Categories
ತೀರ್ಥಹಳ್ಳಿ

ಇಲ್ಲದ ಪಾರ್ಕಿಂಗ್: ವಾಹನ ಸವಾರರ ಪರದಾಟ!

ಇಲ್ಲದ ಪಾರ್ಕಿಂಗ್: ವಾಹನ ಸವಾರರ ಪರದಾಟ!
– ತೀರ್ಥಹಳ್ಳಿ ಪಟ್ಟಣದಲ್ಲಿ ಹೆಚ್ಚಾದ ವಾಹನಗಳ ಸಂಖ್ಯೆ
– ಜಾತ್ರೆ ಸಮಯದಲ್ಲಿ ವಾಹನ ನಿಲ್ಲಿಸಲು ಹರ ಸಾಹಸ
– ಪಟ್ಟಣ ಬೆಳೆಯುತ್ತಿದೆ… ಆದ್ರೆ ಪಾರ್ಕಿಂಗ್ ಪ್ಲಾನ್ ಇಲ್ಲ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಬೆಳೆದಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದೀಗ ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ ಇಲ್ಲದಿರುವುದು ಕಂಡುಬರುತ್ತಿದೆ. ಪ್ರತಿ ಜಾತ್ರೆ, ಸಮಾವೇಶ, ಹಬ್ಬದಂದು ಅಲ್ಲದೆ ವಾರದ ಸಂತೆ ಸೋಮವಾರ ಟ್ರಾಫಿಕ್ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ. ಕಳೆದೊಂದು ವಾರದಿಂದ ತೀರ್ಥಹಳ್ಳಿಯ ಪ್ರಸಿದ್ಧ ಎಳ್ಳಮವಾಸ್ಯೆ ಜಾತ್ರೆಗೆ ರಾಜ್ಯದ ಎಲ್ಲೆಡೆಯಿಂದ ಸಾವಿರಾರು ಜನರು ಆಗಮಿಸಿದ್ದು, ಇದೀಗ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ವಾಹನ ಸವಾರರು ಪರದಾಟ ನಡೆಸಿದರು. ಹೆಚ್ಚು ಹೆಚ್ಚು ವಾಹನಗಳು ಕೂಡ ಪಟ್ಟಣಕ್ಕೆ ಆಗಮಿಸುತ್ತಿರುವುದರಿಂದ ವಾಹನಗಳ ಅಪಘಾತ ಸಂಖ್ಯೆಯು ಹೆಚ್ಚಾಗಿದೆ.

ವಾಹನಗಳ ನಿಲುಗಡೆಗೆ ಸ್ಥಳ ಇಲ್ಲದೇ ಇರುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿದೆ. ಪಾದಚಾರಿಗಳ ಸಂಚಾರವೂ ಕಷ್ಟಕರವಾಗಿದೆ. ಸಂಚಾರ ವ್ಯವಸ್ಥೆಯನ್ನು ಕೇಳುವವರಿಲ್ಲ, ವೃದ್ಧರು, ಮಹಿಳೆಯರು ಮಕ್ಕಳು ರಸ್ತೆಗಳಲ್ಲಿ ನಡೆದಾಡಲು ಕಿರಿಕಿರಿಯಾಗುತ್ತಿದೆ. ಅಪಘಾತಗಳಿಗೆ ಈಡಾಗುವ ಸಾಧ್ಯತೆಯು ಹೆಚ್ಚಾಗಿದೆ. ತೀರ್ಥಹಳ್ಳಿ ಪಟ್ಟಣಕ್ಕೆ ಜನರು ಹಾಗೂ ವಾಹನಗಳು ಆಗಮಿಸುತ್ತಿರುವುದರಿಂದ ಅನಾಹುತಗಳು ಸಂಭವಿಸುತ್ತಿದ್ದು ವಾಹನ ಸವಾರರು ಜಾಗೃತಿಯಿಂದ ವಾಹನ ಚಾಲನೆ ಮಾಡಬೇಕಿದೆ.

ಆಗುಂಬೆ ಬಸ್ ನಿಲ್ದಾಣಕ್ಕೆ ಬೇಕು ಸರ್ಕಲ್!

ಆಗುಂಬೆ ಬಸ್ ನಿಲ್ದಾಣ ಸುತ್ತ ಮುತ್ತ ವಾಹನ ಅಪಘಾತ ದಿನೇ ದಿನೇ ಹೆಚ್ಚುತ್ತಿದೆ. ಈ ಬಗ್ಗೆ ಅಲ್ಲಿ ಸರ್ಕಲ್ ನಿರ್ಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.