Categories
ತೀರ್ಥಹಳ್ಳಿ

20 ಸಾವಿರ ಕಿಲೋಮೀಟರ್ ಸೈಕಲ್ ಪಯಣ!

20 ಸಾವಿರ ಕಿಲೋಮೀಟರ್ ಸೈಕಲ್ ಪಯಣ!
– ದಿ ಗ್ರೇಟ್ ಅಪ್ಪು ಅಭಿಮಾನಿ ತೀರ್ಥಹಳ್ಳಿಯಲ್ಲಿ
– 1111 ದಿನಗಳ ಸೈಕಲ್ ಪ್ರವಾಸದಲ್ಲಿ ಪರಿಸರ ಪ್ರೇಮ
– ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಸನ್ಮಾನದ ಗೌರವ

NAMMUR EXPRESS NEWS
ತೀರ್ಥಹಳ್ಳಿ: ಪುನೀತ್ ಅವರ ಅಭಿಮಾನಿಯಾದ ‘ಮುತ್ತು ಸೆಲ್ವನ್’ ಅವರು ತೀರ್ಥಹಳ್ಳಿಗೆ ‌ಶುಕ್ರವಾರ ಸಂಜೆ ಆಗಮಿಸಿದ್ದು ಈ ಮೂಲಕ ಮಲೆನಾಡಿಗೆ ಭೇಟಿ ಕೊಟ್ಟಿದ್ದು ಮುಂದಿನ ಪ್ರಯಾಣ ಬೆಳೆಸಲಿದ್ದಾರೆ. ತೀರ್ಥಹಳ್ಳಿಗೆ ಆಗಮಿಸಿದಾಗ 19,944 ಕಿಲೋ ಮೀಟರ್ ಸೈಕಲ್ ಹೊಡೆದು ಸಾಧನೆ ಮಾಡಿದ್ದರು. ಶೃಂಗೇರಿ, ಕೊಪ್ಪ, ನ. ರಾ.ಪುರ, ತೀರ್ಥಹಳ್ಳಿ ಪಯಣದ ಬಳಿಕ ಶಿವಮೊಗ್ಗ ಪಯಣ ಮುಂದುವರಿಸಿದ್ದಾರೆ. ತೀರ್ಥಹಳ್ಳಿಗೆ ಆಗಮಿಸಿದ ವೇಳೆ ನಮ್ಮೂರ್ ಎಕ್ಸ್‌ಪ್ರೆಸ್‌ ಕಚೇರಿಗೆ ಭೇಟಿ ನೀಡಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಯಾರಿವರು..?

ಮೂಲತಃ ತಮಿಳುನಾಡಿನ ಮುತ್ತು ಸೆಲ್ವನ್ ಅಲಿಯಾಸ್ ಲೆಗ್ ಮಷೀನ್ ಅವರು ಅಪ್ಪುವಿನ ಅಪಾರ ಅಭಿಮಾನಿಯಾಗಿದ್ದು ಅಪ್ಪು ತೀರಿಕೊಂಡ ಒಂದು ತಿಂಗಳ ಬಳಿಕ ಆರಂಭವಾದ ಅವರ ಪ್ರಯಾಣ ಇನ್ನೂ ನಡೆಯುತ್ತಲೇ ಇದೆ. ಸೈಕಲ್‌ ನಲ್ಲಿ ಇದುವರೆಗೂ 20 ಸಾವಿರ ಕಿಲೋಮೀಟರ್ ಪ್ರವಾಸ ಮಾಡಿದ್ದು ಪ್ರವಾಸಕ್ಕೆ 1111 ದಿನಗಳು ಮತ್ತು 34,300 ಕಿಲೋ ಮೀಟರ್ ಗಳನ್ನು ಗುರಿಯಾಗಿರಿಸಿಕೊಂಡಿದ್ದಾರೆ. ಇವರ ಈ ಪ್ರಯಾಣದಲ್ಲಿ ಇದುವರೆಗೂ ನೂರಾ ಎಂಟು ಟೈರ್ ಸವೆದುಹೋಗಿದ್ದು ಇದೀಗ ಮೂರನೇ ಸೈಕಲ್ ಆಗಿದೆ. ಇವರ ಈ ಸೈಕಲ್ ಪ್ರವಾಸ ಸಧ್ಯದಲ್ಲೇ ಗಿನ್ನಿಸ್ ಮತ್ತು ವರ್ಲ್ಡ್ ರೆಕಾರ್ಡ್ ಸೇರಲಿದೆ. ತಮಿಳುನಾಡು ಯುವಕನ ಪುನೀತ್ ಅಭಿಮಾನ, ಕನ್ನಡ ಜೊತೆಗೆ ಪರಿಸರ ಪ್ರೇಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಸಂಘ ಸಂಸ್ಥೆಗಳಿಂದ ಅದ್ದೂರಿ ಸನ್ಮಾನ!

ತೀರ್ಥಹಳ್ಳಿಗೆ ಆಗಮಿಸಿದ ಮುತ್ತು ಸೆಲ್ವನ್ ನಮ್ಮೂರ್ ಎಕ್ಸ್‌ಪ್ರೆಸ್‌ ನ್ಯೂಸ್ ಕಚೇರಿ, ಪಟ್ಟಣ ಪಂಚಾಯ್ತಿ, ಕರ್ನಾಟಕ ರಕ್ಷಣಾ ವೇದಿಕೆ, ಸ್ಥಳೀಯ ವರ್ತಕರು ಹಾಗೂ ಹೋಟೆಲ್ ಅನ್ನಪೂರ್ಣ ಗ್ರ್ಯಾಂಡ್ ವತಿಯಿಂದ ಸನ್ಮಾನ ಮತ್ತು ಅಭಿನಂದನೆಗಳನ್ನು ಸಲ್ಲಿಸಲಾಯಿತು. ಇವರ ಮುಂದಿನ ಪ್ರಯಾಣ ಯಶಸ್ವಿಯಾಗಲೆಂದು ನಮ್ಮೂರ್ ಎಕ್ಸ್‌ಪ್ರೆಸ್‌ ಶುಭ ಹಾರೈಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.