ದೇವರ ಮೊರೆ ಹೋದ ಮಂಜುನಾಥ ಗೌಡ ಕುಟುಂಬ!
– ಕುಕ್ಕೆ, ಧರ್ಮಸ್ಥಳ,ಪೆರ್ಡೂರು, ಸೌತಡ್ಕ ದೇವರಿಗೆ ಪೂಜೆ
– ಕಾನೂನು ಸಂಕಷ್ಟದಿಂದ ಪಾರು ಮಾಡಲು ದೇವರಲ್ಲಿ ಪ್ರಾರ್ಥನೆ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಶಿಮೂಲ್ ನಿರ್ದೇಶಕರು ಸೇರಿ ಅನೇಕ ಹುದ್ದೆ ಮೂಲಕ ಜನರ ಸೇವೆಯಲ್ಲಿರುವ ಸಹಕಾರ ನಾಯಕ ಡಾ. ಆರ್.ಎಂ. ಮಂಜುನಾಥ ಗೌಡ ಅವರು ಇದೀಗ ಕುಟುಂಬ ಸಮೇತ ದೇವಸ್ಥಾನಗಳ ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಡಿ ದಾಳಿ ಬಳಿಕ ಸುಮಾರು ಎರಡೂವರೆ ತಿಂಗಳ ನ್ಯಾಯಾಂಗ ಬಂಧನ ದಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ. ಇನ್ನೊಂದು ಕಡೆ ತಮ್ಮ ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ವೈದ್ಯರ ಸಂದರ್ಶನದಲ್ಲಿದ್ದಾರೆ.
ಕೊಂಚ ಒತ್ತಡದಲ್ಲಿರುವ ಗೌಡರು ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ಪೆರ್ಡೂರು, ಸೌತಡ್ಕ ಸೇರಿ ಅನೇಕ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರ ಧರ್ಮ ಪತ್ನಿ, ಮಾಸ್ತಿಕಟ್ಟೆ ಸುಬ್ರಮಣ್ಯ, ಸುಮಾ ಸುಬ್ರಮಣ್ಯ, ಕಾರ್ತಿಕ್ ಸೇರಿ ಅನೇಕರು ಜತೆಗಿದ್ದರು.
ಕಾನೂನು ಹೋರಾಟ ಸೇರಿ ಎಲ್ಲಾ ಪ್ರಕರಣದಲ್ಲಿ ಇತ್ಯರ್ಥ ಮಾಡುವಂತೆ ಗೌಡರು ವಿಶೇಷ ಪ್ರಾರ್ಥನೆ ಮಾಡಿದ್ದಾರೆ.
