Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕು ದೇಗುಲಗಳಲ್ಲಿ ನವರಾತ್ರಿ ಸಂಭ್ರಮ!

ತೀರ್ಥಹಳ್ಳಿ ತಾಲೂಕು ದೇಗುಲಗಳಲ್ಲಿ ನವರಾತ್ರಿ ಸಂಭ್ರಮ!
– ಪಟ್ಟಣದ ಮಾರಿಕಾಂಬೆ ಸೇರಿ ದೇವಸ್ಥಾನಗಳಲ್ಲಿ ಪೂಜೆ
– ಸಾವಿರಾರು ಮಂದಿ ಭಕ್ತರಿಂದ ವಿಶೇಷ ಪೂಜೆ

NAMMUR EXPRESS NEWS
ತೀರ್ಥಹಳ್ಳಿ: ಅಕ್ಟೋಬರ್ 15ರಿಂದ 24ರವರೆಗೆ ನವ ರಾತ್ರಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು,ತೀರ್ಥಹಳ್ಳಿ ತಾಲೂಕು ದೇಗುಲಗಳಲ್ಲಿ ನವರಾತ್ರಿ ಸಂಭ್ರಮಕ್ಕೆ ಸಿದ್ಧತೆ ನಡೆದಿದೆ. ದೇವಸ್ಥಾನ ಸಮಿತಿಗಳು, ಗ್ರಾಮಸ್ತರು, ಭಕ್ತರು ಸೇರಿ ಎಲ್ಲಾ ಕಡೆ ವಿಶೇಷ ಅಲಂಕಾರ, ಪೂಜೆಗೆ ಸಿದ್ಧತೆ ನಡೆಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಗಳು ಏನು?

ಅ.15ರಿಂದ 25ರವರೆಗೆ ಬೆಳಿಗ್ಗೆ 10 ಗಂಟೆಗೆ ನವದುರ್ಗಾ ಸೇವೆ, ಪಾರಾಯಣ, ಲಲಿತ ಸಹಸ್ರನಾಮ ಮಧ್ಯಾಹ್ನ 12-30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸಾಯಂಕಾಲ ಕಲ್ಲೊಕ್ತ ಪೂಜೆ, ಕಷಾಯ ನೈವೇದ್ಯ, ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ನಡೆಯುವುದು. ಅ.15ರಂದು ಬೆಳಿಗ್ಗೆ 8-15 ಕ್ಕೆ ಗಂಗೆ ತರುವುದು, ನವದುರ್ಗ ಕಲಶ ಸ್ಥಾಪನೆ, ಮಧ್ಯಾಹ್ನ ದೇವಿಯ ದರ್ಶನ.

ಅ.19ರಂದು ಲಲಿತಾ ಪಂಚಮಿ, ರಾತ್ರಿ 7 ಗಂಟೆಗೆ ಪಂಚ ದುರ್ಗಾ ದೀಪ ನಮಸ್ಕಾರ. ಅ.20ರಂದು ಸರಸ್ವತಿ ಪೂಜೆ, ಅ.21ರ ರಾತ್ರಿ 7 ಗಂಟೆಗೆ ರಂಗಪೂಜೆ, ಅ.22ರಂದು ದುರ್ಗಾಷ್ಟಮಿ ಪ್ರಯುಕ್ತ ಚಂಡಿಕಾ ಹೋಮ, ಬೆಳಿಗ್ಗೆ 8-50ಕ್ಕೆ ಪ್ರಾರಂಭ ಮಧ್ಯಾಹ್ನ 11-50ಕ್ಕೆ ಪೂರ್ಣಾಹುತಿ, ಅ.25ರಂದು ಮಹಾನವಮಿ ಆಯುಧಪೂಜೆ, ಅ.24ರಂದು ವಿಜಯದಶಮಿ, ನವದುರ್ಗಾ ಕಲಶ ವಿಸರ್ಜನೆ, ವಿಶೇಷ ಬನ್ನಿಪೂಜೆ, ಮಹಾಮಂಗಳಾರತಿ, ಬೆಳಿಗ್ಗೆ 10ಗಂಟೆಗೆ ಬನ್ನಿ ತೆಗೆಯುವುದು ನಂತರ ಪ್ರಸಾದ ವಿನಿಯೋಗ ಇರುತ್ತದೆ. ಪ್ರತಿದಿನ ಸಂಜೆ ನವರಾತ್ರಿ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಇರುತ್ತದೆ. ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ದೇವರಿಗೆ ಅರ್ಪಿಸಿದ ಸೀರೆಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಭಕ್ತಾದಿಗಳು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀ ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿ ವಿನಂತಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.