ಟಾಪ್ 3 ನ್ಯೂಸ್ ತೀರ್ಥಹಳ್ಳಿ
ಲಂಚ ತಿನ್ನುವ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡುತ್ತಿದ್ದಾರಾ?
– ಅಕ್ರಮದಲ್ಲಿ ಎಲ್ಲಾ ಪಕ್ಷದವರ ಪಾಲು: ಅಂಥ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಏಕಿಲ್ಲ?: ಪ್ರಶಾಂತ್ ಕುಮಾರ್ ಕುಪ್ಪಳ್ಳಿ ಪ್ರಶ್ನೆ
ಸುದ್ದಿ 2- ಸುರೇಶ್ ಮಲ್ಲಿಗೆಮನೆರವರ “ರೇಡಿಯೋ ರಂಗಮ್ಮ” ಕಥಾ ಸಂಕಲನ ಬಿಡುಗಡೆ
ಸುದ್ದಿ 3- ತೀರ್ಥಹಳ್ಳಿ ಹಾಸ್ಟೆಲ್ ಪರಿಶೀಲನೆ ಮಾಡಿದ ಆಡಳಿತ
ತೀರ್ಥಹಳ್ಳಿ ತಾಲೂಕಲ್ಲಿ ಇದೀಗ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಅಂತ ಪ್ರತಿಭಟನೆ, ಪತ್ರಿಕಾ ಹೇಳಿಕೆಗಳ ಸಮರ ನಡೆಯುತ್ತಿದೆ. ಈ ನಡುವೆ ಎಲ್ಲಾ ಪಕ್ಷಗಳ ನಾಯಕರು “ಶಿಷ್ಟಾಚಾರ ಉಲ್ಲಂಘನೆ”ಎಂಬ ಹೆಸರಲ್ಲಿ ಹೋರಾಟಕ್ಕೆ ಇಳಿದಿದ್ದಾರೆ. ಇಲ್ಲಿ ಕೆಲ ನಾಯಕರು, ಮುಖಂಡರು ತಮಗೆ ಬೆಲೆ ಕೊಡಲಿಲ್ಲ ಎಂಬ ಕಾರಣಕ್ಕೆ ಗಲಾಟೆ ಎಬ್ಬಿಸುತ್ತೀರಿ. ಎಲ್ಲಾ ಪಕ್ಷದ ಮುಖಂಡರು ಬೇಕಾದ್ರೆ ಬೀದಿಗೆ ಇಳಿತೀರಿ , ಆದರೆ ಅಕ್ರಮ ದಂಧೆಗೆ ಲಂಚವನ್ನು ತೆಗೆದುಕೊಂಡು ಸಹಕರಿಸುವ ಅಧಿಕಾರಿಗಳು ಮತ್ತು ಎಷ್ಟೋ ಸರ್ಕಾರಿ ನೌಕರರು ಬಡವರ ಕೆಲಸ ಆಗ್ಬೇಕು ಅಂದ್ರೆ ಲಂಚ ಇಲ್ಲದೆ ಮಾಡುವುದೇ ಇಲ್ಲ. ಈ ರೀತಿಯ ಅಧಿಕಾರಿಗಳ ವಿರುದ್ಧ ಯಾರು ಹೋರಾಟ ಮಾಡಿದ್ದೀರಿ. ಇದು ನಿಮ್ಮ ಕಣ್ಣಿಗೆ ಕಾಣಿಸ್ತ ಇಲ್ವಾ ಎಂದು ಯುವ ಮುಖಂಡರಾದ ಪ್ರಶಾಂತ್ ಕುಮಾರ್ ಕುಪ್ಪಳ್ಳಿ ಪ್ರಶ್ನೆ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರತಿ ಕಚೇರಿ, ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಂಚ, ಸೋಮಾರಿತನ ಮಾಡುವ ಸರ್ಕಾರಿ ನೌಕರರ ವಿರುದ್ಧ ಪ್ರತಿಭಟನೆ ಆಗಬೇಕು. ಅವರಿಗೆ ಶಿಕ್ಷೆ ಆಗಬೇಕು ಇಂಥ ಕೆಲಸವನ್ನು ಯಾರೂ ಮಾಡಲು ಮುಂದೆ ಬರುವುದಿಲ್ಲ. ಆದರೆ ನಿಷ್ಠಾವಂತ ಪ್ರಾಮಾಣಿಕ ಸರ್ಕಾರಿ ನೌಕರರಿಗೆ ಅನ್ಯಾಯ ಆಗಬಾರದು. ಎಷ್ಟೋ ಜನ ಪ್ರಾಮಾಣಿಕ ಅಧಿಕಾರಿಗಳು ನೌಕರರು ಇದ್ದಾರೆ ಅವರನ್ನು ಗೌರವಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸುರೇಶ್ ಮಲ್ಲಿಗೆಮನೆರವರ “ರೇಡಿಯೋ ರಂಗಮ್ಮ” ಕಥಾ ಸಂಕಲನ ಬಿಡುಗಡೆ
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವ್ಯಾಯಾಮ ಶಾಲೆಯಲ್ಲಿ ಯುವ ಬರಹಗಾರ ಮತ್ತು ಕಥೆಗಾರರಾದ ಸುರೇಶ್ ಮಲ್ಲಿಗೆ ಮನೆ ಇವರ “ರೇಡಿಯೋ ರಂಗಮ್ಮ” ಕಥಾ ಸಂಕಲನ ಮತ್ತು “ಕ್ಷಣ ಚಿತ್ತಂ ಕ್ಷಣ ಪಿತ್ತಂ” ಕವನ ಸಂಕಲನದ ಮುಖಪುಟವನ್ನು ಬಿಡುಗಡೆ ಮಾಡಲಾಯಿತು. ಪಟ್ಟಣದ ವ್ಯಾಯಾಮ ಶಾಲೆಗೆ ಆಗಮಿಸಿದ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ಗುರುರಾಜ್ ಅವರು ಸಾಂಕೇತಿಕವಾದ ಈ ಮುಖಪುಟವನ್ನು ಬಿಡುಗಡೆ ಮಾಡಿ ಮಾತನಾಡಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಆಟಗಾರ ಮತ್ತು ತರಬೇತುದಾರರಾದ ಮಹಮ್ಮದ್ ಸಿರಾಜುದ್ದೀನ್,ಸಂತೋಷ್ ಆಚಾರ್ಯ, ಜಿಮ್ ತರಬೇತುದಾರರಾದ ಸತೀಶ್ ನಾಯಕ್, ಅಜಾದ್,ಜಿಮ್ ನ ಹಿರಿಯರು ಮತ್ತು ಕಿರಿಯರೆಲ್ಲರೂ ಭಾಗವಹಿಸಿದ್ದರು.
ತೀರ್ಥಹಳ್ಳಿ ಹಾಸ್ಟೆಲ್ ಪರಿಶೀಲನೆ ಮಾಡಿದ ಆಡಳಿತ!
ತೀರ್ಥಹಳ್ಳಿ: ಪಟ್ಟಣದಲ್ಲಿರುವ ಬಿ ಸಿ ಎಂ ಫ್ರೀ ಮೆಟ್ರಿಕ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ದ್ಯಾರ್ಥಿ ನಿಲಯಕ್ಕೆ ಮತ್ತು ಬಿ ಆರ್ ಅಂಬೇಡ್ಕರ್ ಪರಿಶೀಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯಕ್ಕೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮಾತುಲ್ಲಾ ಅಸಾದಿ ಹಾಗೂ ಉಪಾಧ್ಯಕ್ಷರಾದ ಗೀತಾ ರಮೇಶ್ ಭೇಟಿ ನೀಡಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತಹ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳ ಬಳಿ ಚರ್ಚೆ ಮಾಡಲಾಯಿತು. ಆರೋಗ್ಯ ನಿರೀಕ್ಷಕರಾದ ಪ್ರಕಾಶ್, ಪಟ್ಟಣ ಪಂಚಾಯತಿ ಮಹಿಳಾ ಸಿಬ್ಬಂದಿ ಗಳು ಉಪಸ್ಥಿತಿ ಇದ್ದರು.
