ಆರೋಗ್ಯ ಸೇವೆಯಲ್ಲಿ ನಯನಾ ಶೆಟ್ಟಿ ಮಹತ್ವದ ಹೆಜ್ಜೆ!
– 2 ವರ್ಷದಲ್ಲಿ 1000ಕ್ಕೂ ಹೆಚ್ಚು ಮಂದಿಗೆ ಅರೋಗ್ಯ ತಪಾಸಣೆ ಸೇವೆ
– ತೀರ್ಥಹಳ್ಳಿಯಲ್ಲಿ ಯಶಸ್ವಿ ಉಚಿತ ಮ್ಯಾಮೋಗ್ರಫಿ ತಪಾಸಣಾ ಶಿಬಿರ ಉದ್ಘಾಟಿಸಿದ ಸಂಸದ ರಾಘವೇಂದ್ರ
NAMMUR EXPRESS NEWS
ತೀರ್ಥಹಳ್ಳಿ: ಅರೋಗ್ಯ ಪ್ರತಿಯೊಬ್ಬರಿಗೂ ಇಂದು ದುಬಾರಿ ಆಗುತ್ತಿದೆ. ಒಂದು ರೋಗ ಬಂದರೆ ಲಕ್ಷ ಲಕ್ಷ ಹಣ ನೀರಿನಂತೆ ಖಾಲಿಯಾಗುತ್ತಿದೆ. ಅನೇಕರಲ್ಲಿ ಅರೋಗ್ಯ ಜಾಗೃತಿ ಇಲ್ಲದಿರುವುದು, ಸಮಯಕ್ಕೆ ತಕ್ಕಂತೆ ಅರೋಗ್ಯ ತಪಾಸಣೆ ಮಾಡದಿರುವುದು ಅಪಾಯಕ್ಕೆ ಆಹ್ವಾನ ಕೊಡುತ್ತದೆ. ಇಂತಹ ಸನ್ನಿವೇಶದಲ್ಲಿ ತೀರ್ಥಹಳ್ಳಿಯ ಮಹಿಳಾ ಉದ್ಯಮಿ, ಮಾಜಿ ಪಟ್ಟಣ ಪಂಚಾಯತ್ ಸದಸ್ಯೆ, ಸಂಘಟಕಿ ನಯನಾ ಶೆಟ್ಟಿ ತೀರ್ಥಹಳ್ಳಿ ಸೇರಿ ಮಲೆನಾಡಿನಲ್ಲಿ ಆರೋಗ್ಯ ಸೇವೆಯಲ್ಲಿ ನಯನಾ ಶೆಟ್ಟಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಕಳೆದ 2 ವರ್ಷದಲ್ಲಿ 1000ಕ್ಕೂ ಹೆಚ್ಚು ಮಂದಿಗೆ ಅರೋಗ್ಯ ತಪಾಸಣೆ ಸೇವೆ ನೀಡಿದ್ದು ಬುಧವಾರ ತೀರ್ಥಹಳ್ಳಿಯಲ್ಲಿ ಯಶಸ್ವಿ ಉಚಿತ ಮ್ಯಾಮೋಗ್ರಫಿ ತಪಾಸಣಾ ಶಿಬಿರ ನಡೆಸಿದ್ದು ನೂರಾರು ಮಂದಿ ಪ್ರಯೋಜನ ಪಡೆದಿದ್ದಾರೆ.
ಶಿಬಿರ ಉದ್ಘಾಟಿಸಿದ ಸಂಸದ ರಾಘವೇಂದ್ರ
ತೀರ್ಥಹಳ್ಳಿಯ ಪಟ್ಟಣ ಪಂಚಾಯತ್ ಕಾರ್ಯಾಲಯದ ಪಕ್ಕದಲ್ಲಿ ಮಲೆನಾಡು ಮಹಿಳಾ ವೇದಿಕೆ ವತಿಯಿಂದ ಉಚಿತ ಮ್ಯಾಮೋಗ್ರಫಿ ತಪಾಸಣಾ, ಸ್ತನ ಕ್ಯಾನ್ಸರ್ ತಪಾಸಣೆ ಶಿಬಿರ ಉದ್ಘಾಟಿಸಿದ ಶಿವಮೊಗ್ಗ ಸಂಸದ ರಾಘವೇಂದ್ರ, ದೇಶದಲ್ಲಿ ಕ್ಯಾನ್ಸರ್ ಸಂಬಂಧಿಸಿದ ಕಾಯಿಲೆಗಳು ಜಾಸ್ತಿ ಆಗುತ್ತಿದೆ. ಕಾಯಿಲೆ ಬಂದರೆ ಮಧ್ಯಮ ಕುಟುಂಬಕ್ಕೆ ಬಾರಿ ಸಮಸ್ಯೆ ಆಗುತ್ತದೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದು ಬಹಳ ಕಷ್ಟವಾಗುತ್ತದೆ. ಹಾಗಾಗಿ ಇಂತಹ ಕ್ಯಾಂಪ್ ಅನುಕೂಲ ಆಗುತ್ತದೆ ಎಂದರು. ಶಾಸಕ ಆರಗ ಜ್ಞಾನೇಂದ್ರ, ಪ.ಪಂ ಅಧ್ಯಕ್ಷೆ ಗೀತಾ ರಮೇಶ್, ಡಾ. ಕೀರ್ತನ, ಜ್ಯೋತಿ ದಿಲೀಪ್ ಸೇರಿ ಹಲವರು ಉಪಸ್ಥಿತರಿದ್ದರು.