ತೀರ್ಥಹಳ್ಳಿಗೆ ಬಂದ ಚಪ್ಪಲಿ ಕಳ್ಳ!
– ಸುಮಾರು 2000 ಬೆಲೆ ಬಾಳುವ ಚಪ್ಪಲಿ ಕಳ್ಳತನ
– ಕಳ್ಳನ ಫೋಟೋ ಬಿಡುಗಡೆ: ಪೊಲೀಸರಿಗೆ ಮಾಹಿತಿ ಕೊಡಿ..!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಜಾತ್ರೆಯಲ್ಲಿ ಚಪ್ಪಲಿ ಕಳ್ಳ ಬಂದಿದ್ದಾನೆ. ಈಗಾಗಲೇ ಅನೇಕರ ಚಪ್ಪಲಿ ಈತ ಕದ್ದಿದ್ದಾನೆ. ಇತರೆ ವಸ್ತು ಕಳುವು ಮಾಡುವ ಸಾಧ್ಯತೆ ಕೂಡ ಇದೆ. ನೀಲಿ, ಬಿಳಿ ಪಂಚೆ ಉಟ್ಟಿರುವ ಈ ವ್ಯಕ್ತಿ ಕಳ್ಳನಾಗಿದ್ದು. ಈ ವ್ಯಕ್ತಿ ಸುಮಾರು 2000 ಸಾವಿರ ರೂಪಾಯಿ ಬೆಲೆ ಬಾಳುವ ಚಪ್ಪಲಿ ಕದ್ದಿರುತ್ತಾನೆ. 16.1.2024ರ ಬೆಳ್ಳಿಗೆ 11ಗಂಟೆ ಸಮಯದಲ್ಲಿ ರಥಬೀದಿಯ ಮನೆ ಮುಂಭಾಗದಲ್ಲಿ ನಡೆದಿದೆ. ಈ ವ್ಯಕ್ತಿ ಕಳ್ಳನಾಗಿದ್ದು ಈತನ ಚಲನ ವಲನ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಅಥವಾ ತೀರ್ಥಹಳ್ಳಿ ಜಾತ್ರೆಯಲ್ಲಿ ಕಂಡಲ್ಲಿ ಪೋಲಿಸ್ ಇಲಾಖೆಗೆ ತಿಳಿಸಿ ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.