Categories
ತೀರ್ಥಹಳ್ಳಿ

ಕೋಣಂದೂರಿನಲ್ಲಿ ಪೊಲೀಸರ ಲಾಠಿ ಚಾರ್ಜ್!

ಕೋಣಂದೂರಿನಲ್ಲಿ ಪೊಲೀಸರ ಲಾಠಿ ಚಾರ್ಜ್!
* ಹೋಟೆಲ್ ಮುಂದೆ ವಿದ್ಯಾರ್ಥಿಗಳ ಮಾರಾಮಾರಿ
* ವಿದ್ಯಾರ್ಥಿಗಳ ಗಮನಿಸದ ಕಾಲೇಜು ಆಡಳಿತ, ಪೋಷಕರು 
ವರದಿ: ಉಮೇಶ್ ದೇಮ್ಲಾಪುರ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಪಟ್ಟಣದಲ್ಲಿ ಜುಲೈ 23 ರಂದು ಸುಮಾರು 3 ಗಂಟೆಯ ಸಮಯದಲ್ಲಿ ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳು ಎಗ್ ರೈಸ್ ಅಂಗಡಿ ಎದುರು ಹೊಡೆದಾಡಿಕೊಂಡಿದ್ದಾರೆ. ಎರಡನೇ ಸುತ್ತು ಹೊಡೆದಾಡಿಕೊಳ್ಳಲು ಸಜ್ಜಾಗುತ್ತಿರುವ ವಿದ್ಯಾರ್ಥಿಗಳನ್ನು ಕಂಡ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಈ ವಿಷಯ ತಿಳಿಸಿದ ಕೂಡಲೇ ಶೀಘ್ರವಾಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಅಲ್ಲಿ ಗುಂಪಾಗಿ ಮಾರಾಮಾರಿಗೆ ತಯಾರಾಗುತ್ತಿರುವ ಯುವಕರಿಗೆ ಲಾಠಿ ಪ್ರಹಾರ ಮಾಡಿ ಬೆತ್ತದ ರುಚಿ ತೋರಿಸಿದ್ದಾರೆ.
ಪೊಲೀಸರ ಲಾಠಿಗಳು ವಿದ್ಯಾರ್ಥಿಗಳ ಮೈ ಮೇಲೆ ಶಬ್ದ ಮಾಡಿದ ತಕ್ಷಣ ಗಲಾಟೆ ಮಾಡುವುದನ್ನು ಬಿಟ್ಟು ಆ ಜಾಗದಿಂದ ಪರಾರಿ ಆಗಿದ್ದಾರೆ.

ಬದುಕಿನ ಮಹತ್ವದ ಘಟ್ಟದಲ್ಲಿ ಪುಂಡಾಟ!

ಕೋಣಂದೂರಿನ ಅಂಗಡಿ ಮುಂಗಟುಗಳ ಮುಂದೆ, ಸಿಗರೇಟ್ ಅಂಗಡಿಗಳಲ್ಲಿ ಕೂತು ಸಂಜೆ ಮನೆಗೆ ತೆರಳುವ ಅದೆಷ್ಟು ವಿದ್ಯಾರ್ಥಿಗಳು ಇಲ್ಲಿದ್ದಾರೆ. ಗಲಾಟೆ ಮಾಡುವುದೇ ಹೀರೋಯಿಸಮ್ ಅಂದುಕೊಂಡಿದ್ದಾರೆ. ಪೋಷಕರು ತಮ್ಮ ಮಕ್ಕಳು ಕಾಲೇಜಿಗೆ ಹೋಗುತ್ತಾರೆಂದು ನಂಬಿ ಕೆಲಸಕ್ಕೆ ಹೋಗುತ್ತಾರೆ. ಈ ವಿದ್ಯಾರ್ಥಿಗಳು ಅವರ ನಂಬಿಕೆಗಳಿಗೆ ದ್ರೋಹ ಮಾಡುತ್ತಿದ್ದಾರೆ. ತಮ್ಮ ಮಕ್ಕಳು ಎಲ್ಲಿ ಹೋಗುತ್ತಿದ್ದಾರೆ..ಏನು ಮಾಡುತ್ತಿದ್ದಾರೆ ಯಾವುದರ ಬಗ್ಗೆಯೂ ಚಿಂತಿಸದೇ ಪೋಷಕರು ಉದಾಸಿನ ತೋರಿಸುತ್ತಿದ್ದಾರೆ. ಪ್ರತಿಯೊಬ್ಬ ಪೋಷಕರಿಗೂ ಒಂದು ಆಸೆ ಇರುತ್ತದೆ “ನಾವು ಮಾಡುತ್ತಿರುವ ಕೆಲಸವನ್ನು ನಮ್ಮ ಮಕ್ಕಳು ಮಾಡಬಾರದೆಂದು”. ಅವನು ನೆಮ್ಮದಿಯಾಗಿ ಇರಬೇಕೆಂದು. ದುರಾದೃಷ್ಟ ಎಂದರೆ ಆ ವಿದ್ಯಾರ್ಥಿಗಳು ಅವರ ಕನಸನ್ನು ಹುಸಿಗೊಳಿಸುತ್ತಿದ್ದಾರೆ. ಅದೆಷ್ಟೋ ವಿದ್ಯಾರ್ಥಿಗಳು ಓದದೇ ಆಮೇಲೆ ಕೆಲಸ ಮಾಡದೇ ಸೋಷಿಯಲ್ ಮೀಡಿಯಾ, ಬೆಟ್ಟಿಂಗ್, ಹುಡುಗಿ ಯರ ಹುಚ್ಚಿಗೆ ಬಿದ್ದು ಜೀವನ ಕಳೆದುಕೊಳ್ಳುತ್ತಿದ್ದಾರೆ. ಲಕ್ಷ ಲಕ್ಷ ಸಾಲ ಮಾಡಿದ ಪೋಷಕರು ಕೂಲಿ ಮಾಡುವುದರಲ್ಲೇ ಜೀವನ ಸವೆಸುತ್ತಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಏನು ಮಾಡ್ತಿದೆ?

ಉಪನ್ಯಾಸಕರುಗಳು ತಮ್ಮ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಾಲೇಜಿನ ಸಮವಸ್ತದಲ್ಲಿ ಸೀಗ್ರೆಟ್ ಅಂಗಡಿ ಹಾಗೂ ಸಿ ಕೆ ರೋಡ್ ನಲ್ಲಿ ಮತ್ತು ಗುಮ್ಮನ ಗುಡ್ಡದಲ್ಲಿ ಅಲೆದಾಡುವ ವಿದ್ಯಾರ್ಥಿಗಳನ್ನು ಕಂಡು ಕೂಡ ಸುಮ್ಮನೆ ತೆರಳುತ್ತಿದ್ದಾರೆ ಎಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ.
ವಿದ್ಯಾರ್ಥಿಗಳು ಉಪನ್ಯಾಸಕರ ಮಾತಿಗೂ ಕಿವಿಗೊಡದೆ ತಮ್ಮ ಮನಸ್ಸು ಇಚ್ಛೆ ವರ್ತಿಸುತ್ತಿದ್ದಾರೆ. ಬಹುತೇಕ ಉಪನ್ಯಾಸಕರುಗಳಿಗೆ ” ನನ್ನ ಶಿಷ್ಯ ನನಗಿಂತ ಒಂದು ಹಂತ ಮೇಲಿರಬೇಕು. ಆಗ ನನ್ ಜೀವನ ಸಾರ್ಥಕ” ಎಂದು ಉಪನ್ಯಾಸ ಮಾಡುತ್ತಿರುತ್ತಾರೆ. ಆದರೆ ಈ ವಿದ್ಯಾರ್ಥಿಗಳು ಅವರ ಕನಸುಗಳನ್ನು ನಿಷ್ಫಲ ಮಾಡುತ್ತಿದ್ದಾರೆ.

ಪೊಲೀಸರ ಎಚ್ಚರಿಕೆ…ಕಿರಿಕ್ ಮಾಡಿದ್ರೆ ಶಿಕ್ಷೆ! 

ಇನ್ನು ಮುಂದೆ ವಿದ್ಯಾರ್ಥಿಗಳು ಕೋಣಂದೂರಿನಲ್ಲಿ ಗುಂಪು ಸೇರುವ ಹಾಗಿಲ್ಲ. ಮನೆ ಬಿಟ್ಟರೆ ಕಾಲೇಜು ಕಾಲೇಜು ಬಿಟ್ಟರೆ ಮನೆಯಲ್ಲಿರಬೇಕು. ಗುಂಡಾಗಿರಿ ಹಾಗೂ ಗಲಾಟೆ ಮಾಡಿದವರ ಮೇಲೆ ಕೋಣಂದೂರು ಪೊಲೀಸರ ಕಟ್ಟೆಚ್ಚರ ವಹಿಸಿದ್ದು ಸಾರ್ವಜನಿಕರಿಂದ ಪೊಲೀಸರಿಗೆ ಶ್ಲಾಘನೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.