ಮಲೆನಾಡು ಕರಾವಳಿ ಯುವ ನಾಯಕರ ಸಮಾಗಮ
– ಮಲೆನಾಡು ಕರಾವಳಿ ಜನಪರ ಒಕ್ಕೂಟದ ಆಯೋಜನೆ
– 250ಕ್ಕೂ ಹೆಚ್ಚು ಮಂದಿ ಭಾಗಿ: ನಾಳೆಯೂ ಶಿಬಿರ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಕರಾವಳಿ ಜನಪರ ಒಕ್ಕೂಟದ ವತಿಯಿಂದ ಕುಪ್ಪಳಿಯಲ್ಲಿ ಶನಿವಾರ ನಾಯಕತ್ವ ಶಿಬಿರ ಆರಂಭಗೊಂಡಿತು. ಭಾನುವಾರ ಕೂಡ ಈ ಶಿಬಿರ ನಡೆಯಲಿದೆ. ಮಲೆನಾಡು ಕರಾವಳಿ ಜನರ ಬದುಕು, ಭಾವನೆ, ಶ್ರದ್ಧೆ, ನಂಬಿಕೆಗಳ ಗಟ್ಟಿ ದನಿಯಾಗಿ ಈ ಶಿಬಿರ ಕೆಲಸ ಮಾಡಲಿದೆ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ ಜಿಲ್ಲೆಗಳ 250ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಖ್ಯಾತ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಇಲ್ಲಿನ ಜನರ ಹೋರಾಟ, ಸಾಂಸ್ಕೃತಿಕ ಸಮಾಗಮ, ಉದ್ಯೋಗ, ಅಭಿವೃದ್ಧಿ, ಕಲೆ, ಬದುಕು ಎಲ್ಲದರ ಅಭಿವೃದ್ಧಿ ಹಾಗೂ ವಿಚಾರಧಾರೆ ವಿನಿಮಯ, ನೇತೃತ್ವಕ್ಕೆ ಈ ಶಿಬಿರ ನಾಂದಿ ಹಾಡಲಿದೆ ಎಂದರು.
ರೋಷನಿ ಸಂವಿಧಾನ ಪೀಠಿಕೆ ಓದಿ ಉದ್ಘಾಟನೆ ಮಾಡಿದರು.
ಎಂ.ಜಿ ಹೆಗ್ಗಡೆ, ನೆಂಪೆ ದೇವರಾಜ್, ಅನಿಲ್ ಹೊಸಕೊಪ್ಪ ಇತರರು ಇದ್ದರು. ಎಂ.ಎನ್ ಮೂರ್ತಿ ಮಾತನಾಡಿ, ಇದು ಚಿಂತನೆಗೆ ಪೂರಕವಾಗುವ ವಾತಾವರಣ. ಇವತ್ತು ಯುವ ಜನತೆ ರಾಜಕೀಯ ಹಿಂದೆ ಹೋಗಿ ಕೆಟ್ಟ ಚಟುವಟಿಕೆಗೆ ಕಾರಣ ಆಗಿದೆ. ಎಲ್ಲಾ ಪಕ್ಷದಲ್ಲೂ ವಂಚಕರೇ. ಮುಂದಿನ ಪೀಳಿಗೆಯ ಅಭಿವೃದ್ಧಿ ಯಾರಿಗೂ ಬೇಕಿಲ್ಲ.. ಮಕ್ಕಳು ದಿನ ದಿನೇ ಹಾಳಾಗುತ್ತಿದ್ದಾರೆ. ಮಲೆನಾಡು ಕರಾವಳಿ ಅಭಿವೃದ್ಧಿ ಮಂಡಳಿ ರಚನೆ ಆಗಿದೆ. ಎಲ್ಲಾ ಸಮಸ್ಯೆಗೆ ನಾವು ದನಿ ಆಗಬೇಕು ಎಂದರು. ಆಯೋಜಕರು ಮಲೆನಾಡು ಮತ್ತು ಕರಾವಳಿ ಹೋರಾಟಕ್ಕೆ ನೂರಾರು ಮಂದಿ ಜತೆಗೂಡಿದ್ದಾರೆ. ಎಲ್ಲರೂ ಸೇರಿ ಸಂಘಟನೆ ಕಟ್ಟೋಣ ಎಂದು ಕರೆ ನೀಡಿದರು. 250ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.