ಮಕರ ಸಂಕ್ರಮಣದ ಪುಣ್ಯಕಾಲ!
– ಬೆಜ್ಜವಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿ ಆರಾಧನೆ!
– ಆಗಸದಲ್ಲಿ ಗರುಡನ ದರ್ಶನ!
NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಕ್ಷೇತ್ರ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯವು ಎರಡನೆಯ ಶಬರಿ ಮಲೈ ಎಂದೇ ಪ್ರಸಿದ್ಧಿಯಾಗಿದ್ದು ಇದೀಗ ದೇವಸ್ಥಾನದಲ್ಲಿ ಸಂಕ್ರಮಣ ಆರಂಭವಾಗಿದೆ. ಅಯ್ಯಪ್ಪ ಸ್ವಾಮಿಯ ಪೂಜಾ ಕೈಂಕರ್ಯಗಳು ಬೆಳಿಗ್ಗೆಯಿಂದಲೇ ಆರಂಭವಾಗಿದ್ದು, ಭಕ್ತರಿಗೆ ಆಕಾಶದಲ್ಲಿ ಗರುಡನ ದರ್ಶನವಾಗಿದೆ. ಗರುಡನ ದೇವಸ್ಥಾನ ಪರ್ಯಟನೆಯ ದಿವ್ಯ ದರ್ಶನವನ್ನು ನೆರೆದಿದ್ದ ಭಕ್ತ ಸಾಗರ ಕಣ್ತುಂಬಿಕೊಂಡಿದೆ. ಶಬರಿಮಲೈನಲ್ಲಿ ನಡೆಯುವ ಎಲ್ಲ ಪೂಜೆಗಳು ಅದೇ ಕ್ರಮದಂತೆ ಇಲ್ಲಿ ನಡೆಯುತ್ತದೆ. ದೇವಸ್ಥಾನದಲ್ಲಿ ಮಹಾಮಂಗಳಾರತಿ ನಡೆಯುವ ವೇಳೆ ಆಕಾಶದಲ್ಲಿ ಗರುಡನ ದರ್ಶನವಾಗುತ್ತದೆ. ಇದು ಸಾಕ್ಷಾತ್ ಅಯ್ಯಪ್ಪ ಸ್ವಾಮಿಯೇ ದರ್ಶನ ನೀಡುವುದೆಂಬ ನಂಬಿಕೆ ಇದೆ. ಇಂದು ಗರುಡನ ದರ್ಶನವಾದವೇಳೆ ಅಯ್ಯಪ್ಪ ಸ್ವಾಮಿಯ ನಾಮ ಘೋಷಗಳು ಬೆಜ್ಜವಳ್ಳಿ ಕ್ಷೇತ್ರದ ತುಂಬೆಲ್ಲ ಹರಡಿದ್ದು ಭಕ್ತರು ಪುನೀತರಾದರು.




