Categories
ತೀರ್ಥಹಳ್ಳಿ

ಶ್ರೀ ಕ್ಷೇತ್ರ ಕೌದಳ್ಳಿಯಲ್ಲಿ ನವ ರಾತ್ರಿಯ ಸಂಭ್ರಮ!

ಶ್ರೀ ಕ್ಷೇತ್ರ ಕೌದಳ್ಳಿಯಲ್ಲಿ ನವ ರಾತ್ರಿಯ ಸಂಭ್ರಮ!
– 9 ದಿನವು ವಿಭಿನ್ನ, ಅಲಂಕಾರ, ವಿಶೇಷ ಪೂಜೆ
– ವಿಜಯ ದಶಮಿಯಂದು ಭಕ್ತರಿಗೆ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ನವರಾತ್ರಿ ಉತ್ಸವ ಹಾಗೂ ವಿಜಯದಶಮಿಯ ಪ್ರಯುಕ್ತ ಆ.15 ಭಾನುವಾರದಿಂದ ದಿ.24ರ ಮಂಗಳವಾರದವರೆಗೆ ಕೌದಳ್ಳಿಯ ಶ್ರೀ ನಾಗರಕ್ತೇಶ್ವರಿ ಅಮ್ಮನವರ ನನ್ನಿಧಿಯಲ್ಲಿ ನವರಾತ್ರಿಯ ಉತ್ಸವ ಹಾಗೂ ವಿಜಯ ದಶಮಿಯ ಕಾರ್ಯಕ್ರಮ ಅದ್ದೂರಿಯಿಂದ ನಡೆಯುತ್ತಿದೆ. ಶ್ರೀ ಕ್ಷೇತ್ರದ ಧರ್ಮದರ್ಶಿಯವರಾದ ಮಂಜುನಾಥ್ ಗುರೂಜಿಯವರ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮ ನಡೆಯುತ್ತಿದೆ. ಕ್ಷೇತ್ರದಲ್ಲಿ ಪ್ರತಿ ದಿನವೂ ಸಪ್ತಶತಿ ಚಂಡಿಕಾ ಪಾರಾಯಣ ಮಹಾಮಂಗಳಾರತಿ ತೀರ್ಥಪ್ರಸಾದ ನಂತರ ಬಂದಂತ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತದೆ.

ಸಾನಿಧ್ಯದಲ್ಲಿ 24ನೇ ತಾರೀಕು ಮಂಗಳವಾರ ಬೆಳಿಗ್ಗೆ ಇಂದ ಗಣಪತಿ ಪೂಜೆ, ಗುರು ಪ್ರಾರ್ಥನೆ ಪುಂಣ್ಯಹಾ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಸಪ್ತ ಶತಿ ಚಂಡಿಕಾ ಪಾರಾಯಣ, ದುರ್ಗಾಹೋಮ, 12 ಗಂಟೆಗೆ ಪೂರ್ಣಾಹುತಿ ಆದ ನಂತರ ಮಹಾಮಂಗಳಾರತಿ ನಂತರ ಅಮ್ಮನವರ ದರ್ಶನ ಉತ್ಸವ ನಡೆಯುತ್ತದೆ. ನಂತರ 9 ಜನ ಮುತ್ಯದೆಯರಿಗೆ ಬಾಗೀನ ನಂತರ ಅಮ್ಮನವರಿಗೆ ಮಹಾಮಂಗಳಾರತಿ, ಬನ್ನಿ ಮುಡಿದು ತೀರ್ಥಪ್ರಸಾದ ಅನ್ನ ಸಂತರ್ಪಣೆ ನಡೆಯುತ್ತದೆ. ಹೊದಲ ವಿಶ್ವಕರ್ಮ ಬ್ರಾಹ್ಮಣ ಚಂಡೆ ಬಳಗದಿಂದ 12 ಗಂಟೆಯಿಂದ ಚಂಡೆ ಕಾರ್ಯಕ್ರಮ ಇರುತ್ತದೆ.

ಶ್ರೀಮತಿ ಮಂಗಳಾ ಆರ್.ಮದನ್ ದಂಪತಿ ದುರ್ಗಾಹೋಮ ನಡೆಸಿ ಶ್ರೀ ನಾಗರಕ್ತೇಶ್ವರಿ ಅಮ್ಮನವರ ಅನುಗ್ರಹ ಪಡೆದು ಪೂರ್ಣಾಹುತಿ ಮಾಡಲಿದ್ದಾರೆ.

ಕ್ಷೇತ್ರದ ಸರ್ವ ಭಕ್ತಾದಿಗಳಿಗೂ ನವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳಲು ಶ್ರೀ ಕ್ಷೇತ್ರದ ಧರ್ಮದರ್ಶಿಗಳು ಮತ್ತು ಆಡಳಿತ ಮಂಡಳಿಯವರು ಸ್ವಾಗತಿಸಿದ್ದಾರೆ.

ವಿಶೇಷ ಸೂಚನೆ: ಪ್ರತಿ ಶುಕ್ರವಾರ ಮಂಗಳವಾರ ಅಮ್ಮನವರಿಗೆ ವಿಶೇಷ ಪೂಜೆ ಇರುತ್ತದೆ ಹಾಗೂ ಪ್ರತಿ ಅಮಾವಾಸ್ಯೆ ಹುಣ್ಣಿಮೆಯಲ್ಲಿ ದರ್ಶನ ಹೇಳಿಕೆ ಇರುತ್ತದೆ.

ಸೇವೆಗಾಗಿ ಸಂಪರ್ಕಿಸಿ

ಕ್ಷೇತ್ರದ ಸೇವಾ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಾನಿದ್ಯದ ಪ್ರಾದಾನ ಅರ್ಚಕರಾದ ಗಣೇಶ್ ಅವರನ್ನು ಸಂಪರ್ಕಿಸಿ 6361044655

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.