Categories
ತೀರ್ಥಹಳ್ಳಿ

ತೀರ್ಥಹಳ್ಳಿ ಜಾತ್ರೆಯಲ್ಲಿ ಹಣ ಕಳೆದುಕೊಳ್ಳುವ ಗೇಮ್.!

ತೀರ್ಥಹಳ್ಳಿ ಜಾತ್ರೆಯಲ್ಲಿ ಹಣ ಕಳೆದುಕೊಳ್ಳುವ ಗೇಮ್.!
– ನೂರಾರು ಮಂದಿ ಹಣ ಕಳೆದುಕೊಂಡು ಕಣ್ಣೀರು
– ಬಸ್ ಚಾರ್ಜ್ ಗೂ ದುಡ್ಡಿಲ್ಲದೆ ಬಸ್ ಸ್ಟ್ಯಾಂಡಲ್ಲೇ ಮಲಗಿದರು!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಎಳ್ಳಮವಾಸ್ಯೆ ಜಾತ್ರೆಯಲ್ಲಿ ಇದೀಗ ಹಣ ಮಾಡುವ ದಂಧೆಯೊಂದು ಬಯಲಾಗಿದೆ. ನೂರಾರು ಮಂದಿ ಸಾವಿರಾರು ರೂ. ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಇಸ್ಪೀಟ್ ಮಾದರಿಯ ಆಟದಲ್ಲಿ ನೂರಾರು ಮಂದಿ ಸಾವಿರಾರು ರೂ ಹಣವನ್ನು ಕಳೆದುಕೊಂಡಿದ್ದಾರೆ ಎಂಬ ದೂರು ಇದೀಗ ಕೇಳಿ ಬಂದಿದೆ. ಪೊಲೀಸರು ಈ ಬಗ್ಗೆ ಗಮನಿಸಬೇಕಿದೆ. ಬೆಜ್ಜವಳ್ಳಿ ಜಾತ್ರೆಯಲ್ಲಿ ಈ ತರಹದ ಆಟವನ್ನು ಪೊಲೀಸರು ರೈಡ್ ಮಾಡಿದ್ದರು. ಆದರೆ ತೀರ್ಥಹಳ್ಳಿ ಜಾತ್ರೆಯಲ್ಲಿ ಈ ತರಹದ ಚಟುವಟಿಕೆ ನಡೆದಿರುವುದು ಇದುವರೆಗೆ ಯಾರು ಕಣ್ಣಿಗೂ ಬೀಳದಿರುವುದು ದುರಂತದ ವಿಚಾರ. ಈಗಾಗಲೇ ಸುಮಾರು 50ಕ್ಕೂ ಹೆಚ್ಚು ಮಂದಿ ಹತ್ತು ಸಾವಿರಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ತೀರ್ಥಹಳ್ಳಿ ಜಾತ್ರೆಯಲ್ಲಿ ಎರಡು ಕಡೆ ಈ ರೀತಿಯ ಆಟ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.