ಯುಗಾದಿ ಹಬ್ಬಕ್ಕೆ ತೀರ್ಥಹಳ್ಳಿ ಅಂಗಡಿಗಳಲ್ಲಿ ಹೊಸ ಭರವಸೆ!
– ಬಟ್ಟೆ, ಚಿನ್ನದಂಗಡಿಗಳಲ್ಲಿ ಭರ್ಜರಿ ಆಫರ್.!
– ಹಬ್ಬದ ಸಂಭ್ರಮ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ
NAMMUR EXPRESS NEWS
ತೀರ್ಥಹಳ್ಳಿ : ಎಲ್ಲೆಡೆ ಯುಗಾದಿ ಹಬ್ಬಕ್ಕೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು, ಅಂಗಡಿಗಳಲ್ಲಿ ಖರೀದಿಯು ಜೋರಾಗಿದೆ. ಅದರಲ್ಲೂ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗೆ ಸಿದ್ಧತೆಗಳು ಕೂಡ ನಡೆಯುತ್ತಲೇ ಇದೆ.
ಯುಗಾದಿ ಹಬ್ಬ ಸಂಭ್ರಮಾಚರಣೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೌದು, ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಳವಾಗಿರುವ ಕಾರಣ ಮಾರುಕಟ್ಟೆಗಳಲ್ಲಿ ಹೂವುಗಳ ಪೂರೈಕೆ ಕಡಿಮೆಯಾಗಿದ್ದು, ಹೂವುಗಳ ಬೆಲೆ ದುಬಾರಿಯಾಗಿದೆ. ಗ್ರಾಹಕರು ಹೂಗಳ ಬೆಲೆ ಕೇಳಿ ಶಾಕ್ ಆಗುತ್ತಿದ್ದಾರೆ. 2 ಕೆಜಿ ಹೂವು ತೆಗೆದುಕೊಳ್ಳೋವರು. ಒಂದು ಕೆಜಿ ತೆಗೆದುಕೊಳ್ಳುತ್ತಿದ್ದಾರೆ. ಹಣ್ಣುಗಳ ಬೆಲೆ ಕೂಡ ಏರಿಕೆಯಾಗಿದೆ.
ಬಟ್ಟೆ, ಚಿನ್ನ, ವಾಹನ, ಇಲೆಕ್ಟ್ರಾನಿಕ್ ವಸ್ತುಗಳ ಮೇಳ
ತೀರ್ಥಹಳ್ಳಿಯ ಸುತ್ತಮುತ್ತ ಯುಗಾದಿ ಹಬ್ಬದ ಅಂಗವಾಗಿ ಬಟ್ಟೆ, ಚಿನ್ನ, ವಾಹನ, ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ ಆಫರ್ ಘೋಷಿಸಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ. ಎಲ್ಲೆಡೆ ಖರೀದಿ ಕೂಡ ಜೋರಾಗಿದೆ. ಒಂದು ಕಡೆ ಯುಗಾದಿಯ ಸಂಭ್ರಮವಾದರೆ ಇನ್ನೊಂದು ಕಡೆ ಅನೇಕ ವಸ್ತುಗಳನ್ನ ಖರೀದಿಸುವ ಸಂತೋಷ ಇನ್ನೊಂದು ಕಡೆಯಾಗಿದೆ. ಯುಗಾದಿ ಹಬ್ಬದ ಸಂಭ್ರಮ ಎಲ್ಲರೂ ಅನೇಕ ವಸ್ತುಗಳನ್ನು ಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ತೀರ್ಥಹಳ್ಳಿ ಗಾಯತ್ರಿ, ನ್ಯಾಷನಲ್ ಜ್ಯುವೆಲ್ಲರಿ ಸೇರಿ ಚಿನ್ನದಂಗಡಿಗಳು ವಿಶೇಷ ಆಫರ್ ಘೋಷಣೆ ಮಾಡಿವೆ.
