Categories
ತೀರ್ಥಹಳ್ಳಿ

ದಸರಾದಲ್ಲಿ ಹೊಸ ಉದ್ಯಮಗಳು ಶುರು..!

ದಸರಾದಲ್ಲಿ ಹೊಸ ಉದ್ಯಮಗಳು ಶುರು..!
– ಹೊಸ ವಾಹನಗಳ ಖರೀದಿ ಎಲ್ಲೆಡೆ ಜೋರು
– ಅಂಗಡಿ, ಮಳಿಗೆಗಳ ಶುಭಾರಂಭಕ್ಕೆ ಕ್ಷಣಗಣನೆ
– ಆಯುಧ ಪೂಜೆಗೆ ಅಂಗಡಿ, ಮಳಿಗೆಗಳು ಸಿದ್ಧ

NAMMUR EXPRESS NEWS
ತೀರ್ಥಹಳ್ಳಿ: ದಸರಾ ಹಬ್ಬ ನಾಡ ಹಬ್ಬವಾಗಿರುವುದೇ ಶುಭ ಸಂಕೇತ. ಹೀಗಾಗಿ ದಸರಾ ಹಬ್ಬದ ಆಯುಧ ಪೂಜೆ, ವಿಜಯದಶಮಿಯಂದು ಅನೇಕ ಉದ್ಯಮಗಳು ಶುರುವಾಗಲು ಸಿದ್ಧತೆ ನಡೆಸಿವೆ. ನವರಾತ್ರಿಯಲ್ಲಿ ಯಾವುದೇ ಕಾರ್ಯ ಮಾಡಿದರೂ ಒಳಿತಾಗುತ್ತದೆ ಎಂಬ ಭಾವನೆ ಇಲ್ಲಿದೆ. ಹೀಗಾಗಿ ಅನೇಕ ಅಂಗಡಿಗಳು, ಹೊಸ ಉದ್ಯಮಗಳು ವಿಜಯದಶಮಿಯಂದು ಶುರುವಾಗಲಿದೆ.

ತೀರ್ಥಹಳ್ಳಿಯಲ್ಲಿ ಯಾವ ಯಾವ ಹೊಸ ಉದ್ಯಮಗಳು ಓಪನ್

ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯಲ್ಲಿ ಅನುಪ್ರಿಯ ಬೋರ್ಡಿಂಗ್ ಹೋಟೆಲ್ & ಲಾಡ್ಜಿಂಗ್, ತೀರ್ಥಹಳ್ಳಿಯಲ್ಲಿ ಸಪ್ತಸಿರಿ ಚಿಟ್ಸ್ ಫಂಡ್ಸ್, ಶ್ರೀ ಸಾಯಿ, ಮಾತೃಶ್ರೀ ಇಲೆಕ್ಟ್ರಾನಿಕ್ಸ್ ಎರಡನೇ ಮಳಿಗೆ ಸೇರಿದಂತೆ ಅನೇಕ ಉದ್ಯಮಗಳು ಉದ್ಘಾಟನೆಗೆ ಸಿದ್ಧತೆ ನಡೆಸಿದೆ.

ಹೊಸ ವಾಹನ ಖರೀದಿ… ಚಿನ್ನಕ್ಕೆ ಡಿಮ್ಯಾಂಡ್

ದ್ವಿಚಕ್ರ ಹಾಗೂ ನಾಲ್ಕು ಚಕ್ರ, ಟ್ರಾಕ್ಟರ್ಸ್ ವಾಹನ ಮಾರಾಟದಲ್ಲೂ ಕೂಡ ವಿಜಯದಶಮಿಯಂದು ಅತಿ ಹೆಚ್ಚು ವಾಹನ ಖರೀದಿಗೆ ಜನರು ಸಿದ್ದರಾಗಿದ್ದಾರೆ. ಬೈಕ್ ಹಾಗೂ ಕಾರ್, ಟ್ಯಾಕ್ಟರ್ ಸೇರಿದಂತೆ ಅನೇಕ ವಾಹನಗಳ ಖರೀದಿಗೆ ಜನರು ಈಗಾಗಲೇ ಬುಕ್ ಮಾಡಿದ್ದಾರೆ. ಇನ್ನು ಆಯುಧ ಪೂಜೆಗೆ ಸಿದ್ಧತೆ ನಡೆದಿದ್ದು ಪ್ರತಿ ಅಂಗಡಿ ಮುಗ್ಗಟ್ಟುಗಳಲ್ಲೂ ಅಂಗಡಿಗಳನ್ನು ಬಣ್ಣ ಹೊಡೆದು ಸ್ವಚ್ಛತೆ ಮಾಡಲಾಗುತ್ತಿದೆ. ಹೀಗಾಗಿ ಆಯುಧ ಪೂಜೆ ಸಿದ್ಧತೆ ಜೋರಾಗಿದೆ.
ಒಳ್ಳೆಯ ದಿನದಂದು ಚಿನ್ನ ಖರೀದಿಗೆ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್, ಗಾಯತ್ರಿ ಜ್ಯುವೆಲ್ಲರಿ, ಅನ್ನಪೂರ್ಣ, ಆಚಾರ್ಯ ಸೇರಿ ಎಲ್ಲಾ ಕಡೆ ಜನ ಹೆಚ್ಚಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.