Categories
ತೀರ್ಥಹಳ್ಳಿ

ತೀರ್ಥಹಳ್ಳಿ ದೇಗುಲಗಳಲ್ಲಿ ನವರಾತ್ರಿ ಶುರು!

ತೀರ್ಥಹಳ್ಳಿ ದೇಗುಲಗಳಲ್ಲಿ ನವರಾತ್ರಿ ಶುರು!
– ರಾಮೇಶ್ವರ, ಮಾರಿಕಾಂಬೆ, ಕಿತ್ತಿನಗದ್ದೆ ಸೇರಿ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ
– ಬೆಳಿಗ್ಗೆಯಿಂದಲೇ ಜನರ ಕ್ಯೂ: ವಿಶೇಷ ಅಲಂಕಾರ

NAMMUR EXPRESS NEWS
ತೀರ್ಥಹಳ್ಳಿ: ನವರಾತ್ರಿ ಸಂಭ್ರಮ ಎಲ್ಲೆಡೆ ಶುರುವಾಗಿದೆ. ಅಕ್ಟೋಬರ್ 15ರಿಂದ 24ರವರೆಗೆ ನವ ರಾತ್ರಿ ಸಂಭ್ರಮಕ್ಕೆ ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ತೀರ್ಥಹಳ್ಳಿ ತಾಲೂಕು ದೇಗುಲಗಳಲ್ಲಿ ನವರಾತ್ರಿ ಸಂಭ್ರಮ ಶುರುವಾಗಿದೆ. ಶನಿವಾರ ರಾತ್ರಿಯಿಂದಲೇ ಪೂಜೆ ನಡೆಯುತ್ತಿದ್ದೂ, ಭಾನುವಾರ ಮೊದಲ ನವರಾತ್ರಿ ಪೂಜೆ ನಡೆದಿದೆ. ಭಾನುವಾರ ಆದ್ದರಿಂದ ಭಕ್ತರು ಬೆಳಗ್ಗೆ, ಸಂಜೆ ಹೆಚ್ಚು ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ ದೇವಸ್ಥಾನ ಸಮಿತಿಗಳು, ಗ್ರಾಮಸ್ತರು, ಭಕ್ತರು ಸೇರಿ ಎಲ್ಲಾ ಕಡೆ ವಿಶೇಷ ಅಲಂಕಾರ, ಪೂಜೆಗೆ ಸಿದ್ಧತೆ ನಡೆಸಿದ್ದಾರೆ.

ತೀರ್ಥಹಳ್ಳಿ ಪಟ್ಟಣದ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತೀರ್ಥಹಳ್ಳಿ ಪಟ್ಟಣದ ಮಾರಿಕಾಂಬಾ, ರಾಮೇಶ್ವರ, ಗಣಪತಿ, ಕಿತ್ತಿನಗದ್ದೆ, ಅರುಣಗಿರಿ, ಆರಗ, ಕೋಣಂದೂರು, ಸಮಕಾನಿ, ಬೊಮ್ಮನಹಳ್ಳಿ, ಹೊಸಹಳ್ಳಿ, ಆಗುಂಬೆ, ಕಮ್ಮರಡಿ, ಇಂಗ್ಲಾದಿ, ಮೇಗರವಳ್ಳಿ, ಮೇಲಿನ ಕುರುವಳ್ಳಿ ಸೇರಿ ಎಲ್ಲಾ ಹಳ್ಳಿಗಳ ದೇವಾಲಯದಲ್ಲಿ ಪೂಜೆ ನಡೆಯುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.