಕೆಂದು ಕಾರ್ಯಕರ್ತರು ವಿವಿಧ ಭರವಸೆ ನೀಡುವ ಮೂಲಕ ಗಮನ ಸೆಳೆದರೆ ಮತ್ತೆ ಕೆಲವರು ದೇವರ ಮೊರೆ ಹೋಗುತ್ತಾರೆ. ಇದಕ್ಕೆ ಪೂರಕವಾಗಿ ತೀರ್ಥಹಳ್ಳಿ ವಿಧಾನ ಕ್ಷೇತ್ರದಲ್ಲಿ ನಡೆದ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಇಂತಹ ಒಂದು ಘಟನೆ ನಡೆದಿದೆ.
