Categories
ತೀರ್ಥಹಳ್ಳಿ

ಆರ್‌ಎಂಎಂ ಇಡಿ ಕಸ್ಟಡಿ : ನಾಳೆ ನಿರ್ಧಾರ?!

ಟಾಪ್ 3 ನ್ಯೂಸ್ ತೀರ್ಥಹಳ್ಳಿ

ಆರ್‌ಎಂಎಂ ಇಡಿ ಕಸ್ಟಡಿ : ನಾಳೆ ನಿರ್ಧಾರ?!
– ಏ. 25ಕ್ಕೆ ವಿಚಾರಣೆ: ಏನಾಗುತ್ತೆ ಎಂಬ ಕುತೂಹಲ

ಕಾಶ್ಮೀರ ಉಗ್ರರ ದಾಳಿಗೆ ತೀರ್ಥಹಳ್ಳಿ ಎನ್. ಎಸ್. ಯು. ಐ ಖಂಡನೆ
– ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡಲು ಪಟ್ಟು

– ಮಂಜುನಾಥ್ ಓದಿದ ತುಂಗಾ ಮಹಾವಿದ್ಯಾಲಯದಲ್ಲಿ ಶ್ರದ್ದಾಂಜಲಿ

NAMMUR EXPRESS NEWS
ತೀರ್ಥಹಳ್ಳಿ: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆಂಬ ಆರೋಪದಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆ‌ರ್.ಎಂ.ಮಂಜುನಾಥಗೌಡರ ವಿಚಾರಣೆ ನಡೆಸಲು ನ್ಯಾಯಾಲಯ ಆರ್‌ಎಂಎಂ ಅವರನ್ನು 14 ದಿನಗಳ ಕಾಲ ಇ.ಡಿ ಕಸ್ಟಡಿಗೆ ನೀಡಿತ್ತು. ಈ 14 ದಿನಗಳ ಅವಧಿ ಏಪ್ರಿಲ್ 21ಕ್ಕೆ ಅಂತ್ಯವಾಗಬೇಕಿತ್ತು. ಆದರೆ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮತ್ತೆ ಅರ್ಜಿ ಸಲ್ಲಿಸಿ ಇನ್ನೂ 14 ದಿನಗಳ ಕಾಲ ಕಸ್ಟಡಿ ಮುಂದುವರೆಸುವಂತೆ ಕೋರಿದ್ದರು. ಮಂಜುನಾಥ ಗೌಡರ ಪರ ವಕೀಲರೂ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಜಾಮೀನು ಅರ್ಜಿಯನ್ನು ಏಪ್ರಿಲ್ 25ರಂದು ಪರಿಶೀಲಿಸಲಿದೆ. ಗೌಡರ ಜಾಮೀನು ಅರ್ಜಿ ವಿಚಾರಣೆ ಇದ್ದು ಜಾಮೀನು ಸಿಕ್ಕರೆ ಆರ್‌ಎಂಎಂ ಸ್ವಲ್ಪ ನಿರಾಳರಾಗಬಹುದು ಇಲ್ಲವಾದಲ್ಲ ಒತ್ತಡ-ಸಂಕಷ್ಟ ಹೆಚ್ಚಲಿದೆ.

ಕಾಶ್ಮೀರ ಉಗ್ರರ ದಾಳಿಗೆ ತೀರ್ಥಹಳ್ಳಿ ಎನ್. ಎಸ್. ಯು. ಐ ಖಂಡನೆ

ತೀರ್ಥಹಳ್ಳಿ: ಜಮ್ಮು- ಕಾಶ್ಮೀರದ ಪಹಲ್ಗಾಮ್‌ ದಾಳಿಯ ಹೊಣೆಯನ್ನು ಸಂಪೂರ್ಣವಾಗಿ ಕೇಂದ್ರದ ಸರ್ಕಾರ ಹೊತ್ತುಕೊಳ್ಳಬೇಕು. ಪುಲ್ವಾಮಾ ದಾಳಿಯ ಬಳಿಕ ಕೇಂದ್ರ ಸರ್ಕಾರದ ಇನ್ನೊಂದು ಭದ್ರತಾ ವೈಫಲ್ಯಕ್ಕೆ ಈ ದೇಶ ಭಾರೀ ಬೆಲೆ ತೆತ್ತಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ . ಈ ಭಯೋತ್ಪಾದಕ ದಾಳಿಯಲ್ಲಿ ರಾಜ್ಯದ ಶಿವಮೊಗ್ಗ ಮೂಲದ ಪ್ರವಾಸಿಗರೊಬ್ಬರು ಸೇರಿದಂತೆ ಇನ್ನೂ ಅನೇಕರು ಮೃತಪಟ್ಟಿರುವುದು ಅತ್ಯಂತ ದುರ್ದೈವದ ಸಂಗತಿ.
ದುಃಖದ ಈ ಸಂದರ್ಭದಲ್ಲಿ ತೀರ್ಥಹಳ್ಳಿ NSUI ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ. ದಾಳಿಯಲ್ಲಿ ಗಾಯಗೊಂಡವರು ಬೇಗ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ
ತೀರ್ಥಹಳ್ಳಿಯಲ್ಲಿ ಶೋಕಾಚರಣೆ ಮಾಡಿ, ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ, ಈ ಸಂಧರ್ಭ ದಲ್ಲಿ ತಾಲ್ಲೂಕು NSUI ಅಧ್ಯಕ್ಷರಾದ ಸುಜಿತ್ ಸಾಲಿಯಾನ್, ಪದಾಧಿಕಾರಿಗಳಾದ ಪ್ರತಾಪ್, ನಂದ ಹರೇಕೊಪ್ಪ, ಸ್ಕಂಧ ಬೀಳ್ಕೊಪ್ಪ, ಪ್ರದ್ಯುಮ್ನ ಬಾಳೆಬೈಲ್, ರುತ್ವಿಕ್ ಶೆಟ್ಟಿ ಶಿವರಾಜಪುರ ಉಪಸ್ಥಿತಿಯಲ್ಲಿ ಪ್ರತಿಭಟನೆ ನೆಡಸಲಾಯಿತು.

ಮಂಜುನಾಥ್ ಓದಿದ ತುಂಗಾ ಮಹಾವಿದ್ಯಾಲಯದಲ್ಲಿ ಶ್ರದ್ದಾಂಜಲಿ

ತೀರ್ಥಹಳ್ಳಿ: ಏಪ್ರಿಲ್ 22 ರಂದು ಕಾಶ್ಮೀರದ ಪುಹಲ್‌ಗಾಮ್‌ ನಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಕೆ.ಎಂ. ಮಂಜುನಾಥ ರಾವ್ ಅಸುನೀಗಿದ್ದು ಭಯೋತ್ಪಾದಕರ ಈ ಕೃತ್ಯ ಖಂಡನೀಯ ಎಂದು ಮೃತರಿಗೆ ತುಂಗಾ ಮಹಾವಿದ್ಯಾಲಯದ ರಜತ ಸಭಾಂಗಣದಲ್ಲಿ ಬೆಳಗಿನ ವಿದ್ಯಾರ್ಥಿಗಳ ಅಸೆಂಬ್ಲಿಯ ಸಮಯದಲ್ಲಿ ಶ್ರದ್ದಾಂಜಲಿ ಸಮರ್ಪಿಸಲಾಯಿತು.
ಮೃತರು 1997-98 ನೇ ಸಾಲಿನ ಬಿಕಾಂ ಕ್ರಿಯಾಶೀಲ ವಿದ್ಯಾರ್ಥಿಯಾಗಿದ್ದು, ಅವರ ತಂದೆ ಕೆ. ಎಸ್. ಮಹಾಬಲರಾವ್ ಮ್ಯಾಮೋಸ್‌ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು. ಮಂಜುನಾಥ್ ರಾವ್‌ರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ತುಂಗಾ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಶ್ರದ್ದಾಂಜಲಿ ಸಮರ್ಪಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.