Categories
ತೀರ್ಥಹಳ್ಳಿ

ಮಕ್ಕಿಮನೆ ದೇಗುಲ ಅಭಿವೃದ್ಧಿಗೆ ಅಂಟಿಗೆ ಪಿಂಟಿಗೆ!

ಮಕ್ಕಿಮನೆ ದೇಗುಲ ಅಭಿವೃದ್ಧಿಗೆ ಅಂಟಿಗೆ ಪಿಂಟಿಗೆ!
– ಕಲಾನಾಥೇಶ್ವರ, ದುರ್ಗಾಪರಮೇಶ್ವರಿ, ಭದ್ರಕಾಳಿ ದೇಗುಲ: ದೇಗುಲ ಅಭಿವೃದ್ಧಿಗೆ ಬೇಕು ಧನ ಸಹಾಯ
– ದೇವಸ್ಥಾನಕ್ಕಾಗಿ ಹೊನ್ನೇಕಟ್ಟೆ ಗ್ರಾಮದಲ್ಲಿ ಅಂಟಿಗೆ ಪಿಂಟಿಗೆ

NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಕಲಾನಾಥೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಭದ್ರಕಾಳಿ ದೇವಸ್ಥಾನ, ಮಕ್ಕಿಮನೆ, ಹೊನ್ನೇಕಟ್ಟೆ, ಸಾಲೂರು ಗ್ರಾಮ, ಸಾಲೂರು ಅಂಚೆ, ತೀರ್ಥಹಳ್ಳಿ ತಾಲ್ಲೂಕು ಇಲ್ಲಿ ದೇಗುಲ ಅಭಿವೃದ್ಧಿಗಾಗಿ ಅಂಟಿಗೆ ಪಿಂಟಿಗೆ ಕಟ್ಟಲಾಗಿದೆ. ಈ ಮೂಲಕ ದೇವರ ಕೆಲಸಕ್ಕೆ ಗ್ರಾಮಸ್ಥರು ಜತೆಯಾಗಿದ್ದಾರೆ.

ದೇಗುಲ ಅಭಿವೃದ್ಧಿಗೆ ಧನ ಸಹಾಯಕ್ಕೆ ಮನವಿ

ತೀರ್ಥಹಳ್ಳಿ ತಾಲ್ಲೂಕು, ಸಾಲೂರು ಗ್ರಾಮದ ಮಕ್ಕಿಮನೆ, ಹೊನ್ನೇಕಟ್ಟೆ ಊರಿನಲ್ಲಿ ಇರುವ ಪುರಾಣ ಪ್ರಸಿದ್ಧವಾದ ಶ್ರೀ ಕಲಾನಾಥೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ಹಾಗೂ ಭದ್ರಕಾಲ ದೇವಸ್ಥಾನದ ಕಟ್ಟಡದ ನವೀಕರಣಕ್ಕೆ ಧನಸಹಾಯ ಅಗತ್ಯ ಇತ್ತು.ದೇವಸ್ಥಾನಗಳ ಕಟ್ಟಡವು ಶಿಥಿಲಗೊಂಡಿದ್ದು, ಕಟ್ಟಡ ನವೀಕರಿಸಲು ಸುಮಾರು 35.00 ಲಕ್ಷ ರೂಪಾಯಿಗಳ ವೆಚ್ಚವಿರುವ ಅಂದಾಜು ಮಾಡಿದ್ದು, ಇದಕ್ಕೆ ಬೇಕಾಗುವ ಹಣವನ್ನು ಪೂರ್ಣವಾಗಿ ದಾನಿಗಳಿಂದಲೇ ವಂತಿಗೆ ಮೂಲಕ ಸಂಗ್ರಹಿಸುವುದು, ಆದ್ದರಿಂದ ತಾವು ದಯಮಾಡಿ ಕಟ್ಟಡ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ನಿಮ್ಮ ಕೈಯಲ್ಲಾದ ಧನಸಹಾಯ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಸಂಪರ್ಕಿಸಿ: 9480329397, 9482207192

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.