Categories
ತೀರ್ಥಹಳ್ಳಿ

ಒಕ್ಕಲಿಗ ಹಿರಿಯ ನಾಯಕ ಶ್ರೀನಿವಾಸ್ ಗೌಡರಿಗೆ ನುಡಿ ನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ

ಒಕ್ಕಲಿಗ ಹಿರಿಯ ನಾಯಕ ಶ್ರೀನಿವಾಸ್ ಗೌಡರಿಗೆ ನುಡಿ ನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ
– ಜ.16 ರಂದು ತೀರ್ಥಹಳ್ಳಿಯ ಕೆಟಿಕೆ ಮಂದಿರದಲ್ಲಿ ಕಾರ್ಯಕ್ರಮ: ಸರ್ವರಿಗೂ ಸ್ವಾಗತ
– ತೀರ್ಥಹಳ್ಳಿ ಒಕ್ಕಲಿಗರ ಸಂಘದಿಂದ ಆಯೋಜನೆ

NAMMUR EXPRESS NEWS
ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಎಲ್ಲಾ ಸಮುದಾಯದ ಪ್ರೀತಿಪಾತ್ರರಾದ ಶ್ರೀಯುತ ಶ್ರೀನಿವಾಸ್ ಗೌಡರು ಕಸ್ತೂರು ಇವರು ದಿನಾಂಕ 07-01-2024 ರಂದು ದೈವಾಧೀನರಾಗಿರುವುದು ನಮ್ಮ ಸಮಾಜಕ್ಕೆ ಹಾಗೂ ತಾಲ್ಲೂಕಿನ ಎಲ್ಲಾ ಸಮುದಾಯಗಳಿಗೂ ಅತ್ಯಂತ ದುಖಃಕರ ಸಂಗತಿಯಾಗಿದೆ. ಶ್ರೀಯುತರು ಶಿಕ್ಷಣ ಕ್ಷೇತ್ರ, ರಾಜಕೀಯ ಕ್ಷೇತ್ರ, ಸಹಕಾರ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಲು ಶ್ರೀಯುತರಿಗೆ ದಿನಾಂಕ 16-01-2024 ರ ಮಂಗಳವಾರ ಮಧ್ಯಾಹ್ನ 2.30 ಕ್ಕೆ ಸರಿಯಾಗಿ ತಾಲ್ಲೂಕು ಒಕ್ಕಲಿಗರ ಸಂಘದ ಕೆ ಟಿ ಕೆ ಕಲ್ಯಾಣ ಮಂದಿರದಲ್ಲಿ ಎಲ್ಲಾ ಸಮುದಾಯದ ಸಹಕಾರದೊಂದಿಗೆ ನುಡಿನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಈ ಸಭೆಯಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.

ದಿನಾಂಕ: 16-01-2024 ರ ಮಂಗಳವಾರ
ಸಮಯ: ಮಧ್ಯಾಹ್ನ 2.30 ಕ್ಕೆ
ಸ್ಥಳ: ತಾಲ್ಲೂಕು ಒಕ್ಕಲಿಗರ ಸಂಘದ ಕೆ ಟಿ ಕೆ ಕಲ್ಯಾಣ ಮಂದಿರ

ಎಲ್ಲಾ ಸಮುದಾಯದ ಸಹಕಾರದೊಂದಿಗೆ ನುಡಿನಮನ ಹಾಗೂ ಶ್ರದ್ಧಾಂಜಲಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.