ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘಕ್ಕೆ ನೂತನ ಸಾರಥಿಗಳು!
– ನೂತನ ಅಧ್ಯಕ್ಷರಾಗಿ ಕೂಳೂರು ಕೃಷ್ಣಮೂರ್ತಿ ಆಯ್ಕೆ
– ಪ್ರ.ಕಾರ್ಯದರ್ಶಿಯಾಗಿ ಆದರ್ಶ ಹೆಚ್.ಎಂ. ಖಜಾಂಚಿಯಾಗಿ ಶಶಿಧರ್ ಎಂ.ಆರ್.
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘ(ರಿ) ಕುಶಾವತಿ ತೀರ್ಥಹಳ್ಳಿ ಇದರ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ದಿನಾಂಕ 25-03-2025ರ ಮಂಗಳವಾರದಂದು ನಡೆದಿದ್ದು ಅಧ್ಯಕ್ಷರಾಗಿ ಕೂಳೂರು ಕೃಷ್ಣ ಮೂರ್ತಿರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಹಾಗೆಯೇ ಆದರ್ಶ ಹೆಚ್.ಎಂ. ಹೊಸೂರು ರವರು ಪ್ರಧಾನಕಾರ್ಯದರ್ಶಿಯಾಗಿ, ಶಶಿಧರ್ ಎಂ.ಆರ್. ಮೇಲಿನಕೊಪ್ಪರವರು ಖಜಾಂಚಿಯಾಗಿ ಆಯ್ಕೆಯಾಗಿರುತ್ತಾರೆ. ಈ ಪ್ರಕ್ರಿಯೆಯನ್ನು ಕ್ರಮಬದ್ದವಾಗಿ ಸಂಘದ ಕಾನೂನು ತಜ್ಞರ ಸಲಹೆಯಂತೆ ನಡೆಸಿರುವುದಾಗಿ ಆಡಳಿತ ಮಂಡಳಿಯ ಪರವಾಗಿ ಆದರ್ಶ ಹೆಚ್.ಎಂ. ಹೊಸೂರು ತಿಳಿಸಿದ್ದಾರೆ.
