Categories
ತೀರ್ಥಹಳ್ಳಿ

ಚಿಕಿತ್ಸೆ ಹಣಕ್ಕಾಗಿ ಏಕ ವ್ಯಕ್ತಿ ನಾಟಕ ಪ್ರದರ್ಶನ!

ಚಿಕಿತ್ಸೆ ಹಣಕ್ಕಾಗಿ ಏಕ ವ್ಯಕ್ತಿ ನಾಟಕ ಪ್ರದರ್ಶನ!
– ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟು ಅಭಿಷೇಕ್ ಚಿಕಿತ್ಸಾ ವೆಚ್ಚ ಭರಿಸುವ ಸಲುವಾಗಿ ನಾಟಕ ಪ್ರದರ್ಶನ
– ಶೃತಿ ಆದರ್ಶ ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ
– ಕೈಲಾದಷ್ಟು ಹಣ ನೀಡಿ ಮಾನವೀಯತೆ ಮೆರೆದ ಜನ 

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬುಧವಾರ ಸಂಜೆ 6:30ಕ್ಕೆ ರಂಗ ಸಿಂಗಾರ ತೀರ್ಥಹಳ್ಳಿ ಅರ್ಪಿಸಿದ ಹೊಂಗಿರಣ ಶಿವಮೊಗ್ಗ ಪ್ರಸ್ತುತಿಯ ಶ್ರುತಿ ಆದರ್ಶ ಅಭಿನಯದ ಏಕವ್ಯಕ್ತಿ ನಾಟಕವನ್ನು ಪ್ರದರ್ಶಿಸಲಾಯಿತು.

ಅಭಿಗಾಗಿ ನಾವು ನೀವು :

ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟುವಾದ ಅಭಿಷೇಕ್ ಜಾದವ್ ಅವರ ಚಿಕಿತ್ಸಾ ವೆಚ್ಚವನ್ನು ಬರಿಸುವ ಸಹಾಯಾರ್ಥವಾಗಿ ಸರಿ ಸುಮಾರು 70 ನಿಮಿಷ ಏಕವ್ಯಕ್ತಿ ರಂಗ ಪ್ರಯೋಗ ನಿರಾಕರಣೆಯನ್ನು ಪ್ರದರ್ಶನ ಮಾಡಲಾಯಿತು.
ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ ಅವರ ಪತ್ನಿ ಶೃತಿ ಆದರ್ಶ ಅವರ ತಂಡದವರು ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಹಲವು ಗಣ್ಯರು ವೇದಿಕೆಯಲ್ಲಿ ತಂಡದ ಬಗ್ಗೆ ಗೌರವ ವ್ಯಕ್ತಪಡಿಸಿದರು. ಪ್ರದರ್ಶನ ತೀರ್ಥಹಳ್ಳಿಯ ಪ್ರೇಕ್ಷಕರ ಜನ ಮನೆಗೆದ್ದಿದ್ದು ಪ್ರೇಕ್ಷಕರು ತಮ್ಮ ಕೈಯಲ್ಲಿ ಆದಷ್ಟು ಹಣವನ್ನು ಅಭಿಷೇಕ್ ಜಾದವ್ ಅವರ ಚಿಕಿತ್ಸೆಯ ಸಲುವಾಗಿ ನೀಡಿ ಮಾನವೀಯತೆ ಮೆರೆದರು. ಕಾರ್ಯಕ್ರಮದಲ್ಲಿ ಪಕ್ಷಾಭೇದ ಮರೆತು ಎಲ್ಲಾ ಪಕ್ಷದ ರಾಜಕಾರಣಿಗಳು, ಡಿವೈಎಸ್ಪಿ ಗಜಾನನ ವಾಮನಸುತಾರ ಪಾಪಂ ಅಧ್ಯಕ್ಷೇ ಗೀತಾ ರಮೇಶ್, ಪಪಂ ಸದಸ್ಯರು ಮತ್ತು ಶಾಲಾ ಕಾಲೇಜಿನ ಶಿಕ್ಷಕ, ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು, ಯುವ ಪ್ರಮುಖರು ಸೇರಿದಂತೆ ಪ್ರಮುಖರು ಮತ್ತು ಕಲಾ ಪ್ರೇಮಿಗಳು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.