Categories
ತೀರ್ಥಹಳ್ಳಿ

ಪರಶುರಾಮನ ಇತಿಹಾಸದ ನಾಟಕ: ಜನರ ಮೆಚ್ಚುಗೆ

ಪರಶುರಾಮನ ಇತಿಹಾಸದ ನಾಟಕ: ಜನರ ಮೆಚ್ಚುಗೆ
– ತೆಪ್ಪೋತ್ಸವ ವೇದಿಕೆಯಲ್ಲಿ ನಾಟಕ ಪ್ರದರ್ಶನ
– ಪ್ರವೀಣ್ ಮಂಡಗದ್ದೆ, ಪೂರ್ಣೇಶ್ ಪೂಜಾರಿ ಸೇರಿ ಅನೇಕರಿಂದ ನಾಟಕ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಇತಿಹಾಸವಾದ ಪರಶುರಾಮನ ಚರಿತ್ರೆಯನ್ನು ಸರಳವಾಗಿ ನಾಟಕಕ್ಕೆ ತಂದು ತೆಪ್ಪೋತ್ಸವದ ವೇದಿಕೆಯಲ್ಲಿ ಪ್ರದರ್ಶನ ಮಾಡಿದ್ದು, ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪರಶುರಾಮನ ಚರಿತ್ರೆ ಮರುಶೃಷ್ಟಿ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ ತೀರ್ಥಹಳ್ಳಿಯ ಕಲಾವಿದರಾದ ಪ್ರವೀಣ್ ಮಂಡಗದ್ದೆ, ಪೂರ್ಣೇಶ್ ಪೂಜಾರಿ ಮೇಲಿನಕುರುವಳ್ಳಿ, ಭಾರತಿ ತೀರ್ಥಹಳ್ಳಿ, ಸುನೀಲ್ ಕುಮಾರ್ ತ್ಯಾನಂದೂರು, ಪವನ್ ಗವಾಸ್ಕರ್ ತೀರ್ಥಹಳ್ಳಿ ನಾಟಕದಲ್ಲಿ ಪಾತ್ರ ಮಾಡಿದ್ದರು.
ಒಂದೊಳ್ಳೆ ವೇದಿಕೆಯಲ್ಲಿ ಉತ್ತಮ ವಿಚಾರದ ನಾಟಕಕ್ಕೆ ಎಳ್ಳಮಾವಾಸೆಯ ಜಾತ್ರಾ ಕಮಿಟಿ ಅವಕಾಶ ಮಾಡಿಕೊಟ್ಟಿದ್ದು ಅವರಿಗೆ ಧನ್ಯವಾದ ಹೇಳಿದ್ದಾರೆ. ರಾಘವೇಂದ್ರ ಸೊಪ್ಪುಗುಡ್ಡೆ, ಸುಶೀಲ ಬೆಟ್ಟಮಕ್ಕಿ, ಹಾಗೂ ವಿಶಾಲ್ ಕುಮಾರ್, ಲಯನ್ಸ್ ಪಾಂಡುರಂಗಪ್ಪ ಸೇರಿದಂತೆ ಎಲ್ಲಾ ಸದಸ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.