Categories
ತೀರ್ಥಹಳ್ಳಿ

ನಮ್ಮೂರ್ ಎಕ್ಸ್ ಪ್ರೆಸ್ ವರದಿ ಎಫೆಕ್ಟ್!: ನಮ್ಮೂರ್ ಪ್ರಾಬ್ಲಮ್ ಸರಿ ಆಯ್ತು!

ನಮ್ಮೂರ್ ಎಕ್ಸ್ ಪ್ರೆಸ್ ವರದಿ ಎಫೆಕ್ಟ್!: ನಮ್ಮೂರ್ ಪ್ರಾಬ್ಲಮ್ ಸರಿ ಆಯ್ತು!
– ನೆರಟೂರು: ಸರಳ ಸೇತುವೆಗೆ ಕಂಬಿ ಅಳವಡಿಕೆ
– ದೇವಂಗಿ: ವಾಟಿಗಾರಲ್ಲಿ ಹೊಸ ಬಸ್ ನಿಲ್ದಾಣ
– ಆಡಳಿತ, ಅಧಿಕಾರಿಗಳಿಗೆ ಧನ್ಯವಾದಗಳು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ನೆರಟೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಸರಳ ಹೋಗುವ ರಸ್ತೆಯಲ್ಲಿ ತುಂಬಿ ಹರಿಯುತ್ತಿರುವ ಹಳ್ಳಕ್ಕೆ ತಡೆ ಗೋಡೆಯೇ ಇಲ್ಲ. ಒಂದು ಕ್ಷಣ ಯಾಮಾರಿದರೂ ದೊಡ್ಡ ದುರಂತ ಕಟ್ಟಿಟ್ಟಬುತ್ತಿ. ಇದೇ ರಸ್ತೆಯಲ್ಲಿ ಶಾಲಾ ವಾಹನಗಳು, ಜನ ಓಡಾಡುತ್ತಾರೆ. ದೊಡ್ಡ ಹಳ್ಳಕ್ಕೆ ಹಾಕಿರುವ ಸೇತುವೆ ಮುರಿದು ಬಿದ್ದಿದೆ. ತಡೆ ಗೋಡೆಯೂ ಇಲ್ಲ ಎಂಬ ಬಗ್ಗೆ ನಮ್ಮೂರ್ ಎಕ್ಸ್ಪ್ರೆಸ್ ನಮ್ಮೂರ್ ಪ್ರಾಬ್ಲಮ್ ವಿಶೇಷ ಅಭಿಯಾನದಡಿ ಸುದ್ದಿ ಪ್ರಕಟ ಮಾಡಿತ್ತು. ಇದೀಗ ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸೇತುವೆಗೆ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದೆ. ಗ್ರಾಮಸ್ಥರು ಧನ್ಯವಾದ ಅರ್ಪಿಸಿದ್ದಾರೆ.

ಸ್ಟ್ಯಾಂಡ್‌ ಅವ್ಯವಸ್ಥೆ ಸರಿ ಆಯ್ತು
* ಮಳೆಗಾಲದಲ್ಲಿ ನಿಲ್ಲಲು ಆಗದೆ ವಿದ್ಯಾರ್ಥಿಗಳು,ಸಾರ್ವಜನಿಕರ ಪರದಾಟ ಇನ್ನಿಲ್ಲ

ತೀರ್ಥಹಳ್ಳಿ: ತಾಲೂಕಿನ ದೇವಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾಟಿಗಾರು ಮೊರಾರ್ಜಿ ಶಾಲೆ ಮುಂಭಾಗ ಬಸ್ ನಿಲ್ದಾಣ ಇಲ್ಲದೆ ಜನ, ವಿದ್ಯಾರ್ಥಿಗಳು, ಪೋಷಕರು ಭಾರೀ ತೊಂದರೆ ಪಡುತ್ತಿದ್ದರು. ಈ ಬಗ್ಗೆ ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವರದಿ ಪ್ರಕಟ ಮಾಡಿತ್ತು. ಆಡಳಿತ ಸಂಸದ ರಾಘವೇಂದ್ರ ಅವರ ಅನುದಾನದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದು ವರದಿ ಫಲ ನೀಡಿದೆ. ಗ್ರಾಮಸ್ಥರು ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ ಮತ್ತು ಆಡಳಿತ, ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.