ಇನ್ನು ಆಸ್ತಿ ದಾಖಲೆ ಇನ್ನು ಡಿಜಿಟಲ್!
– ತೀರ್ಥಹಳ್ಳಿಗೆ ಭೂ ರಕ್ಷಣಾ ಗಣಿಕಾ ಯಂತ್ರ ಭಾಗ್ಯ
– ತಾಲೂಕು ಕಚೇರಿ, ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ
– ಈಗ ದಾಖಲೆ ಭದ್ರತೆ ಶಾಶ್ವತ: ನೇರ ಸುಲಭ ಲಭ್ಯತೆ
NAMMUR EXPRESS NEWS
ತೀರ್ಥಹಳ್ಳಿ: ಆಸ್ತಿ ದಾಖಲೆ ತಿದ್ದುವ ಮೂಲಕ ನಡೆಯುತ್ತಿರುವ ವಂಚನೆ, ಪೋರ್ಜರಿಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರಕಾರ ರಾಜ್ಯಾದ್ಯಂತ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಅದರಂತೆ ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರಾದ ಆರಗ ಜ್ಞಾನೇಂದ್ರ ಅವರು ಭೂ ದಾಖಲೆಗಳ ಸಂಗ್ರಹಕ್ಕಾಗಿ ಸರ್ಕಾರದಿಂದ ಹತ್ತು ಗಣಕಯಂತ್ರಗಳನ್ನು ಮಂಜೂರು ಮಾಡಿಸಿ, ತೀರ್ಥಹಳ್ಳಿಯಲ್ಲಿ ಬುಧವಾರ ತಾಲೂಕು ಕಚೇರಿಯಲ್ಲಿ 10 ನೂತನ ಭೂ ದಾಖಲೀಕರಣ ಯಂತ್ರವನ್ನು ಶಾಸಕ ಆರಗ ಜ್ಞಾನೇಂದ್ರ ಅವರಿಂದ ಲೋಕಾರ್ಪಣೆಗೊಳಿಸಲಾಯಿತು.
ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಈಗಿರುವ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ದಾಖಲಿಸಿ ಕೊಂಡು ಮುಂದಿನ ದಿನಗಳಲ್ಲಿ ಎಲ್ಲಾ ಜನರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿ ತಹಶೀಲ್ದಾರ್ ಅವರಿಗೆ ತಾಲೂಕು ಕಚೇರಿಯ ಬ್ರೋಕರ್ ಹಾವಳಿ ತಡೆಗಟ್ಟಿ ಜನಸಾಮಾನ್ಯರ ಕೆಲಸಗಳನ್ನು ಆದಷ್ಟು ಬೇಗ ಮಾಡಿಕೊಡಿ ಎಂದು ಹೇಳಿದರು.
ಫೆಬ್ರವರಿ 10ರ ಶನಿವಾರದಂದು ಗೋಪಾಲಗೌಡರ ರಂಗಮಂದಿರದಲ್ಲಿ ಗ್ಯಾರಂಟಿ ಯೋಜನೆಗಳ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಇದುವರೆಗೆ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳದೆ ಇದ್ದವರು ಕೂಡ ದಾಖಲೆಗಳನ್ನು ತಂದು ನೋಂದಾವಣಿ ಮಾಡಿಕೊಳ್ಳಲು ತಿಳಿಸಿದರು. ತಹಶೀಲ್ದಾರ್ ಜೆ ಬಿ ಜಕ್ಕಣ್ಣ ಗೌಡರು, ತಾಲೂಕು ಕಾರ್ಯನಿರ್ವಹಣಾಧಿಕಾರಿ ಶೈಲಾ, ಶಿರಸ್ತೆದಾರ್ ಸತ್ಯಮೂರ್ತಿ, ಕಸಬಾ ರೆವೆನ್ಯೂ ಅಧಿಕಾರಿ ಸುಧೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.