Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ದನಗಳ್ಳರ ಹೊಸ ಪ್ಲಾನ್!

ತೀರ್ಥಹಳ್ಳಿಯಲ್ಲಿ ದನಗಳ್ಳರ ಹೊಸ ಪ್ಲಾನ್!
– ನಿರ್ಜನ ರಸ್ತೆಗಳಲ್ಲಿ ಹುಲ್ಲು ಹಾಕಿ ಗೋ ಕಳ್ಳತನ?
– ಗೋ ಶಾಲೆ ಇಲ್ಲದಕ್ಕೆ ಹೆಚ್ಚಿದ ಗೋ ಕಳ್ಳತನ

NAMMUR EXPRESS NEWS
ತೀರ್ಥಹಳ್ಳಿ: ಪೋಲೀಸರು, ಹಿಂದೂ ಸಂಘಟನೆಗಳು, ಗೋ ಪ್ರೇಮಿಗಳು ಅದೆಷ್ಟೇ ಪ್ರಯತ್ನ ಪಟ್ಟರೂ ದನಗಳ್ಳರ ಹಾವಳಿ ಕಡಿಮೆಯಾಗಿಲ್ಲ. ರಾತ್ರಿ ವೇಳೆ ರಸ್ತೆಯ ಮೇಲೆ ಮಲಗುವ ಬೀಡಾಡಿ ದನಗಳನ್ನು ಕ್ರೂರ ರೀತಿಯಲ್ಲಿ ಗೋಣು ಮುರಿದು ಕಾರು-ವ್ಯಾನುಗಳಿಗೆ ತುಂಬಿ ಸಾಗಿರುವ ಖದೀಮರು ಪೊಲೀಸ್ ಜೆಕ್ ಪೋಸ್ಟ್‌ಗಳನ್ನು, ಅರಣ್ಯ ಇಲಾಖೆ ಚೆಕ್ ಪೋಸ್ಟ್‌ಗಳನ್ನು ಸಲೀಸಾಗಿ ದಾಟಿ ಹೋಗುತ್ತಾರೆ. ಈಗ ಹೊಸದಾಗಿ ದನಗಳನ್ನು ಕದಿಯಲು ಟೆಕ್ನಿಕ್ ಒಂದನ್ನು ಅನುಸರಿಸುತ್ತಿದ್ದಾರೆ. ಜನವಸತಿ ಇರದ ರಸ್ತೆಗಳನ್ನು ಗುರುತಿಸಿ ಅಲ್ಲಿ ರಸ್ತೆಯುದ್ದಕ್ಕೂ ಹುಲ್ಲಿನ ಪಿಂಡಿಗಳನ್ನು ಎಸೆದು ಹೋಗುತ್ತಾರೆ.
ಒಂದೆರಡು ದಿನವಲ್ಲ, ವಾರಗಟ್ಟಲೆ ಹೀಗೆ ಹುಲ್ಲುಹಾಕಿ ಹೋಗುತ್ತಾರೆ, ಬೀಡಾಡಿ ದನಗಳು ಹುಲ್ಲನಾಸೆಗೆ ಅಲ್ಲೇ ಠಿಕಾಣಿ ಹೂಡುತ್ತವೆ. ರಾತ್ರಿ ಅಲ್ಲೇ ಹಿಂಡು ಹಿಂಡಾಗಿ ಮಲಗುತ್ತವೆ. ದನಗಳ್ಳರು ಸಲೀಸಾಗಿ ಬಂದು ದನ ತುಂಬಿ ಕೊಂಡು ಹೋಗುತ್ತಾರೆ. ಇತ್ತೀಚಿಗೆ ಇಂತಹ ಘಟನೆಗಳು ಹಲವೆಡೆ ವರದಿಯಾಗಿವೆ.

ತೀರ್ಥಹಳ್ಳಿಯ ಚರ್ಚ್ ಓಣಿ ರಸ್ತೆ, ಟಿಎಪಿಸಿಎಂಎಸ್ ರಸ್ತೆ, ಪಟ್ಟಣ ಪಂಚಾಯ್ತಿ ಮೈದಾನ, ಛತ್ರಕೆರೆ ರಸ್ತೆ, ಬಾಳೇಬೈಲು ಪಾರ್ಕ್ ರಸ್ತೆ ಹೀಗೆ ರಾತ್ರಿ ವೇಳೆ ಜನ ಸಂಚಾರ ಇರದ, ಜನವಸತಿಯೂ ಇರದ ಜಾಗಗಳನ್ನು ಗುರುತಿಸಿ ದನ ಕಳ್ಳರು ಹುಲ್ಲಿನ ಪಿಂಡಿಗಳನ್ನು ಇಟ್ಟು ಹೋಗುತ್ತಿದ್ದಾರೆ. ಬಳಿಕ ದನಗಳನ್ನು ಕದಿಯಲಾಗುತ್ತಿದೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ಗೋ ಶಾಲೆ ಇಲ್ಲದಕ್ಕೆ ಹೆಚ್ಚಿದ ಗೋ ಕಳ್ಳತನ

ತೀರ್ಥಹಳ್ಳಿ ತಾಲೂಕಲ್ಲಿ ಗೋ ಶಾಲೆ ಇಲ್ಲದ ಕಾರಣ ಹೋರಿಗಳನ್ನು ಬೀದಿಗೆ ತಂದು ಬಿಡಲಾಗುತ್ತಿದೆ. ಇನ್ನು ಹಾಲು ಕೊಡದ, ವಯಸ್ಸಾದ ದನಗಳ ಪಾಲನೆ ಮಾಡಲು ಆಗುತ್ತಿಲ್ಲ. ಅಚ್ಚರಿ ಎಂದರೆ ಗೋ ಪ್ರೇಮ ರಾಜಕಾರಣಿಗಳ ರಾಜಕಾರಣಕ್ಕೆ ಮಾತ್ರ ಬಳಕೆಯಾಗುತ್ತಿದೆ. ಒಂದು ಗೋ ಶಾಲೆ ತೆರೆಯಲು ಎಲ್ಲಾ ಸರ್ಕಾರಗಳು ವಿಫಲವಾಗಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.