ಮಲ್ನಾಡೋತ್ಸವ -2025ಕ್ಕೆ ಅದ್ದೂರಿ ತೆರೆ..!
– ನೂರಾರು ಕಲಾವಿದರಿಗೆ ವೇದಿಕೆ: ಒಂದೇ ವೇದಿಕೆಯಲ್ಲಿ ಸಾವಿರಾರು ಜನರಿಗೆ ಅನುಕೂಲ
– ಪ್ರತಿ ದಿನ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ಕ್ಕೆ ಜನರು ಫಿದಾ
– ಮಲೆನಾಡು ಮಾತ್ರವಲ್ಲ ರಾಜ್ಯಕ್ಕೆ ಮಾದರಿ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಮೂರು ದಿನಗಳ ಕಾಲ ನಡೆದ ಮಲ್ನಾಡೋತ್ಸವ -2025 ಸೋಮವಾರ ಅದ್ದೂರಿಯಾಗಿ ತೆರೆ ಕಂಡಿತು.
ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸಂಸ್ಥೆಯ ಹತ್ತನೇ ವರ್ಷದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಕೃಷಿ ಮೇಳ, ಅರೋಗ್ಯ ಮೇಳ, ಶಿಕ್ಷಣ ಮೇಳ, ಉದ್ಯೋಗ ಮೇಳ,. ಕಲಾ ಮೇಳ ಸೇರಿ ನೃತ್ಯ, ಕಾಮಿಡಿ, ಡ್ಯಾನ್ಸ್, ಚಿತ್ರ ಕಲೆ, ಮಿಮಿಕ್ರಿ ಗಮನ ಸೆಳೆಯಿತು.
ಶಾಂತವೇರಿ ಗೋಪಾಲ ಗೌಡ ರಂಗಮಂದಿರ, ಸಂಸ್ಕೃತಿ ಮಂದಿರ ಆವರಣ, ಗರ್ಲ್ಸ್ ಹೈ ಸ್ಕೂಲ್ ಅಲ್ಲಿ ಮೂರು ದಿನವೂ ವಿವಿಧ ಸಾಮಾಜಿಕ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಗಣ್ಯರು ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾವಿರಾರು ಮಂದಿಗೆ ವಿಶೇಷ ವೇದಿಕೆ ಸೃಷ್ಟಿ ಆಯಿತು.
