Categories
ಚಿಕ್ಕಮಗಳೂರು ಶಿವಮೊಗ್ಗ

ಜೋರು ಗಾಳಿ ಮಳೆಗೆ ಸಿಲುಕಿ ನಲುಗುತ್ತಿದೆ ಮಲೆನಾಡು

ಜೋರು ಗಾಳಿ ಮಳೆಗೆ ಸಿಲುಕಿ ನಲುಗುತ್ತಿದೆ ಮಲೆನಾಡು

* ಧರೆಗುರುಳಿದ ಮರಗಳು, ಕರೆಂಟ್ ಇಲ್ಲ ಕತ್ತಲೆಯಲ್ಲಿ ಹಲವು ಗ್ರಾಮಗಳು
* ಉಕ್ಕಿಹರಿಯುತ್ತಿರುವ ನದಿಗಳು,ನೆಟ್ವರ್ಕ್ ಸಮಸ್ಯೆ ಬೇರೆ

NAMMMUR EXPRESS NEWS
ಶಿವಮೊಗ್ಗ/ಚಿಕ್ಕಮಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕಳೆದೆರಡು ದಿನಗಳಿಂದ ಗಾಳಿಯು ಅತೀ ವೇಗವಾಗಿ ಬೀಸಲಾರಂಭಿಸಿದೆ. ಪರಿಣಾಮ ಹಲವೆಡೆ ಮರಗಳು ಧರೆಗುರುಳಿದ್ದು,ವಿದ್ಯುತ್ ಕಂಬಗಳು ತುಂಡಾಗಿ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಳೆದೆರಡು ದಿನಗಳಿಂದ ವಿದ್ಯತ್ ಇಲ್ಲದೇ ಹಲವು ಊರುಗಳು ಕತ್ತಲಲ್ಲಿ ಮುಳುಗಿವೆ.
ಮಲೆನಾಡ ನದಿಗಳಾದ ತುಂಗಾ,ಭದ್ರಾ,ಹೇಮಾವತಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಎದುರಾಗಿದೆ. ನದಿ ತೀರಗಳಲ್ಲಿನ ಜನರಿಗೆ ಮತ್ತು ಸಾರ್ವಜನಿಕರಿಗೆ ನದಿ ತೀರಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ.ಹಲವೆಡೆ ರಸ್ತೆ ಮೇಲೆ ನದಿ ನೀರು ಬಂದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಅತಿಯಾದ ಮಳೆ ಗಾಳಿಯಿಂದ ರೈತರು ಕಂಗಾಲಾಗಿದ್ದು ಕೃಷಿಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದೆ. ಈ ಮಧ್ಯೆ ಅಡಿಕೆ ತೋಟಗಳಿಗೆ ಔಷಧಿ ಸಿಂಪಡಣೆಗೆ ತೊಂದರೆಯಾಗಿದ್ದು,ಮಳೆಯಿಂದ ಅಡಿಕೆಗೆ ಕೊಳೆ ರೋಗ ಭೀತಿ ಹೆಚ್ಚಾಗಿದೆ.
ಹಲವೆಡೆ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು ನೆಟ್ವರ್ಕ್ ಸಿಗದೆ ಜನರು ಪರದಾಡುವಂತಾಗಿದೆ,ನೆಟ್ವರ್ಕ್ ಸಿಕ್ಕರೂ ಕರೆಂಟ್ ಇಲ್ಲದೆ ಮೊಬೈಲ್ ಚಾರ್ಜ್ ಮಾಡಲಾಗದೇ ಯಾರ ಸಂಪರ್ಕವೂ ಸಿಗದೆ ಸಂಕಷ್ಟ ಎದುರಾಗಿದೆ. ಒಟ್ಟಾರೆಯಾಗಿ ಮಲೆನಾಡ ಜನರ ಸ್ಥಿತಿ ಅಕ್ಷರಶಃ ಗಾಳಿ ಮಳೆಗೆ ಸಿಲುಕಿ ನಲುಗಿ ಹೋಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.