ಮೊಹಮ್ಮದ್ ಶಫಿ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ
– ಆಜಾದ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ & ಎಂಜಿನಿಯರಿಂಗ್ ನ
ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಶಫಿ ಅವರಿಗೆ ಪ್ರಶಸ್ತಿ
– ಏಷ್ಯಾನೆಟ್ ನ್ಯೂಸ್ – ಕನ್ನಡಪ್ರಭ ಸುದ್ದಿ ಸಂಸ್ಥೆಯ ಹಾಂಕ್ ಕಾಂಗ್-ಇಂಡಿಯಾ ಬ್ಯುಸಿನೆಸ್ ಕಾನ್ಪ್ಲೇವ್ ಪ್ರಶಸ್ತಿ
– 2025ರಲ್ಲಿ ಯಶಸ್ವಿ ಉದ್ಯಮಿ ಪ್ರಶಸ್ತಿ ನೀಡಿ ಗೌರವ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ಯಶಸ್ವಿ ಯುವ
ಉದ್ಯಮಿ, ಅಜಾದ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ತೀರ್ಥಹಳ್ಳಿಯ ಮೊಹಮ್ಮದ್ ಶಫಿ ಅವರ ಅನನ್ಯ ಸಾಧನೆ ಪರಿಗಣಿಸಿ ಏಷ್ಯಾನೆಟ್ ಸುವರ್ಣ-ಕನ್ನಡ ಪ್ರಭ ಸುದ್ದಿ ಸಂಸ್ಥೆ ಏಪ್ರಿಲ್ 25 ರಂದು ಹಾಂಗ್ಕಾಂಗ್ ನಲ್ಲಿ ಆಯೋಜಿಸಿರುವ ಅದ್ದೂರಿ ಸಮಾರಂಭದಲ್ಲಿ
ಹಾಂಗ್ಕಾಂಗ್ ಇಂಡಿಯಾ ಬ್ಯುಸಿನೆಸ್ ಕಾನ್ಪ್ಲೇವ್-2025 ರಲ್ಲಿ ಯಶಸ್ವಿ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಮೊಹಮ್ಮದ್ ಶಫಿ ತೀರ್ಥಹಳ್ಳಿಯ ಅಜಾದ್ ಗ್ರೂಪ್ಸ್ ಮೂಲಕ ಉದ್ಯಮಿಯಾಗಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ ಮಾತ್ರವಲ್ಲದೇ ತಮ್ಮ ಸಜ್ಜನಿಕೆ, ಮಾನವೀಯ ಮೌಲ್ಯಗಳ ಕಾರಣಗಳಿಂದ ತೀರ್ಥಹಳ್ಳಿಯಲ್ಲಿ ಗೌರವಿಸಲ್ಪಡುವಂತಹ ವ್ಯಕ್ತಿಯಾಗಿದ್ದಾರೆ.
