ತೀರ್ಥಹಳ್ಳಿಯಲ್ಲಿ ಜು. 28ರಂದು ಪತ್ರಿಕಾ ದಿನಾಚರಣೆ
– ಸಾಧಕರಿಗೆ ಸನ್ಮಾನ ಸೇರಿದಂತೆ,ವಿಶೇಷ ಅಭಿನಂದನಾ ಕಾರ್ಯಕ್ರಮ
– ಸರ್ವರನ್ನು ಸ್ವಾಗತಿಸಿದ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಶೆಟ್ಟಿ, ಕಾರ್ಯದರ್ಶಿ ಮುರುಘರಾಜ್
NAMMUR EXPRESS NEWS
ತೀರ್ಥಹಳ್ಳಿ: ಜು. 28ರಂದು ಸಂಜೆ ಇಲ್ಲಿನ ಮಾಧವ ಮಂಗಲ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ತಾಲ್ಲೂಕು ಘಟಕ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಾಸಕ ಆರಗ ಜ್ಞಾನೇಂದ್ರ ಸಮಾರಂಭ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮುನ್ನೂರು ಮೋಹನ ಶೆಟ್ಟಿ ವಹಿಸಲಿದ್ದಾರೆ.
ಕೋಣಂದೂರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪಿ. ಆರಡಿ ಮಲ್ಲಯ್ಯ ಕಣ್ಣೀರ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಎಂ.ಎ.ಡಿ.ಬಿ. ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಪ.ಪಂ.ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಪ.ಪಂ. ಸದಸ್ಯ ಸೊಪುಗುಡ್ಡೆ ರಾಘವೇಂದ್ರ, ಸಾಹಿತ್ಯ ಪರಿಷತ್ ಅಧ್ಯಕ್ಷ ರಮೇಶ್ ಶೆಟ್ಟಿ, ಸಹಕಾರಿ ರಾಘವೇಂದ್ರ ಶೆಟ್ಟಿ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್, ರಾಜ್ಯ ನಿರ್ದೇಶಕ ಟೆಲೆಕ್ಸ್ ರವಿಕುಮಾರ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಪತ್ರಕರ್ತರಾದ ಶಿವಾನಂದ ಕರ್ಕಿ, ಮುರುಘರಾಜ್, ಟಿ.ಜೆ. ಅನಿಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ವಕೀಲರ ಸಂಘದ ಅಧ್ಯಕ್ಷ ಎಂ. ಎನ್. ರಮೇಶ್, ಮಕ್ಕಳ ತಜ್ಞ ಡಾ| ಪ್ರಭಾಕರ್, ಪಶು ವೈದ್ಯ ಪಾವುಲು ಕ್ಯಾಸ್ತಲಿನೋ, ಸಂಗೀತ ಕಷ್ಣದಿಂದ ಕೃಷ್ಣದಾಸ ಹೆಜಮಾಡಿ, ಐ.ಐ.ಟಿ ವಿದ್ಯಾರ್ಥಿ ಸುಶಾಂತ್ ಪ್ರಭು, ಪಿ.ಯು.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್ ಪಡೆದ ದೀಕ್ಷಾ ಆರ್., ನೇತ್ರಾ, ಸಾಧಕ ಶ್ರೀನಿವಾಸ ಪೂಜಾರಿ, ಸಹಕಾರಿ ಕಂಪದಗದ್ದೆ ಸುರೇಶ್, ಕೊಣಂದೂರು ಅಬ್ಬಾಸ್ ಇವರುಗಳಿಗೆ ಸನ್ಮಾನ ಸೇರಿದಂತೆ ಅಂತಾರಾಷ್ಟ್ರೀಯ ಕರಾಟೆ ಪಟು ಶ್ರವಣ್, ಶ್ರೇಯನ್ ಮತ್ತು ದೀಕ್ಷಾ ಕೆ.ಆರ್. ಇವರುಗಳಿಗೆ ವಿಶೇಷ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸರ್ವರಿಗೂ ಕಾರ್ಯಕ್ರಮಕ್ಕೆ ಸುಸ್ವಾಗತ
