ಪ್ರಭಾಕರ್ ಹೊರಬೈಲು ಅವರಿಗೆ ಮೇಲಿನಕುರುವಳ್ಳಿ ಗ್ರಾ.ಪಂ ಸಾರಥ್ಯ
– ಅಧ್ಯಕ್ಷರಾಗಿ ಹೊರಬೈಲು ಪ್ರಭಾಕರ್ ಅವಿರೋಧ ಆಯ್ಕೆ
– ಕಿಮ್ಮನೆ ರತ್ನಾಕರ್ ಸೇರಿ ಅನೇಕ ನಾಯಕರಿಂದ ಶುಭ ಹಾರೈಕೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ಗ್ರಾಮ ಪಂಚಾಯತ್ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ಹೊರಬೈಲು ಪ್ರಭಾಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜುಲೈ 28ರಂದು ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಗ್ರಾ.ಪಂ.ನ 15 ಸದಸ್ಯರು ಒಮ್ಮತದಿಂದ ಪ್ರಭಾಕರ್ ಆಯ್ಕೆಗೆ ಸಹಮತಿಸಿದರು. ನೂತನ ಅಧ್ಯಕ್ಷ ಪ್ರಭಾಕರ್‌ರನ್ನು ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್ ಅಭಿನಂದಿಸಿ ಶುಭ ಹಾರೈಸಿದರು.
ಬುಕ್ಲಾಪುರ ವಾರ್ಡ್ 2ರ ಸದಸ್ಯರು ಈ ಹಿಂದಿನಿಂದಲೂ
ಗ್ರಾಮ ಪಂಚಾಯ್ತಿಯ ಸದಸ್ಯರಾಗಿ ಅನುಭವವನ್ನ ಹೊಂದಿದ್ದಾರೆ
ಬುಕ್ಲಾಪುರ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ.
ಜಿಲ್ಲಾ ಪಂಚಾಯಿತಿಯ ಸದಸ್ಯರಾದ ಪದ್ಮನಾಭ ಹಾರೋಗೋಳಿಗೆ, ಕೆಳೆಕೆರೆ ದಿವಾಕರ್, ಮಾಜಿ ಅಧ್ಯಕ್ಷರಾದ ರವಿ, ಬಂಡೆ ವೆಂಕಟೇಶ್, ಪಟ್ಟಣ ಪಂಚಾಯಿತಿಯ ಸದಸ್ಯರಾದ ರಾಘವೇಂದ್ರ ಶೆಟ್ಟಿ, ಮುಖಂಡರಾದ ಅಮರಪಾಲಿ ಸುರೇಶ್, ಗ್ರಾಮ ಪಂಚಾಯಿತಿಯ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
