Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ರಾಜ್ಯೋತ್ಸವ ಸಂಭ್ರಮ ಶುರು!

ತೀರ್ಥಹಳ್ಳಿಯಲ್ಲಿ ರಾಜ್ಯೋತ್ಸವ ಸಂಭ್ರಮ ಶುರು!
– ಅಂಗಡಿ ಅಂಗಡಿಗೆ ಕನ್ನಡ ಭಾವುಟ ವಿತರಿಸಿದ ಕರವೇ ಕಾರ್ಯಕರ್ತರು
– ನ.25 ಕ್ಕೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ರಾಜ್ಯೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕನ್ನಡ ರಕ್ಷಣಾ ವೇದಿಕೆ ತೀರ್ಥಹಳ್ಳಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ನ.25ರ ಶನಿವಾರ ಸಂಜೆ 5:30ಕ್ಕೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಅಂಗಡಿ, ಕಚೇರಿಗಳಲ್ಲಿ ಕನ್ನಡ ಭಾವುಟ ರಾರಾಜಿಸಬೇಕು ಎಂಬ ಉದ್ದೇಶದಿಂದ ಕರವೇ ಪ್ರಮುಖರು ತೀರ್ಥಹಳ್ಳಿ ಪಟ್ಟಣದಲ್ಲಿ ಗುರುವಾರ ಕನ್ನಡ ಭಾವುಟವನ್ನು ಅಂಗಡಿ ಅಂಗಡಿಗಳಿಗೆ ಹಂಚಿದರು.
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ್ ಹೆಗ್ಡೆ, ಕರವೇ ಅಧ್ಯಕ್ಷರಾದ ಸುರೇಂದ್ರ ಯಡೂರು, ಪ್ರಮುಖರಾದ ಮಲ್ಲಕ್ಕಿ ರಾಘವೇಂದ್ರ, ಬಿಳಿಗಿರಿ ವಿಜಯ್, ಜ್ಯೋತಿ ದಿಲೀಪ್, ಶ್ರೀಕಾಂತ್, ಕಟ್ಟೆ ಕರಣ್, ಸುರೇಶ್ ಟೈಲರ್, ಗಣೇಶ್ ಕೌದಳ್ಳಿ, ಅಂಬರೀಷ್ ಬಸವಾನಿ, ಡಾಕಮ್ಮ, ವಿಜಯ ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರು ಕನ್ನಡ ಸೇವೆಗೆ ಕೆಲಸ ಮಾಡುತ್ತಿದ್ದಾರೆ.

ಕನ್ನಡ ಸಾಧಕ ಮಕ್ಕಳಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಗಳಿಸಿದ ತಾಲೂಕಿನ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಇರುತ್ತದೆ. ಹಾಗೂ ತೀರ್ಥಹಳ್ಳಿಯ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಇವರಿಂದ ಡ್ಯಾನ್ಸ್ ಕಾರ್ಯಕ್ರಮ ನಂತರ ಶ್ರೀ ದುರ್ಗಾ ಕಲಾತಂಡ ಹಾರಾಡಿ ಬ್ರಹ್ಮಾವರ ಇವರಿಂದ ಒಂದಲ್ಲ ಒಂದು ಸಮಸ್ಯೆ ಎನ್ನುವ ಕುಂದ ಕನ್ನಡದ ಹಾಸ್ಯಮಯ ನಗೆ ನಾಟಕ ನಡೆಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.